CONNECT WITH US  

ಐದನೇ ದಿನದ ಗಜವದನಿಗೆ ವಿದಾಯ

ಧಾರವಾಡ: ಭಾದ್ರಪದ ಶುಕ್ಲ ಚೌತಿಯಂದು ಭಕ್ತರ ಮನೆ-ಮನದಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಗಜವದನಿಗೆ ಐದನೇ ದಿನ ಸೋಮವಾರ ರಾತ್ರಿ ಭಕ್ತಿ ಪೂರ್ವಕವಾಗಿ ವಿದಾಯ ಹೇಳಲಾಯಿತು. ಹೆಚ್ಚಾಗಿ ಮನೆಯಲ್ಲಿ ಪ್ರತಿಷ್ಠಾಪನೆಗೊಳಿಸಿದ ಗಜವದನ ಮೂರ್ತಿಗಳನ್ನು ಸಮೀಪದ ಕೆರೆ-ಬಾವಿಗಳಲ್ಲಿ ವಿಸರ್ಜಿಸಿದರು.

ಅಲ್ಲದೇ ಶಾಲಾ-ಕಾಲೇಜು, ಕಚೇರಿಗಳಲ್ಲೂ ಸ್ಥಾಪಿಸಿದ್ದ ಗಣೇಶನಿಗೆ ಸಂಭ್ರಮದಿಂದ ವಿದಾಯ ಹೇಳಲಾಯಿತು. ಜೆಎಸ್‌ಎಸ್‌ ಕಾಲೇಜಿನಲ್ಲಿ ನಡೆದ ಗಣೇಶ ವಿಸರ್ಜನೆಯಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಗಣೇಶನಿಗೆ ಜಯಘೋಷ ಹಾಕಿ ಸಂಭ್ರಮದಿಂದ ಗಣೇಶನ ವಿಸರ್ಜನೆ ನೆರವೇರಿಸಿದರು.

ಗಜಾನನ ಉತ್ಸವ ಸಮಿತಿಗಳು ಸ್ಥಾಪಿಸಿದ 20 ಕ್ಕೂ ಹೆಚ್ಚು ಸಾರ್ವಜನಿಕ ಗಣಪತಿಗಳನ್ನು ವಿಸರ್ಜಿಸಲಾಯಿತು. ವಿಸರ್ಜನೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ
ಬಿಗಿ ಪೋಲೀಸ್‌ ಬಂದೋಬಸ್ತ್ ಮಾಡಲಾಗಿತ್ತು.

ಗಜವದನ ವಿಸರ್ಜನೆ ಮಧ್ಯರಾತ್ರಿವರೆಗೂ ನಡೆದೇ ಇತ್ತು. ಮಹಾನಗರ ಪಾಲಿಕೆಯ 3ರಿಂದ 10ನೇ ವಾರ್ಡ್‌ ವ್ಯಾಪ್ತಿಯಲ್ಲಿರುವ ಐತಿಹಾಸಿಕ ಬಾವಿಗಳಾದ ಹೊಸಯಲ್ಲಾಪುರದ ನುಚ್ಚಂಬ್ಲಿ ಬಾವಿ ಸೇರಿದಂತೆ ವಿವಿಧ ಬಾವಿಗಳಲ್ಲಿ ಗಜವದನ ವಿಸರ್ಜನೆ ನಡೆದವು

Trending videos

Back to Top