CONNECT WITH US  

ಅಂದಕ್ಕಿಂತಲೂ ವ್ಯಕ್ತಿತ್ವಕ್ಕೆ ಮನಸೋಲ್ತಾರೆ ಹುಡ್ಗಿರು!

ಹುಡುಗ ನೋಡೋದಿಕ್ಕೆ ಸುರಸುಂದರಾಂಗ, ಆದ್ರೆ ಟ್ಯಾಲೆಂಟು, ಸ್ಮಾರ್ಟು ಅಂತ ಏನಿಲ್ಲ ಅಂದ್ರೆ ಅಷ್ಟೇ! ಹುಡ್ಗಿರು ಅಂತಹವರನ್ನು ಇಷ್ಟ ಪಡೋದಿಲ್ಲ ಅಂತ ಇದೀಗ ಗೊತ್ತಾಗಿದೆ. ಬರೀ ಸುರಸುಂದರಾಂಗ ಆದ್ರೆ ಸಾಕು ಅಂತ ಯಾವ ಹುಡ್ಗಿಯೂ ಹೇಳಲ್ಲ ಅಂತ ಸಮೀಕ್ಷೆ ಹೇಳಿದೆ. ಹುಡುಗ ಅಂದ್ರೆ ಸಖತ್‌ ಸ್ಮಾರ್ಟು, ಬುದ್ಧಿವಂತನಿರಬೇಕು. ಸದಾ ಜೋಕ್‌ ಮಾಡ್ತಾ, ಕಷ್ಟ ಸುಖ ಹಂಚಿಕೊಳ್ಳುವವನಾಗಿರಬೇಕು. ಅಂತಹ ಹುಡ್ಗ ಅಂದ್ರೆ ತುಂಬಾ ತುಂಬಾ ಇಷ್ಟ ಆಗುತ್ತೆ.. ಲವ್ವು ಕೂಡ ಆಗುತ್ತೆ ಅಂತ ಹುಡ್ಗಿರು ನಾಚ್ಕೊಂಡು ಹೇಳಿದ್ದಾರಂತೆ. ಹುಡುಗರು ಸ್ಮಾಟ್‌, ಆಕರ್ಷಕ ವ್ಯಕ್ತಿತ್ವ ಇದ್ದಷ್ಟೂ ಹುಡುಗಿಯರ ಮನಸ್ಸಿನಲ್ಲಿ ಪ್ರೇಮದ ಭಾವನೆ ಹೆಚ್ಚಾಗುವುದನ್ನು ಸಮೀಕ್ಷೆ ಗುರುತಿಸಿದೆ. ಸ್ಕಾಟ್ಲೆಂಡ್‌ನ‌ ಅಬೆರ್ಟೆ ವಿಶ್ವವಿದ್ಯಾಲಯದ ಸಮೀಕ್ಷಕರ ತಂಡ ಈ ಸಮೀಕ್ಷೆ ನಡೆಸಿದೆ. ಹುಡುಗೀರ ವಿಚಾರಕ್ಕೆ ಬಂದರೆ, ಹುಡುಗರು, ಹುಡುಗಿಯರ
ಬುದ್ಧಿವಂತಿಕೆ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲವಂತೆ. ಅಂದ-ಚಂದಕ್ಕೆ ಬೇಗನೆ ಫಿದಾ ಆಗುತ್ತಾರೆ. ಆದರೆ ಎಲ್ಲಾ ಹುಡುಗರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗಲು ಸಾಧ್ಯವಿಲ್ಲ ಕೆಲವರು ಆಕರ್ಷಕ ವ್ಯಕ್ತಿತ್ವದ ಹುಡುಗಿಯರನ್ನೂ ಬಯಸುತ್ತಾರೆ ಅಂತ ಸಮೀಕ್ಷೆ ಹೇಳಿದೆ. 

ಫ‌ಲಿತಗಳು...
*ಹುಡುಗ ಅಂದ್ರೆ ಸಖತ್‌ ಸ್ಮಾರ್ಟು, ಬುದ್ಧಿವಂತನಿರಬೇಕು..ಹುಡುಗೀರ ಆಸೆ

*ಆಕರ್ಷಕ ವ್ಯಕ್ತಿತ್ವ ಇದ್ದಷ್ಟೂ ಹುಡುಗಿಯರ ಮನಸ್ಸಿನಲ್ಲಿ ಪ್ರೇಮದ ಭಾವನೆ ಹೆಚ್ಚಂತೆ

* ಹುಡುಗರು, ಹುಡುಗಿಯರ ಬುದ್ಧಿವಂತಿಕೆ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಲ್ಲ!

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top