CONNECT WITH US  

ಪತ್ರಾಣಿ ಮಚ್ಚಿ

ಬೇಕಾಗಿರುವ ಸಾಮಾಗ್ರಿಗಳು : ಪಾಂಪ್ರಟ್‌ - 2, ಹಸಿ ಮೆಣಸಿನಕಾಯಿ - 3-4, ಕೊತ್ತಂಬರಿ ಸೊಪ್ಪು - 1/2 ಕಟ್ಟು, ಶುಂಠಿ ಬೆಳ್ಳುಳ್ಳಿ ಪೇಸ್ಟ್‌ - 1 1/2 ಟೀ ಚಮಚ, ವಿನೇಗರ್‌ - 1 ಟೀ ಚಮಚ, ರುಚಿಗೆ ಬೇಕಾದಷ್ಟು ಉಪ್ಪು, ಎಣ್ಣೆ.

ತಯಾರಿಸುವ ವಿಧಾನ :ಈ ಮೇಲಿನ ಮಸಾಲೆಗಳನ್ನು ಉಪ್ಪು ಬೆರೆಸಿ ಅರೆಯಿರಿ.
ಮೀನಿನ ಪ್ರತೀ ಕತ್ತರಿಸಿದ ದಪ್ಪ ಭಾಗದ ಮಧ್ಯದಲ್ಲಿ ಒಂದು ಅಡ್ಡ ಗುರುತನ್ನು ಮಾಡಿ - ಸೀಳಿಕೆಯ ಹಾಗೆ ; ಅದು ಪಾಕೆಟ್‌ ರೂಪದಲ್ಲಿರಲಿ. ಮೀನಿನ ತುಂಡುಗಳನ್ನು ಅಥವಾ ಪೂರ್ತಿ ಮೀನನ್ನು ವಿನೇಗರ್‌ ಮತ್ತು ಉಪ್ಪಿನಲ್ಲಿ ಸುಮಾರು ಒಂದು ಗಂಟೆಗಳ ತನಕ ಅದ್ದಿಡಿ. ಅದ್ದಿಟ್ಟುಕೊಂಡಿರುವ ಮೀನನ್ನು ಹೊರತೆಗೆಯಿರಿ.

ಮುಂಚೆ ಸಿದ್ಧಗೊಳಿಸಿದ ಪಾಕೆಟ್‌ ರೂಪದ ಜಾಗಕ್ಕೆ ಹಸಿರು ಚಟ್ನಿಯನ್ನು ತುಂಬಿಸಿ ಮತ್ತು ಪೂರ್ತಿ ತುಂಡಿಗೆ ಅದನ್ನು ಸವರಿ. ಬಳಿಕ ಪ್ರತಿಯೊಂದು ತುಂಡನ್ನು ಎಣ್ಣೆ ಸವರಿಟ್ಟುಕೊಂಡಿರುವ ಬಾಳೆ ಎಲೆಯಲ್ಲಿ ಸುತ್ತಿ. ಈ ರೀತಿಯಾಗಿ ಸಿದ್ಧವಾದುದನ್ನು 15 ನಿಮಿಷಗಳತನಕ ಚೆನ್ನಾಗಿ ಕಾಯಿಸಿ ಮತ್ತು ಸರ್ವ್‌ ಮಾಡಿ.

Trending videos

Back to Top