CONNECT WITH US  

ಕಿತ್ತಳೆ ಬಣ್ಣದ ಕೂಲಿಂಗ್‌ ಗ್ಲಾಸ್‌ ಧರಿಸಿದರೆ ಗಡದ್ದು ನಿದ್ದೆ!

ನಿದ್ದೆಗೂ ಕನ್ನಡಕಕ್ಕೂ ಏನು ಸಂಬಂಧ ಪ್ರಶ್ನೆ ಸಹಜ. ಆದರೆ, ಇಲ್ಲೊಂದು ವಿಶೇಷವಿದೆ. ನಿದ್ದೆ ಮಾಡುವುದಕ್ಕೂ ಮುನ್ನ ಕೆಲ ಹೊತ್ತು ಕಿತ್ತಳೆ ಬಣ್ಣದ ಕೂಲಿಂಗ್‌ ಗ್ಲಾಸ್‌ ಧರಿಸಿದರೆ ಭಾರೀ ನಿದ್ದೆ ಬರುತ್ತದೆ ಎಂದು ಸಮೀಕ್ಷೆಯೊಂದು ಹೇಳಿದೆ.

ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ನಿದ್ದೆಗೂ ಮುನ್ನ ಟೀವಿ ನೋಡುವುದು, ದೀಪದ ಬೆಳಕಿನಲ್ಲಿ ಓದುವುದೋ, ಇನ್ನಿತರ ಮನೆಕೆಲಸ ಮಾಡಿರುತ್ತೇವೆ. ದೀಪ ಉರಿಸಿದ ಅಥವಾ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಉಪಯೋಗಿಸಿದ ಸಂದರ್ಭಗಳಲ್ಲಿ ಅದರಿಂದ ಸೂಕ್ಷ್ಮ ತರಂಗಗಳು ಹೊರಸೂಸುತ್ತವೆ. ಇದು ನಿದ್ದೆ ಬೇಗನೆ ಬರಲು ಬಿಡುವುದಿಲ್ಲ. ಆದರೆ ಕಿತ್ತಳೆ ಬಣ್ಣದ ಕೂಲಿಂಗ್‌ ಗ್ಲಾಸ್‌ ಧರಿಸುವುದರಿಂದ ಈ ತರಂಗಗಳನ್ನು ತಡೆಯುತ್ತದೆ. ಅಲ್ಲದೇ ಮನುಷ್ಯರನ್ನು ನಿದ್ದೆಗೆ ನೂಕುವ ಮೆಲೊಟನಿನ್‌ ಹಾರ್ಮೋನ್‌ ಹೆಚ್ಚು ಉತ್ಪಾದನೆಗೆ ಸಹಾಯ ಮಾಡುತ್ತದೆ ಎಂದು ಗೊತ್ತಾಗಿದೆ.

ಸಂಶೋಧನೆಯಲ್ಲಿ ಗಂಟೆ ಗಟ್ಟಲೆ ಟೀವಿ ನೋಡಿದ ಹುಡುಗರಿಗೆ ಕಿತ್ತಳೆ ಬಣ್ಣದ ಕೂಲಿಂಗ್‌ ಗ್ಲಾಸ್‌ ಹಾಕಿಕೊಳ್ಳಲು ಹೇಳಲಾಗಿದೆ. ಅದಾಗಿ ಕೆಲವೇ ಹೊತ್ತಿಗೆ ಅವರೆಲ್ಲ ಮಲಗಿದ ಕೂಡಲೇ ನಿದ್ದೆಗೆ ಶರಣಾಗಿದ್ದಾರೆ. ಆದರೆ ಇಂತಹ ಕೂಲಿಂಗ್‌ ಗ್ಲಾಸ್‌ ಹಾಕದವರಿಗೆ ಅಷ್ಟು ಬೇಗನೆ ನಿದ್ದೆ ಬಂದಿಲ್ಲ ಎಂದು ಸಮೀಕ್ಷೆ ಹೇಳಿದೆ.

ಫ‌ಲಿತಗಳು...

 ನಿದ್ದೆ ಬೇಗನೆ ಬರಬೇಕಾದರೆ ಕಿತ್ತಳೆ ಬಣ್ಣದ ಕೂಲಿಂಗ್‌ ಗ್ಲಾಸ್‌ ಹಾಕಿ!

ಎಲೆಕ್ಟ್ರಾನಿಕ್‌ ವಸ್ತುಗಳಿಂದ ಹೊರಸೂಸುವ ತರಂಗಗಳಿಂದ ನಿದ್ರಾ ಭಂಗ

 ಕಿತ್ತಳೆ ಬಣ್ಣದ ಕೂಲಿಂಗ್‌ಗ್ಲಾಸ್‌ನಿಂದ ಮೆಲೊಟನಿನ್‌ ಹಾರ್ಮೋನ್‌ ಹೆಚ್ಚಳ, ನಿದ್ದೆಗೆ ಪೂರಕ

Trending videos

Back to Top