CONNECT WITH US  

ದುರ್ಗಮ ಏಕಶಿಲಾ ಬೆಟ್ಟದಿಂದ ಮೃತದೇಹ ತಂದ ಜ್ಯೋತಿರಾಜ್‌

ಮಧುಗಿರಿ: ಮಧುಗಿರಿ ಬೆಟ್ಟದಿಂದ ಆ.15 ರಂದು ಬಿದ್ದು ಮೃತಪಟ್ಟಿದ್ದ ವ್ಯಕ್ತಿಯ ಮೃತ ದೇಹವನ್ನು ತರಲು ಚಿತ್ರದುರ್ಗದ ಜ್ಯೋತಿರಾಜ್‌ ಮತ್ತು ಅವರ ತಂಡ ಯಶಸ್ವಿಯಾಗಿದೆ.

ಮಧುಗಿರಿಏಕಶಿಲಾ ಬೆಟ್ಟದಿಂದ ಬಿದ್ದು ಮೃತಪಟ್ಟಿದ್ದ ತುಂಗೋಟಿ ಗ್ರಾಮದ ಹನುಮಂತರಾಯಪ್ಪ (45) ಮೃತ ದುದೆ„ìವಿ. ಈತ ಸ್ವಾತಂತ್ರೊತ್ಸವದಂದು ಬೆಟ್ಟವೇರಿದ್ದು, ತುದಿಯಿಂದ ಬಿದ್ದಿದ್ದಾನೆ. ಆದರೆ ಈ ಸಾವು ಆತ್ಮಹತ್ಯೆಯೋ ಅಥವಾ ಆಕಸ್ಮಿಕವೋ ಎಂಬುದು ವಿಚಾರಣೆಯಿಂದ ತಿಳಿಯಬೇಕಿದೆ. 

ಕಾರ್ಯಚರಣೆ ಹೇಗೆ: ಆ.15 ರಂದೇ ಮೃತದೇಹ ಮೇಲೆತ್ತಲು ಜ್ಯೋತಿರಾಜ್‌ ಚಿತ್ರದುರ್ಗದಿಂದ ತನ್ನ ಹುಟ್ಟುಹಬ್ಬವನ್ನು ತೊರೆದು ತಂಡದೊಂದಿಗೆ ಆಗಮಿಸಿದ್ದರು. ರಾತ್ರಿಯೇ ಕಾರ್ಯಾಚರಣೆ ಮಾಡುವ ಇಚ್ಛೆ ವ್ಯಕ್ತಪಡಿಸಿದರೂ ಉಪವಿಭಾಗಾಧಿಕಾರಿ ಡಾ.ವೆಂಕಟೇಶಯ್ಯ ಜಡಿ ಮಳೆಯ ಕಾರಣದಿಂದ ಅನುಮತಿ ನಿರಾಕರಿಸಿ ಗುರುವಾರ ಬೆಳಗ್ಗೆ ನಡೆಸುವಂತೆ ತಿಳಿಸಿದ್ದರು. 

ಪ್ರವಾಸಿ ಮಂದಿರದಲ್ಲಿ ತಂಗಿದ್ದು, ಬೆಳಗ್ಗೆ 6 ಗಂಟೆಗೆ ತಂಡದೊಂದಿಗೆ ತೆರಳಿ ಬೆಟ್ಟವನ್ನೇರಿದರು. ಮೇಲಾºಗಕ್ಕೆ ಜ್ಯೋತಿರಾಜ್‌ ತಂಡದ ಜೊತೆ ಕೆಲವು ಪೊಲೀಸರು ಹಾಗೂ ಸ್ನೇಹಿತರು, ಬೆಟ್ಟದ ಮಧ್ಯಭಾಗಕ್ಕೆ ಪೊಲೀಸರ ತಂಡದ ಜೊತೆ ಮಾಧ್ಯಮದವರು ತೆರಳಿದರು. ಸತತ 2 ಗಂಟೆಯ ನಂತರ ಕಾರ್ಯಾಚರಣೆ ಆರಂಭಿಸಿದ ಜ್ಯೋತಿರಾಜ್‌, ಸ್ನೇಹಿತ ಬಸವರಾಜು ಜೊತೆ 9.30 ಕ್ಕೆ ಸುಮಾರು 600 ಅಡಿಯಷ್ಟು ಬೆಟ್ಟವನ್ನು ಹಗ್ಗದ ಸಹಾಯದಿಂದ ಇಳಿದು ಮೃತದೇಹ ಇರುವ ಸ್ಥಳಕ್ಕೆ ಆಗಮಿಸಿದರು. ನಂತರ ಅದೇ ಹಗ್ಗದಿಂದ  ಸುಮಾರು 20 ಜನರು ಸೇರಿ ಮೃತದೇಹವನ್ನು ಮೇಲೆತ್ತಿದರು.

