CONNECT WITH US  

ಕೋರಿ ರೊಟ್ಟಿ

ಕುಡ್ಲದ "ಕೋರಿ ರೊಟ್ಟಿ' ಅಂದ್ರೆ ಬಾಯಲ್ಲಿ ನೀರು. ಅದನ್ನ ಮಂಗ್ಳೂರಿಗೆ ಹೋಗಿಯೇ ತಿನ್ಬೇಕಾಗಿಲ್ಲ. ನೀವಿರೋ ಕಡೆನೇ ಮಾಡ್ಕೊಬಹುದು. 

ಏನೇನ್‌ ಬೇಕು?: ಚಿಕನ್‌ 1 ಕೆ.ಜಿ, 2 ನೀರುಳ್ಳಿ, ತೆಂಗಿನಕಾಯಿಹಾಲು, ಶುಂಠಿ 1 ಪೀಸು,  ಬೆಳ್ಳುಳ್ಳಿ 4 ಎಸಳು, ಒಣ ಮೆಣಸು 5,  ಜೀರಿಗೆ 1 ಚಮಚ, ಅರಿಶಿಣ ಪುಡಿ ಅರ್ಧ ಚಮಚ, ತೆಂಗಿನ ತುರಿ ಸ್ವಲ್ಪ, ಕೊತ್ತಂಬರಿ ಬೀಜ 1 ಚಮಚ, ಸ್ವಲ್ಪ ಚಕ್ಕೆ ಹಾಗೂ ಲವಂಗ, ಕರಿಬೇವಿನ ಸೊಪ್ಪು, ಉಪ್ಪು.

ಮಾಡೋದು ಹೇಗೆ?
1. ಬಾಣಲೆಗೆ ಎಣ್ಣೆ ಹಾಕಿ ಬಿಸಿಮಾಡಿ. 
2. ಹೆಚ್ಚಿಟ್ಟ ಈರುಳ್ಳಿ ಹಾಕಿ ಫ್ರೈ ಮಾಡಿ. ಕಂದು ಬಣ್ಣ ಬರುವಾಗ ತೆಗೆದು ಬೇರೆ ಕಪ್‌ಗೆ ಹಾಕಿಡಿ.
3. ಬಾಣಲೆಗೆ ಒಣ ಮೆಣಸು, ಕೊತ್ತಂಬರಿ ಬೀಜ, ತುರಿ ತೆಂಗಿನಕಾಯಿ ಹಾಕಿ ಕೊತ್ತಂಬರಿ ಬೀಜ ಹಾಕಿ ಹುರಿಯಿರಿ. 
4. ಕೊತ್ತಂಬರಿ ನಸು ಕಂದುಬಣ್ಣಕ್ಕೆ ಬರುವಾಗ ತೆಗೆಯಿರಿ.
5. ವಾಪಾಸು ಜೀರಿಗೆ, ಅರಿಶಿಣ ಪುಡಿ ಚಕ್ಕೆ, ಲವಂಗ, ಬೆಳ್ಳುಳ್ಳಿ ಹಾಕಿ ಪುನಃ ಒಂದು ನಿಮಿಷ ಹುರಿದು ತೆಗೆಯಿರಿ.
6.ಇದಕ್ಕೆ ಫ್ರೈ ಮಾಡಿದ ಈರುಳ್ಳಿ ಹಾಕಿ ರುಬ್ಬಿ ಪೇಸ್ಟ್‌ನಂತೆ ಮಾಡಿಕೊಳ್ಳಿ.
7. ಪಾತ್ರೆಯನ್ನು ಸ್ಟೌ ಮೇಲಿಟ್ಟು ಬಿಸಿ ಮಾಡಿ.
8. ಅದಕ್ಕೆ ಎಣ್ಣೆ ಹಾಕಿ ಅದರಲ್ಲಿ ರುಬ್ಬಿದ ಪದಾರ್ಥಗಳ ಪೇಸ್ಟ್‌ ಹಾಕಿ. 
9. ಒಂದೆರಡು ನಿಮಿಷ ತಿರುವುತ್ತಿರಿ. ಆಮೇಲೆ ತೆಂಗಿನ ಹಾಲು ಹಾಕಿ.
10. ಕುದಿಯುವಾಗ ಚಿಕನ್‌ ಪೀಸ್‌ ಹಾಕಿ ಉಪ್ಪು ಹಾಕಿ ಬೇಯಿಸಿ.
11. ಮತ್ತೇನಿಲ್ಲ, ತೆಳ್ಳನೆಯ ಕೋರಿ ರೊಟ್ಟಿ ಮಂಗಳೂರು ಸ್ಟೋರ್‌ಗಳಲ್ಲಿ, ಉಡುಪಿ ಸ್ಟೋರ್‌ಗಳಲ್ಲಿ ಸಿಗತ್ತೆ. ಮೊದಲೇ ತಂದಿಟ್ಟುಕೊಂಡು, ಈ ಕರಿ ಜತೆ ತಿನ್ನಿ, ಆಹಾ, ಏನ್‌ ಟೇಸ್ಟ್‌ ಅಲ್ವಾ?

Trending videos

Back to Top