CONNECT WITH US  

ಎಚ್‌ಎಎಲ್‌ ಘಟಕಕ್ಕೆ ಜಿಲ್ಲಾಧಿಕಾರಿಯಿಂದ ಅನಗತ್ಯ ಗೊಂದಲ

ತುಮಕೂರು: ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್‌ನಲ್ಲಿ ಉದ್ದೇಶಿತ ಎಚ್‌ಎಎಲ್‌ ಲಘು ಹೆಲಿಕಾಪ್ಟರ್‌ ನಿರ್ಮಾಣ ಘಟಕ ಆರಂಭಿಸುವ ಹಿನ್ನೆಲೆಯಲ್ಲಿ ಭೂಮಿ ನೀಡುವ ಸಂಬಂಧ ಜಿಲ್ಲಾಧಿಕಾರಿಗಳು ಅನಗತ್ಯ ಗೊಂದಲಗಳನ್ನು ಸೃಷ್ಟಿಸಿ ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದು ಎಚ್‌ಎಎಲ್‌ ಸ್ಮಾರ್ಟ್‌ ವಿಲೇಜ್‌ ವಿಜನ್‌ ಗ್ರೂಫ್ನ ಸಂಚಾಲಕ ಕುಂದರನಹಳ್ಳಿ ರಮೇಶ್‌ ಆರೋಪಿಸಿದರು.

ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದಿನ ಯುಪಿಎ ಸರ್ಕಾರ ಕರ್ನಾಟಕದ ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಬಿದರೆಹಳ್ಳ ಕಾವಲ್‌ನಲ್ಲಿ ಎಚ್‌ಎಎಲ್‌ನ ಲಘು ಹೆಲಿಕಾಪ್ಟರ್‌ ನಿರ್ಮಾಣ ಘಟಕ ಸ್ಥಾಪಿಸಲು ಯೋಜನೆ ರೂಪಿಸಿತ್ತು. ಅದರಲ್ಲಿ ಕಳೆದ ನವಂಬರ್‌ನಲ್ಲಿ ಸುಮಾರು 610 ಎಕರೆ ಭೂಮಿ ಮಂಜೂರು ಮಾಡಿ ಪಹಣಿ ಹಸ್ತಾಂತರ ಮಾಡಿತ್ತೇ ವಿನಹಃ, ಭೂಮಿ ಹದ್ದು ಬಸ್ತು ಗುರುತಿಸಿ, ಸ್ಕೆಚ್‌ ಕಾಪಿ ನೀಡಿರಲಿಲ್ಲ. ಇದರಿಂದಾಗಿ ಕಳೆದ 7 ತಿಂಗಳಿನಿಂದ ಯಾವುದೇ ಕೆಲಸ ಕಾರ್ಯಗಳು ನಡೆದಿರಲಿಲ್ಲ ಎಂದರು.

ಇದರಿಂದ ಕೇಂದ್ರದ ಗೃಹ ಸಚಿವರಾದ ಮನೋಹರ್‌ ಪಾರಿಕ್ಕರ್‌ ಸದರಿ ಎಚ್‌ಎಎಲ್‌ ಘಟಕವನ್ನು ಗೋವಾ ರಾಜ್ಯದಲ್ಲಿ ಆರಂಭಿಸಲು ಭೂಮಿ ಹುಡುಕಾಟ ಆರಂಭಿಸಿದ್ದು. ಈ ಬಗ್ಗೆ ಎಚ್‌ಎಎಲ್‌ ಸ್ಮಾರ್ಟ್‌ ವಿಲೇಜ್‌ ವಿಜØನ್‌ ಗ್ರೂಫ್ ಜಿಲ್ಲಾಧಿಕಾರಿಗಳು, ಮುಖ್ಯಮಂತ್ರಿಗಳು, ಸರ್ಕಾರದ ಅಧೀನ ಕಾರ್ಯದರ್ಶಿಗಳು ಹಾಗೂ ಕೈಗಾರಿಕೆ ಮತ್ತು ಮೂಲಭೂತ ಸೌಕರ್ಯ ಇಲಾಖೆಯ ಕಾರ್ಯದರ್ಶಿಗಳ ಗಮನ ಸೆಳೆದ ಹಿನ್ನೆಲೆಯಲ್ಲಿ ಮೇ 18 ರಂದು ನಡೆದ ಸಭೆಯಲ್ಲಿ ಸ್ಕೆಚ್‌ ಕಾಪಿ ನೀಡುವ ಮೂಲಕ ಅನಗತ್ಯ ವಿಳಂಬಕ್ಕೆ ಕಾರಣವಾಗಿದ್ದಾರೆ ಎಂದು ದೂರಿದರು.