ಯುವಕರ ಹರ್ಷೋದ್ಘಾರ: ಮೃತದೇಹ ನೋಡುವುದಕ್ಕಿಂತ ಇಂತಹ ಸಾಹಸ ಮಾಡಿದ ಜ್ಯೋತಿರಾಜ್‌ರನ್ನು ನೋಡಲು ಸಾವಿರಾರು ಯುವಕರು ನೆರೆದಿದ್ದರು. ನಂತರ ಮಾತನಾಡಿದ ಜ್ಯೋತಿರಾಜ್‌, ಮಧುಗಿರಿ ಬೆಟ್ಟ 650 ಅಡಿಗಳಷ್ಟು ಮಾತ್ರ ಇಳಿದು ಮೃತದೇಹ ತರಲು ತಂದಿದ್ದೇವೆ. ನಾನು ಕನ್ನಡಿಗ ನನಗೆ ಜಾತಿಯಿಲ್ಲ. ಸತ್ತಿರುವ ಮೃತದೇಹ ತರಲು ನಾನು ಇಲ್ಲಿಗೆ ಬಂದಿಲ್ಲ. ಆದರೆ ಒಂದು ಮಾನವೀಯ ಕಾರ್ಯವನ್ನು ಮಾಡಲು ಬಂದಿದ್ದೇನೆ. ಯಾರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಬದುಕಿದ್ದು, ಏನಾದರೂ ಸಾ ಧಿಸೋಣ ಎಂದರು.

ನಾನು ನಿಮ್ಮವನು ಎಂದು ತಿಳಿದು, ನಾನು ಸತ್ತಾಗ ಒಂದು ಹಿಡಿ ಮಣ್ಣು ಹಾಕಿ ಸಾಕು ಎಂದಾಗ ಜನರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿ, ಸೆಲ್ಫಿಗಾಗಿ ಮುಗಿಬಿದ್ದರು. ಜ್ಯೋತಿರಾಜ್‌ ಮೆಚ್ಚುಗೆಗೆ ಪಾತ್ರನಾದ ಸ್ಥಳೀಯ ಜಬೀ ಎಂಬ ಯುವಕನನ್ನು ಮನಸಾರೆ ಹೊಗಳಿದ ಜ್ಯೋತಿರಾಜ್‌, ನನ್ನಂತೆ ಜಬೀ ಕೂಡ ಕಷ್ಟಪಟ್ಟಿದ್ದಾನೆ. ಅವನಿಗೆ ಇಲ್ಲಿ ಎಲ್ಲರೂ ಸಹಾಯ ಮಾಡಬೇಕು. ಅವರಿಗೆ ಪಡಿತರ ಕಾರ್ಡ್‌ ಸಹ ಇಲ್ಲವಾಗಿದ್ದು, ಅದನ್ನು ಕೊಡಿಸುವಂತೆ ಕೋರಿದರು.

ತಂಡದಲ್ಲಿ ಜ್ಯೋತಿರಾಜ್‌ ಸ್ನೇಹಿತರಾದ, ಬಸವರಾಜು, ಜಬೀ, ಅರ್ಜುನ್‌, ಮದನ್‌, ನಿಕಿತ್‌, ಪವನ್‌, ಡಿವೈಎಸ್ಪಿ ಕಲ್ಲೇಶಪ್ಪ, ಪಿಎಸೆ„ ಪಾಲಾಕ್ಷಪ್ರಭು, ಪೇದೆಗಳಾದ ಮಲ್ಲಿಕಾರ್ಜುನ್‌, ಪುರುಷೋತ್ತಮ್‌, ಅಗ್ನಿಶಾಮಕ ದಳದ ಕಾಂತರಾಜ್‌ ಹಾಗೂ ತಂಡ, ಅರಣ್ಯಾಧಿಕಾರಿ ಚಿನ್ನಪ್ಪ, ಮುತ್ತುರಾಜ್‌, ಯುವಕರಾದ ಜಬೀ, ಆನಂದ್‌, ತಿಪ್ಪೇಸ್ವಾಮಿ, ಹಾಗೂ ನೂರಾರು ಯುವಕರು ಜೊತೆಗಿದ್ದು ಸಹಾಯ ಮಾಡಿದ್ದು, ಸಾವಿರಾರು ಮಂದಿ ಸೇರಿದ್ದರು.

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top