CONNECT WITH US  

ಮೊಟ್ಟೆ ಸಾಂಬಾರು (ಎಗ್‌ ಕರಿ)

ಬೇಕಾಗಿರುವ ಸಾಮಾಗ್ರಿಗಳು : ಬೇಯಿಸಿದ ಮೊಟ್ಟೆ - 5, ತೆಂಗಿನ ತುರಿ - 4 ಟೇಬಲ್‌ ಚಮಚ, ಉದ್ದನೆಯ ಕೆಂಪು ಮೆಣಸಿನಕಾಯಿ - 4, ಚಿಕ್ಕ ಕೆಂಪು ಮೆಣಸಿನಕಾಯಿ - 4, ಕೊತ್ತಂಬರಿ - 1 ಟೇಬಲ್‌ ಚಮಚ, ಜೀರಿಗೆ - 1/2 ಟೀ ಚಮಚ, ಮೆಂತ್ಯ - 1/4 ಟೀ ಚಮಚ, ಹುಣಸೆ ಹುಳಿ - ಸಣ್ಣ ತುಂಡು, ಅರಶಿನ ಹುಡಿ - ಒಂದು ಚಿಟಿಕೆ, ಕಾಳುಮೆಣಸು - 5, ಬೆಳ್ಳುಳ್ಳಿ - 5 ಸೊಳೆಗಳು, ತೆಂಗಿನ ಎಣ್ಣೆ - 1 ಟೇಬಲ್‌ ಚಮಚ.

ಮಸಾಲೆ : ನೀರುಳ್ಳಿ - 1, ಹಸಿಮೆಣಸಿನಕಾಯಿ - 2, ಶುಂಠಿ - 1/2 ಇಂಚು, ಟೊಮ್ಯಾಟೋ - 1/2, ಕೊತ್ತಂಬರಿ ಸೊಪ್ಪು - 2 ಟೀ ಚಮಚ.

ತಯಾರಿಸುವ ವಿಧಾನ 
ಎಣ್ಣೆಯನ್ನು ಒಂದು ಪಾತ್ರದಲ್ಲಿ ಬಿಸಿಗಿರಿಸಿ, ಮೆಣಸು, ಕೊತ್ತಂಬರಿ, ಮೆಂತ್ಯೆ, ಕಾಳು ಮೆಣಸು ಇವುಗಳನ್ನು ಒಟ್ಟಿಗೆ ಫ್ತೈ ಮಾಡಿ ಒಂದು ಬದಿಗಿರಿಸಿ, ಇದೀಗ ತೆಂಗಿನ ತುರಿ, ಜೀರಿಗೆ, ಅರಶಿನ ಹುಡಿ, ಬೆಳ್ಳುಳ್ಳಿ, ಹುಳಿ ಇವುಗಳನ್ನು ಅರೆದು ಪೇಸ್ಟ್‌ ರೂಪಕ್ಕೆ ಮಾಡಿಕೊಳ್ಳಿ. ಒಂದು ದೊಡ್ಡ ಪಾತ್ರೆಯನ್ನು ತೆಗೆದುಕೊಳ್ಳಿ, ಅರೆದ ಮಸಾಲೆ ಮತ್ತು ಉಪ್ಪನ್ನು ಬೆರೆಸಿ. ನಂತರ ಅದು ಸರಿಯಾಗಿ ಗ್ರೇವಿ ರೂಪಕ್ಕೆ ಬರುವವರೆಗೆ ಕುದಿಸಿ. ಈಗ ಬೇಯಿಸಿದ ಮೊಟ್ಟೆಯನ್ನು ಸೇರಿಸಿ. ಅನ್ನದೊಂದಿಗೆ ಉಣಬಡಿಸಿ. ಬದಲಾವಣೆ ಬೇಕಿದ್ದಲ್ಲಿ... : ಹಸಿ ತೆಂಗಿನ ತುರಿಯ ಬದಲಿಗೆ, ಒಣ ಕೊಬ್ಬರಿಯನ್ನು ಬಳಸಬಹುದು.

Trending videos

Back to Top