ಮಲತಾಯಿ ಧೋರಣೆ: ರಾಜ್ಯದಿಂದ ಎಚ್‌ಎಎಲ್‌ ಘಟಕ ಕೈತಪ್ಪುತ್ತದೆ ಎಂಬುದನ್ನು ಅರಿತ ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ಕಾರ್ಯದರ್ಶಿಗಳು ತುರ್ತು ಗಮನಹರಿಸಿ ಕೇಂದ್ರ ಸರ್ಕಾರ ಶೀಘ್ರ ಘಟಕ ಆರಂಭಕ್ಕೆ ಶಂಕುಸ್ಥಾಪನೆ ನೆರವೇರಿಸುವಂತೆ ಪತ್ರ ಬರೆದಿದೆ. ಇದಕ್ಕಾಗಿ ರಾಜ್ಯ ಸರ್ಕಾರವನ್ನು ಅಭಿನಂದಿಸುತ್ತೇನೆಂದರು. ಪತ್ರಿಕಾಗೋಷ್ಠಿಯಲ್ಲಿ ಎಚ್‌ಎಎಲ್‌ ಸ್ಮಾರ್ಟ್‌ ವಿಲೇಜ್‌ ಗ್ರೂಫ್ನ ವಿಶ್ವನಾಥ್‌, ಉಮೇಶ್‌, ಫ‌ಣೀಂದ್ರ, ಪ್ರಕಾಶ್‌ ಭಾರದ್ವಾಜ್‌ ಉಪಸ್ಥಿತರಿದ್ದರು.

ಸಂಸದರು ಧ್ವನಿ ಎತ್ತಲಿ...
ಕೇಂದ್ರ ಸರ್ಕಾರ ಸದರಿ ಘಟಕವನ್ನು ಗೋವಾದಲ್ಲಿ ತೆರೆಯಲು ಭೂಮಿ ಹುಡುಕಾಟ ಆರಂಭಿಸಿದೆ. ಕೇಂದ್ರದ ರಕ್ಷಣಾ ಸಚಿವರಾದ ಮನೋಹರ್‌ ಪಾರಿಕ್ಕರ್‌ ಅವರು ಎಚ್‌ಎಎಲ್‌ ಘಟಕವನ್ನು ಗೋವಾದಲ್ಲಿ ಸ್ಥಾಪಿಸುವುದಾಗಿ ಹೇಳುತ್ತಿದ್ದಾರೆ. ಕೂಡಲೇ ಈ ಪ್ರಯತ್ನದಿಂದ ಹಿಂದೆ ಸರಿಯಬೇಕು. ಈ ಬಗ್ಗೆ ಕೇಂದ್ರದ ಮಂತ್ರಿಗಳಾಗಿರುವ ಕರ್ನಾಟಕದ ಸಂಸದರು ಬಾಯಿ ಮುಚ್ಚಿ ಕುಳಿತಿರುವುದು ಸರಿಯಲ್ಲ. ಕೂಡಲೇ ಮನವರಿಕೆ ಮಾಡಿಕೊಟ್ಟು ಯೋಜನೆ ರಾಜ್ಯದಿಂದ ಬೇರೆಡೆಗೆ ಸ್ಥಳಾಂತರವಾಗದಂತೆ ಎಚ್ಚರಿಕೆ ವಹಿಸಬೇಕೆಂದು ಎಚ್‌ಎಎಲ್‌ ಸ್ಮಾರ್ಟ್‌ ವಿಲೇಜ್‌ ವಿಜØನ್‌ ಗ್ರೂಫ್ನ ಸಂಚಾಲಕ ಕುಂದರನಹಳ್ಳಿ ರಮೇಶ್‌ ಮನವಿ ಮಾಡಿದರು.

Trending videos

Back to Top