CONNECT WITH US  

ಮುರ್ಗ್‌ ಮಲಾಯಿ ಟಿಕ್ಕ

ಬೇಕಾಗಿರುವ ಸಾಮಾಗ್ರಿಗಳು : ಚಿಕನ್‌ - 500 ಗ್ರಾಂಗಳಷ್ಟು (ಮೂಳೆರಹಿತ ಮಾಂಸ ಭಾಗ), ಮೊಸರು - 75 ಗ್ರಾಂ., ತಾಜಾ ಕೆನೆ - 75 ಗ್ರಾಂ., ಮೆಣಸಿನ ಹುಡಿ - 1 ಟೀ ಚಮಚ, ಗರಂ ಮಸಾಲಾ ಹುಡಿ - 1 ಟೀ ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌ - 2 ಟೀ ಚಮಚ, ತಂದೂರಿ ಬಣ್ಣ - ಒಂದು ಚಿಟಿಕೆ (ಬೇಕಾದರೆ ಮಾತ್ರ), ಸವರಲು ಎಣ್ಣೆ, ರುಚಿಗೆ ಬೇಕಾಗಿರುವಷ್ಟು ಉಪ್ಪು.

ತಯಾರಿಸುವ ವಿಧಾನ :
ಚಿಕನ್‌ ಮಾಂಸವನ್ನು ಕತ್ತರಿಸಿ ಸ್ವತ್ಛಗೊಳಿಸಿ ಮೊಸರು, ಉಪ್ಪು, ಕೆಂಪು ಮೆಣಸಿನ ಹುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಗರಂ ಮಸಾಲೆ ಹುಡಿ, ತಾಜಾ ಕೆನೆ ಮತ್ತು ತಂದೂರಿ ಬಣ್ಣವನ್ನು ಚೆನ್ನಾಗಿ ಮಿಶ್ರಣಗೊಳಿಸಿ.

ಈ ಮಿಶ್ರಣಕ್ಕೆ ಚಿಕನ್‌ ಮಾಂಸವನ್ನು ಹಾಕಿ ಮಿಶ್ರಮಾಡಿ ಮತ್ತು ಅದ್ದಿಟ್ಟು, 3-4 ಗಂಟೆಗಳವರೆಗೆ ಶಿಥಿಲೀಕರಣಗೊಳಿಸಿ. ನಂತರ ಅದ್ದಿರಿಸಿದ್ದ ತುಂಡುಗಳಿಗೆ ಸ್ವಲ್ಪ ಎಣ್ಣೆಯನ್ನು ಸವರಿ ಕಬ್ಬಿಣದ ಸಲಾಕೆಗೆ ಸಿಕ್ಕಿಸಿ 10 ನಿಮಿಷಗಳವರೆಗೆ ಬೇಯಲು ಬಿಡಿ ಮತ್ತು ಹೀಗೆ ಬೇಯಿಸುವ ಸಂದರ್ಭದಲ್ಲಿ ಪದೇ ಪದೇ ತಿರುಗಿಸುತ್ತಿರಿ. ಇನ್ನೂ ಸ್ವಲ್ಪ ಎಣ್ಣೆಯನ್ನು ಸವರಿ ಚೆನ್ನಾಗಿ ಬೇಯುವ ತನಕ ಸಲಾಕೆಯನ್ನು ತಿರುಗಿಸುತ್ತಿರಿ. ಬೇಯಿಸುವ ಸಂದರ್ಭದಲ್ಲಿ ತುಂಬಾ ಸಲ ಬದಲಾಯಿಸುತ್ತಿರಿ. ಬೇಯಿಸುವಾಗಲೂ ಸಹ ಸುಮಾರು 2-3 ಸಲ ಸ್ವಲ್ಪ ಎಣ್ಣೆಯನ್ನು ಸವರುತ್ತಿರಿ.

Trending videos

Back to Top