CONNECT WITH US  

ಚಿಕನ್‌ ಮಂಚೂರಿ

ಬೇಕಾಗಿರುವ ಸಾಮಾಗ್ರಿಗಳು: ಮೂಳೆ ರಹಿತ ಚಿಕನ್‌ - 1/2 ಕೆ.ಜಿ., ಸಂಸ್ಕರಿತ ಗೋಧಿ ಹಿಟ್ಟು - 1/2 ಟೀ ಚಮಚ, ಸೋಯಾ ಸಾಸ್‌ - 1/2 ಟೀ ಚಮಚ, ಹಸಿ ಮೆಣಸಿನ ಕಾಯಿ ಸಾಸ್‌ - 1/2 ಟೀ ಚಮಚ, ಟೊಮ್ಯಾಟೋ ಕೆಚಪ್‌ - 1/2 ಟೇಬಲ್‌ ಚಮಚ, ಚೆನ್ನಾಗಿ ಕತ್ತರಿಸಿಕೊಂಡಿರುವ ನೀರುಳ್ಳಿ - 2, ಕತ್ತರಿಸಿರುವ ಬೆಳ್ಳುಳ್ಳಿ - 10 ಸೊಳೆಗಳು, ಕತ್ತರಿಸಿದ ಹಸಿ ಮೆಣಸಿನಕಾಯಿ - 1, ಕರಿ ಮೆಣಸಿನ ಹುಡಿ - 1/4 ಟೀ ಚಮಚ, ಎಣ್ಣೆ - 1/4 ಲೀಟರ್‌, ರುಚಿಗೆ ಬೇಕಾಗಿರುವಷ್ಟು ಉಪ್ಪು.

ತಯಾರಿಸುವ ವಿಧಾನ 
ಚಿಕನ್‌ ತುಂಡುಗಳನ್ನು ಸಂಸ್ಕರಿತ ಗೋಧಿ ಹಿಟ್ಟು ಮತ್ತು ಉಪ್ಪು ಮಿಶ್ರಣದಲ್ಲಿ ಅದ್ದಿಟ್ಟು ಬಳಿಕ ಚೆನ್ನಾಗಿ ಫ್ರೈ ಮಾಡಿ.

ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿಮಾಡಿಕೊಂಡು ಅದಕ್ಕೆ ಕತ್ತರಿಸಿದ ನೀರುಳ್ಳಿ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಎಲ್ಲಾ ಸಾಸ್‌ಗಳನ್ನು ಹಾಗೂ ಕಾಳು ಮೆಣಸಿನ ಹುಡಿ, ಸ್ವಲ್ಪ ಉಪ್ಪು ಮತ್ತೆ ಕಡೆಯದಾಗಿ ಫ್ರೈ ಮಾಡಿದ ತುಂಡುಗಳನ್ನು ಹಾಕಿ.
ಇದೀಗ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

Trending videos

Back to Top