CONNECT WITH US  

ಬಂಗುಡೆ ಡ್ರೈ

ಬೇಕಾಗಿರುವ ಸಾಮಾಗ್ರಿಗಳು : ಬಂಗಡೆ ಮೀನು - 5, ಉದ್ದನೆಯ ಕೆಂಪು ಮೆಣಸಿನಕಾಯಿ - 9-10, ಸಣ್ಣ ಕೆಂಪು ಮೆಣಸಿನಕಾಯಿ -12, ಕೊತ್ತಂಬರಿ ಕಾಳು - 1/4 ಟೀ ಚಮಚ, ಮೆಂತ್ಯ ಕಾಳು - 1/4 ಟೀ ಚಮಚ, ಅರಶಿನ ಹುಡಿ - 1/2 ಟೀ ಚಮಚ, ಉದ್ದಿನ ಬೇಳೆ - 1 ಟೇಬಲ್‌ ಚಮಚ, ಹುಣಸೆ ಹುಳಿ - ಸಣ್ಣ ಲಿಂಬೆ ಗಾತ್ರದ್ದು, ನೀರುಳ್ಳಿ - 1, ತೆಂಗಿನ ಎಣ್ಣೆ - 1 1/2 ಟೇಬಲ್‌ ಚಮಚ, ರುಚಿಗೆ ಬೇಕಾದಷ್ಟು ಉಪ್ಪು.

ತಯಾರಿಸುವ ವಿಧಾನ 
ಬಂಗುಡೆ ಮೀನಿನ ಹೊಟ್ಟೆಯ ಭಾಗವನ್ನು ಚಿಕ್ಕದಾಗಿ ತುಂಡರಿಸಿ ಒಳಭಾಗವನ್ನು ಸ್ವತ್ಛಗೊಳಿಸಿ ಮತ್ತು ಅದನ್ನು ಚೆನ್ನಾಗಿ ತೊಳೆಯಿರಿ, ಹಾಗೆ ತೊಳೆದ ಮೀನನ್ನು ನಾಲ್ಕು ಭಾಗಗಳನ್ನಾಗಿ ಮಾಡಿ, ಅದಕ್ಕೆ ಉಪ್ಪು ಮತ್ತು ಹುಣಸೆ ಹುಳಿಯ ತಿರುಳನ್ನು ಹಾಕಿ ಒಂದು ಗಂಟೆಗಳವರೆಗೆ ತೆಗೆದಿರಿಸಿ. ಮೆಣಸು, ಕೊತ್ತಂಬರಿ ಕಾಳು, ಮೆಂತ್ಯೆ ಕಾಳು, ಉದ್ದಿನ ಬೇಳೆ ಮತ್ತು ಅರಶಿನ ಹುಡಿಗಳನ್ನು ಜೊತೆಯಲ್ಲಿ ಫ್ರೈ ಮಾಡಿ ಹುಡಿ ರೂಪದಲ್ಲಿ ತಯಾರು ಮಾಡಿಕೊಳ್ಳಿ. ಆಳವಾಗಿರುವ ಪಾತ್ರೆಯಲ್ಲಿ ಅಥವಾ ಮಣ್ಣಿನ ಮಡಕೆಯಲ್ಲಿ ಎಣ್ಣೆಯನ್ನು ಕಾಯಿಸಿ, ನೀರುಳ್ಳಿ ಮತ್ತು ಮಸಾಲೆ ಹುಡಿಗಳನ್ನು ಒಗ್ಗರಣೆಗೊಳಿಸಿ ಸ್ವಲ್ಪ ಹೊತ್ತು ಫ್ರೈ ಮಾಡಿ, ಇದಕ್ಕೆ ಬಂಗಡೆ ಮೀನಿನ ಸಿದ್ಧಪಡಿಸಿದ ತುಂಡುಗಳನ್ನು ಹಾಕಿ ಒಂದು ಲೋಟ ನೀರನ್ನು ಹಾಕಿ. ಕುದಿಯಲು ಬಿಡಿ, ನಂತರ ಉರಿಯನ್ನು ಕಡಿಮೆಗೊಳಿಸಿ 2 ನಿಮಿಷಗಳವರೆಗೆ ಸಿಮ್‌ನಲ್ಲಿ ಬೇಯಿಸಿ, ಇದೇ ಸಮಯದಲ್ಲಿ ಬಂಗಡೆ ಬೆಂದು ಹೋಗದಂತೆ ಎಚ್ಚರ ವಹಿಸಿ. ಎರಡು ಗಂಟೆಗಳ ಬಳಿಕ ಸರ್ವ್‌ ಮಾಡಿ.

Trending videos

Back to Top