CONNECT WITH US  

ಪ್ರಾನ್ಸ್‌ ಸುಕ್ಕ

ಬೇಕಾಗಿರುವ ಸಾಮಾಗ್ರಿಗಳು :  ಸಿಗಡಿ - 500 ಗ್ರಾಂಗಳು, ಉದ್ದನೆಯ ಕೆಂಪು ಮೆಣಸಿನಕಾಯಿ - 2, ಚಿಕ್ಕ ಕೆಂಪು ಮೆಣಸು - 5, ತಾಜಾ ತೆಂಗಿನ ತುರಿ - 2 ಕಪ್‌, ಕೊತ್ತಂಬರಿ ಬೀಜಗಳು - 2 ಟೀ ಚಮಚ, ಮೆಂತ್ಯೆ ಕಾಳು - 9 ಕಾಳುಗಳು, ಜೀರಿಗೆ - 1/2 ಟೀ ಚಮಚ, ಅರಶಿನ ಹುಡಿ - ಒಂದು ಚಿಟಿಕೆ, ಹುಣಸೆ ಹುಳಿ - ಸಣ್ಣ ಉಂಡೆ, ಬೆಳ್ಳುಳ್ಳಿ - 5 ಸೊಳೆಗಳು, ನೀರುಳ್ಳಿ - ಮಧ್ಯಮ ಗ್ರಾತ್ರದ್ದು 2, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ - 2 ಟೇಬಲ್‌ ಚಮಚ.

ತಯಾರಿಸುವ ವಿಧಾನ :ಮೊದಲಿಗೆ ಚಿಪ್ಪುಗಳನ್ನು ಬೇರ್ಪಡಿಸಿ, ಸಿರೆಗಳನ್ನು ಬೇರೆ ಮಾಡಿ ಮತ್ತು ಹರಿಯುತ್ತಿರುವ ನೀರಿನಲ್ಲಿ ಸಿಗಡಿಗಳನ್ನು ಚೆನ್ನಾಗಿ ತೊಳೆಯಿರಿ. ನಂತರ ಹೆಚಿ° ನೀರನ್ನು ತೆಗೆದು ಮೆಲ್ಲಗೆ ತಟ್ಟಿ ಒಣಗಿಸಿ. ನೀರುಳ್ಳಿ ಸಿಪ್ಪೆ ಸುಲಿದು ಚೆನ್ನಾಗಿ ತೊಳೆಯಿರಿ. 1 1/2 ನೀರುಳ್ಳಿಯನ್ನು ಹದಕ್ಕೆ ಕತ್ತರಿಸಿ ಮತ್ತು ಉಳಿದ 1/2 ನೀರುಳ್ಳಿಯನ್ನು ದಪ್ಪಕ್ಕೆ ಕತ್ತರಿಸಿ. ಬೆಳ್ಳುಳ್ಳಿ ಸೊಳೆಗಳ ಸಿಪ್ಪೆ ತೆಗೆಯಿರಿ. ಕೆಂಪು ಮೆಣಸಿನಕಾಯಿ, ಕೊತ್ತಂಬರಿ ಬೀಜಗಳು, ಮೆಂತ್ಯೆ ಬೀಜಗಳನ್ನು ಸ್ವಲ್ಪ ಎಣ್ಣೆಯಲ್ಲಿ ಫ್ತೈ ಮಾಡಿ. ಈ ರೀತಿಯಾಗಿ ಫ್ತೈಮಾಡಿರುವ ಮಸಾಲೆಯನ್ನು ಬೇಕಾದಷ್ಟು ನೀರನ್ನು ಬಳಸಿ, ನಯವಾಗಿ ಪೇಸ್ಟ್‌ ರೂಪಕ್ಕೆ ಅರೆದು ಒಂದು ಬದಿಯಲ್ಲಿರಿಸಿ. ಈಗ ತೆಂಗಿನ ತುರಿ, ಜೀರಿಗೆ, ಬೆಳ್ಳುಳ್ಳಿ, ಅರಶಿನ ಹುಡಿ ಮತ್ತು ದೊಡ್ಡದಾಗಿ ಕತ್ತರಿಸಿರುವ ನೀರುಳ್ಳಿಗಳನ್ನು ದಪ್ಪನೆಯ ಪೇಸ್ಟ್‌ ರೂಪಕ್ಕೆ ಅರೆಯಿರಿ, ಇದಕ್ಕೆ ನೀರನ್ನು ಬಳಸಬೇಡಿ. ಒಂದು ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ನಂತರ ಕತ್ತರಿಸಿರುವ ನೀರುಳ್ಳಿಯನ್ನು ಹಳದಿ ಬಣ್ಣ ಬರುವ ತನಕ ಫ್ತೈ ಮಾಡಿ. ಈಗ ಸಿಗಡಿಗಳನ್ನು ಸೇರಿಸಿ ಉಪ್ಪು ಬೆರೆಸಿ ಬೇಯಿಸಿ. ಇದೀಗ ಮಸಾಲಾ ಪೇಸ್ಟ್‌ ಸೇರಿಸಿ, 2-3 ನಿಮಿಷಗಳವರೆಗೆ ಬೇಯಿಸಿ. ಇದೀಗ ತಯಾರಿಸಿಟ್ಟುಕೊಂಡಿರುವ ದಪ್ಪ ಪೇಸ್ಟ್‌ ಅನ್ನೂ ಸಹ ಈಗ ಸೇರಿಸಿ. ಹದವಾದ ಉರಿಯಲ್ಲಿ 5 ನಿಮಿಷಗಳವರೆಗೆ ಇರಿಸಿ ಅಥವಾ ಬೇಯುವವರೆಗೆ ಇರಿಸಿ ಮತ್ತು ನಂತರ ರುಚಿಕರವಾದ ಬಿಸಿ ಸಿಗಡಿ ಸುಕ್ಕವನ್ನು ಸರ್ವ್‌ ಮಾಡಿ.

Trending videos

Back to Top