CONNECT WITH US  

ಜಿಂಜರ್‌ ಚಿಕನ್‌

ಬೇಕಾಗಿರುವ ಸಾಮಾಗ್ರಿಗಳು :ಚಿಕನ್‌ - 1ಕೆ.ಜಿ., ಬೆಳ್ಳುಳ್ಳಿ - 25 ಸೊಳೆಗಳು, ತಾಜಾ ಕೊತ್ತಂಬರಿ ಸೊಪ್ಪು - 1 ಕಟ್ಟು, ಶುಂಠಿ - 2 ಇಂಚು ಗಾತ್ರದ್ದು, ಕಾಳು ಮೆಣಸು - 1 ಟೇಬಲ್‌ ಚಮಚ, ನೀರುಳ್ಳಿ - 2, ಟೊಮ್ಯಾಟೋ - 3, ಮೆಣಸಿನ ಹುಡಿ - 1/2 ಟೀ ಚಮಚ, ಅರಶಿನ ಹುಡಿ - 1/4 ಟೀ ಚಮಚ, ಸಂಸ್ಕರಿಸಿದ ಎಣ್ಣೆ ಅಥವಾ ತುಪ್ಪ - 1 ಟೇಬಲ್‌ ಚಮಚ, ರುಚಿಗೆ ಬೇಕಾಗಿರುವಷ್ಟು ಉಪ್ಪು.

ತಯಾರಿಸುವ ವಿಧಾನ 
ಚಿಕನ್‌ ತುಂಡುಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಹೆಚ್ಚಿನ ನೀರಿನಂಶವನ್ನು ಹಿಂಡಿ ತೆಗೆಯಿರಿ.

ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ, ಶುಂಠಿ, ಕಾಳು ಮೆಣಸುಗಳನ್ನು ಅರೆದು ಪೇಸ್ಟ್‌ ರೂಪಕ್ಕೆ ತಯಾರು ಮಾಡಿಟ್ಟುಕೊಂಡಿರಿ. ತುಪ್ಪವನ್ನು ಬಿಸಿ ಮಾಡಿ ; ಇದಕ್ಕೆ ಕತ್ತರಿಸಿದ ನೀರುಳ್ಳಿಯನ್ನು ಬೆರೆಸಿ ತಿಳಿ ಹಳದಿ ಬಣ್ಣದವರೆಗೆ ಫ್ರೈಮಾಡಿ. ಇದಕ್ಕೆ ಕತ್ತರಿಸಿದ ಟೊಮ್ಯಾಟೋ ಮತ್ತು ಚಿಕನ್‌ ಅನ್ನು ಹಾಕಿ. ಮತ್ತೆ ಸ್ವಲ್ಪ ಉಪ್ಪನ್ನು ಬೆರೆಸಿ ಬೇಯಲು ಬಿಡಿ. ನಂತರದಲ್ಲಿ ಅರೆದಿಟ್ಟುಕೊಂಡಿರುವ ಮಸಾಲೆ ಪೇಸ್ಟನ್ನು ಅರಶಿನ ಹುಡಿ ಮತ್ತು ಮೆಣಸಿನ ಹುಡಿಯ ಜೊತೆಯಲ್ಲಿ ಬೆರೆಸಿ ಕಡಿಮೆ ಉರಿಯಲ್ಲಿ 20-25 ನಿಮಿಷಗಳವರೆಗೆ ಅಂದರೆ ಚಿಕನ್‌ ಮೃದುವಾಗುವತನಕ ಬೇಯಿಸಿ. ಹೀಗೆ ತಯಾರಾದ ಜಿಂಜರ್‌ ಚಿಕನ್‌ ಅನ್ನು ಒಲೆಯಿಂದ ಇಳಿಸಿ ದೋಸೆ, ಇಡ್ಲಿ, ರೊಟ್ಟಿ ಅಥವಾ ಅನ್ನದ ಜೊತೆಯಲ್ಲಿ ಸವಿಯಿರಿ.

Trending videos

Back to Top