CONNECT WITH US  

ಹುಡ್ಗಿರಿಗೆ ಒಳ್ಳೇ ಕೆಲಸ ಬೇಕು,ಹುಡುಗ್ರಿಗೆ ಹೆಚ್ಚು ಸಂಬಳ ಬೇಕು!

ಏನೋ.. ಕೆಲ್ಸ ಸಿಕ್ತಾ? ಎಷ್ಟೋ ಸಂಬಳ..? ಹುಡುಗ್ರ ಪ್ರಶ್ನೆ. ಏನೇ ಕೆಲ್ಸ ಸಿಗ್ತಾ..? ಎಲ್ಲಾ ಫ್ರೆಂಡ್ಲಿ ಇದ್ದಾರಾ? ಹುಡುಗೀರ ಪ್ರಶ್ನೆ! ಇದು ನಿಜ ನಿಜ..ಹುಡುಗೀರು ಹೆಚ್ಚಾಗಿ ಒಳ್ಳೇ ಕೆಲಸ ನೋಡಿದ್ರೆ, ಹುಡುಗರು ಹೆಚ್ಚಾಗಿ ಹೆಚ್ಚು ಸಂಬಳದ ಕೆಲಸಕ್ಕೆ ಆದ್ಯತೆ ನೀಡ್ತಾರೆ ಅಂತ ಹೊಸ ಸಮೀಕ್ಷೆಯೊಂದು ಹೇಳಿದೆ. ಬ್ರಿಟನ್‌ನ ಆಕ್ಸ್‌ಫೋರ್ಡ್‌ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಈ ಸಮಕ್ಷೆ ನಡೆಸಿದ್ದು, ಹುಡುಗೀರು ಹೆಚ್ಚಾಗಿ ಬದುಕು ರೂಪಿಸಿಕೊಳ್ಳುವ, ಉದ್ಯೋಗ ಭದ್ರತೆ ಇರುವ, ಈ ಕೆಲಸದಲ್ಲಿ ಹೆಚ್ಚು ಕಿರಿಕ್‌ ಇಲ್ಲದೇ
ಚೆನ್ನಾಗಿ ಜೀವನ ನಡೆಸಬಹುದು ಎನ್ನುವ ಕೆಲಸಕ್ಕೆ ಹೆಚ್ಚು ಆದ್ಯತೆ ಕೊಡುತ್ತಾರಂತೆ. ಆದರೆ ಹುಡುಗರು ಕಡಿಮೆ ಸಂಬಳ ಎಂದ ಕೂಡಲೇ ಅನ್ಯಮನಸ್ಕರಾಗುತ್ತಾರಂತೆ. ಸಂಬಳದ ಎದುರು ಅವರಿಗೆ ಬೇರೆಲ್ಲ ವಿಷಯಗಳನ್ನು ಗಣನೆಗೇ ತೆಗೆದುಕೊಳ್ಳಲ್ವಂತೆ. ಒಂದು ವೇಳೆ ಸಂಬಳ ಕಡಿಮೆ ಆಗುತ್ತೆ, ಸಾಕಾಗಲ್ಲ ಅಂದರೆ ಕೂಡಲೇ ಇನ್ನೊಂದೆಡೆ ಕೆಲಸಕ್ಕೆ ಹೋಗಲೂ ಸಿದ್ಧವಾಗಿರುತ್ತಾರಂತೆ. ಸಮೀಕ್ಷೆ ಪ್ರಕಾರ ಉದ್ಯೋಗ ವಿಚಾರದಲ್ಲಿ ಹುಡುಗೀರು ಸ್ವಯಂ ಚೌಕಟ್ಟನ್ನು
ಹಾಕಿಕೊಂಡಿರುತ್ತಾರೆ ಎಂದು ಹೇಳಿದೆ. 

ಫ‌ಲಿತಗಳು...
* ಉದ್ಯೋಗದಲ್ಲಿ ಸಂಬಳಕ್ಕೇ ಹೆಚ್ಚು ಆದ್ಯತೆ ನೀಡುವ ಹುಡುಗರು

*ಉದ್ಯೋಗ ಭದ್ರತೆ, ಬದುಕು ರೂಪಿಸಿಕೊಳ್ಳುವ ಕೆಲಸಕ್ಕೆ ಹುಡುಗೀರ ಆದ್ಯತೆ

* ಉದ್ಯೋಗ ವಿಚಾರದಲ್ಲಿ ಸ್ವಯಂ ಚೌಕಟ್ಟು ಹಾಕಿಕೊಳ್ಳುವ ಹುಡುಗಿಯರು

Trending videos

Back to Top