CONNECT WITH US  

ಕಲಿತದ್ದು ನೆನಪಿರಬೇಕಾದರೆಸುಖವಾದ ನಿದ್ದೆ ಬೇಕೇ ಬೇಕು!

ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ನಿದ್ದೆ ಜೋರು, ಪುಸ್ತಕ ತೆರೆದರೆ ಸಾಕು ತೂಕಡಿಕೆ ಆರಂಭ. ಆದರೆ ಅದಕ್ಕೂ ಈ ಸಮೀಕ್ಷೆಗೂ ಸಂಬಂಧ ಇಲ್ಲ ಬಿಡಿ. ಅದಕ್ಕೂ ಹೆಚ್ಚಿಗೆ ಕಲಿತದ್ದು ನೆನಪಿರಬೇಕಾದರೆ, ಸುಖವಾದ ನಿದ್ದೆ ಅವಶ್ಯ ಎಂದು ಸಮೀಕ್ಷೆಯೊಂದರಲ್ಲಿ ಗೊತ್ತಾಗಿದೆ.

ಬ್ರಿಟನ್‌ ಮೂಲದ ಎಕ್ಸಟೆರ್‌ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಈ ಸಮೀಕ್ಷೆ ನಡೆಸಿದ್ದು, ಸುಖವಾದ ನಿದ್ದೆ ನೆನಪಿನ ಶಕ್ತಿಯನ್ನು ಬಲಗೊಳಿಸುತ್ತದೆ. ನಿದ್ದೆಯ ನಂತರ ಅದಕ್ಕೂ ಮೊದಲು ಕಲಿತದ್ದು ಮೆದುಳಿನಲ್ಲಿ ದಾಖಲಾಗಲು ನೆರವಾಗುತ್ತದೆ ಎಂದು ಹೇಳಿದ್ದಾರೆ. ಉತ್ತಮ ನಿದ್ದೆ ನೆನಪಿರುವ ಸಾಧ್ಯತೆಯನ್ನು ದ್ವಿಗುಣಗೊಳಿಸುತ್ತದೆ.

ಕಲಿಕೆಯ ಬಳಿಕ ಒಂದು ರಾತ್ರಿಯ ಉತ್ತಮ ನಿದ್ದೆ ಮೆದುಳನ್ನು ಉಲ್ಲಸಿತವನ್ನಾಗಿಸುತ್ತದೆ. ಇದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ ಎಂದ ಹೇಳಲಾಗಿದೆ. ಸಮೀಕ್ಷೆ ವೇಳೆ ಕೆಲವು ಮಂದಿಗೆ ಕಾದಂಬರಿಯೊಂದನ್ನು ಓದಲು ಹೇಳಿದ್ದಾರೆ. ಇದರಲ್ಲಿ ಕೆಲವರಿಗೆ ಓದಿನ ಬಳಿಕ ಸುಖವಾಗಿ ಮಲಗಲು ಹೇಳಿದ್ದರೆ, ಇನ್ನು ಕೆಲವರಿಗೆ ಹೇಳಿಲ್ಲ. ಅದರಂತೆ ಸುಖವಾಗಿ ನಿದ್ದೆ ಮಾಡಿದವರಿಗೆ ಅದರಲ್ಲಿ ಬರೆದ ಹಲವು ಪದಗಳು ನೆನಪಿದ್ದವು. ನಿದ್ದೆ ಮಾಡದವರಿಗೆ ಈ ಅಂಶ ಕಡಿಮೆಯಿತ್ತು ಎಂದು ಗೊತ್ತಾಗಿದೆ.

ಫ‌ಲಿತಗಳು...
 ಒಂದು ರಾತ್ರಿ ಸೂಪರ್‌ ನಿದ್ದೆ, ನೆನಪಿನ ಶಕ್ತಿಗೆ ಮದ್ದು!

 ಉತ್ತಮ ನಿದ್ದೆಯಿಂದ ನೆನಪಿನ ಸಾಧ್ಯತೆಗಳು ದ್ವಿಗುಣ

 ನಿದ್ದೆಯಿಂದ ಮೆದುಳಿಗೆ ಉಲ್ಲಾಸ. ಇದರಿಂದ ನೆನಪಿನ ಶಕ್ತಿ ವೃದ್ಧಿ, ಕಲಿಕೆಗೆ ಪ್ರಯೋಜನ

 ಸುಖವಾದ ನಿದ್ದೆ ಇಲ್ಲದಿದ್ದರೆ, ಮೆದುಳಿಗೆ ಒತ್ತಡ

Trending videos

Back to Top