CONNECT WITH US  

ಮಟನ್‌ ಕಲಿಮಿರಿ

ಬೇಕಾಗಿರುವ ಸಾಮಾಗ್ರಿಗಳು :ಮಟನ್‌ - 1/4 ಕೆ.ಜಿ., ಸೋಯಾ ಸಾಸ್‌ - 1 ಟೀ ಚಮಚ, ಹಸಿ ಮೆಣಸಿನ ಸಾಸ್‌ - 1/2 ಟೀ ಚಮಚ, ಶಂಠಿ ಬೆಳ್ಳುಳ್ಳಿ ಪೇಸ್ಟ್‌ - 1 ಟೇಬಲ್‌ ಚಮಚ, ಕಾಳು ಮೆಣಸಿನ ಹುಡಿ - 2 1/2 ಟೀ ಚಮಚ, ತುಪ್ಪ - 1 ಟೇಬಲ್‌ ಚಮಚ, ರುಚಿಗೆ ಬೇಕಾಗಿರುವಷ್ಟು ಉಪ್ಪು.

ತಯಾರಿಸುವ ವಿಧಾನ :ಮಟನ್‌ ತುಂಡುಗಳನ್ನು ಬೇಕಾದ ಹದಕ್ಕೆ ಕತ್ತರಿಸಿ ಸ್ವತ್ಛಗೊಳಿಸಿ ಹೆಚ್ಚಿನ ಪ್ರಮಾಣದ ನೀರನ್ನು ಹೊರಹಾಕಿ.

ಒಂದು ಪಾತ್ರೆಯಲ್ಲಿ ತುಪ್ಪವನ್ನು ಬಿಸಿಮಾಡಿಕೊಂಡು ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಹಾಕಿ ಅವುಗಳ ವಾಸನೆ ಹೋಗುವ ತನಕ ಚೆನ್ನಾಗಿ ಅಲ್ಲಾಡಿಸಿ, ಬಳಿಕ ಇದಕ್ಕೆ ಮಟನ್‌ ತುಂಡುಗಳನ್ನು ಹಾಕಿ ಫ್ರೈ ಮಾಡಿ.

ಸೋಯಾ ಸಾಸ್‌, ಹಸಿ ಮೆಣಸಿನಕಾಯಿ ಸಾಸ್‌ಗಳನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ ನಂತರ ಕಾಳುಮೆಣಸಿನ ಹುಡಿಯನ್ನು ಹಾಕಿ.ಕೊತ್ತಂಬರಿ ಸೊಪ್ಪು ಮತ್ತು ಆನಿಯನ್‌ ರಿಂಗ್‌ನಿಂದ ಗಾರ್ನಿಶ್‌ ಮಾಡಿ ಬಳಿಕ ಸರ್ವ್‌ ಮಾಡಿ.

Trending videos

Back to Top