CONNECT WITH US  

ಎಗ್‌ ಬೀಟನ್‌ ಕರಿ

ಬೇಕಾಗಿರುವ ಸಾಮಾಗ್ರಿಗಳು : ಮೊಟ್ಟೆ - 5, ತಾಜಾ ತೆಂಗಿನ ತುರಿ - 4 ಟೇಬಲ್‌ ಚಮಚ, ಉದ್ದನೆಯ ಕೆಂಪು ಮೆಣಸಿನಕಾಯಿ - 2, ಸಣ್ಣ ಕೆಂಪು ಮೆಣಸಿನಕಾಯಿ - 3, ಕೊತ್ತಂಬರಿ - 1 ಟೇಬಲ್‌ ಚಮಚ, ಜೀರಿಗೆ - 1/4 ಟೀ ಚಮಚ, ಮೆಂತ್ಯ - 1/4 ಟೀ ಚಮಚ, ಕಾಳು ಮೆಣಸು - 3, ಬೆಳ್ಳುಳ್ಳಿ - 3 ಸೊಳೆಗಳು, ನೀರುಳ್ಳಿ - ಸಣ್ಣದು 2, ಅರಶಿನ ಹುಡಿ - ಒಂದು ಚಿಟಿಕೆ, ಹುಣಸೆ ಹುಳಿ - ಸಣ್ಣ ತುಂಡು, ಎಣ್ಣೆ - 2 ಟೀ ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ :
ಮಸಾಲೆ ಪದಾರ್ಥಗಳಾದ ಮೆಣಸು, ಕೊತ್ತಂಬರಿ, ಮೆಂತ್ಯೆ, ಕಾಳು ಮೆಣಸು ಇವುಗಳನ್ನೆಲ್ಲಾ ಫ್ತೈ ಮಾಡಿ. ನಂತರ ಇವುಗಳನ್ನು ತೆಂಗಿನ ತುರಿ, ಹುಣಸೆ ಹುಳಿ, ಜೀರಿಗೆ, ಬೆಳ್ಳುಳ್ಳಿ ಮತ್ತು ರುಚಿಗೆ ಅಗತ್ಯವಿರುವ 1/2 ತುಂಡು ನೀರುಳ್ಳಿ ಇವೆಲ್ಲವನ್ನೂ ಜೊತೆಯಾಗಿ ಅರೆಯಿರಿ. ಉಳಿದ ನೀರುಳ್ಳಿಯನ್ನು ಒಗ್ಗರಣೆಯಲ್ಲಿ ಬಳಸಿ, ಅರೆದ ಮಸಾಲೆಯನ್ನು  ಉಪ್ಪು ಮತ್ತು ಅಗತ್ಯವಿರುವಷ್ಟು ನೀರಿನೊಂದಿಗೆ ಸೇರಿಸಿ. ನಂತರ ಅದನ್ನು ಕುದಿಯಲು ಬಿಡಿ.ಇದೀಗ ಮೊಟ್ಟೆಯನ್ನು ಸೇರಿಸಿ ಸ್ವಲ್ಪ ಸಮಯ ಕದಡಿಸಿ. ತಯಾರಾಗಿರುವ ಎಗ್‌ಬೀಟನ್‌ ಕರಿಯನ್ನು ಅಕ್ಕಿ ಪುಂಡಿ ಜೊತೆಯಲ್ಲಿ ಸವಿಯಲು ನೀಡಿ.

Trending videos

Back to Top