CONNECT WITH US  

ಏಡಿ ಸುಕ್ಕ

ಬೇಕಾಗಿರುವ ಸಾಮಾಗ್ರಿಗಳು :ಏಡಿ - 5, ಉದ್ದನೆಯ ಕೆಂಪು ಮೆಣಸಿನಕಾಯಿ - 2-3, ಚಿಕ್ಕದಾಗಿರುವ ಕೆಂಪು ಮೆಣಸು - 5, ತುರಿದ ತೆಂಗಿನಕಾಯಿ - 1/2 ಚಿಪ್ಪು, ಕೊತ್ತಂಬರಿ ಬೀಜಗಳು - 3 ಟೀ ಚಮಚ, ಮೆಂತ್ಯೆ - 1/4 ಟೀ ಚಮಚ, ಅರಶಿನ ಹುಡಿ - ಒಂದು ಚಿಟಿಕೆ, ಬೆಳ್ಳುಳ್ಳಿ - 5 ಸೊಳೆಗಳು, ನೀರುಳ್ಳಿ - 1 1/2, ಹುಣಸೆ ಹುಳಿ -ಸಣ್ಣ ಮಾರ್ಬಲ್‌ ಗಾತ್ರದ್ದು, ತೆಂಗಿನ ಎಣ್ಣೆ - 1 ಟೇಬಲ್‌ ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ 
ಏಡಿಯನ್ನು ಸ್ವತ್ಛಗೊಳಿಸಿ ಚೆನ್ನಾಗಿ ನೀರಿನಲ್ಲಿ ತೊಳೆಯಿರಿ. ಏಡಿಯ ಕೊಂಡಿಯನ್ನು ಬೇರೆ ಮಾಡಿ ಮತ್ತು ಅದನ್ನು ಒಡೆಯಿರಿ, ಪ್ರತಿಯೊಂದನ್ನೂ ಎರಡೆರಡು ತುಂಡುಗಳನ್ನಾಗಿ ಮಾಡಿ. ಮೆಣಸು, ಕೊತ್ತಂಬರಿ ಬೀಜಗಳು, ಮೆಂತ್ಯೆ ಬೀಜಗಳು ಮೊದಲಾದ ಮಸಾಲೆಗಳನ್ನು ಫ್ತೈ ಮಾಡಿ ಇವುಗಳನ್ನು ಹುಣಸೆ ಹುಳಿಯೊಂದಿಗೆ ನುಣ್ಣನೆ ಪೇಸ್ಟ್‌ ರೂಪಕ್ಕೆ ಅರೆಯಿರಿ. ತೆಂಗಿನಕಾಯಿ, ಜೀರಿಗೆ, ಬೆಳ್ಳುಳ್ಳಿ, 1/2 ನೀರುಳ್ಳಿ ಮತ್ತು ಅರಶಿನ ಹುಡಿ ಇವೆಲ್ಲವನ್ನೂ ದಪ್ಪನೆಯ ಪೇಸ್ಟ್‌ ರೂಪಕ್ಕೆ ಅರೆಯಿರಿ. ನಂತರ ಸ್ವಲ್ಪ ಜಜ್ಜಿ. ಒಂದು ಮಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಮತ್ತದಕ್ಕೆ ನೀರುಳ್ಳಿಯನ್ನು ಹಾಕಿ ಪಾರದರ್ಶಕವಾಗುವ ತನಕ ಫ್ತೈ ಮಾಡಿ, ಈಗ ಏಡಿ ಚೂರುಗಳನ್ನು ಮತ್ತು ಕೊಂಡಿಗಳನ್ನು ಬೆರೆಸಿ ಹದ ಉರಿಯಲ್ಲಿ ಹತ್ತರಿಂದ - ಹದಿನೈದು ನಿಮಿಷಗಳವರೆಗೆ ಬೇಯಿಸಿ. ಇದಕ್ಕೆ ಚಿಲ್ಲಿ ಮಸಾಲೆ ಪೇಸ್ಟ್‌ ಸೇರಿಸಿ, ಕಲಸಿ ಮತ್ತು ಬೇಯಿಸಿ. ಇದೀಗ ತೆಂಗಿನ ಮಸಾಲೆ ಪೇಸ್ಟನ್ನು ಹಾಕಿ ಸರಿಯಾಗಿ ಕಲಸಿ ಅಥವಾ ಮಸಾಲೆ ದಪ್ಪಗಾಗಿ, ಡ್ರೈ ಆಗುವವರೆಗೆ ಕಲಸುತ್ತಿರಿ. ಇದೀಗ ತಯಾರಾಗಿರುವ ಏಡಿ ಸುಕ್ಕಕ್ಕೆ ಬೇಕಾದಲ್ಲಿ ಕೊತ್ತಂಬರಿ ಎಲೆಗಳನ್ನು ಹಾಕಿ ಸರ್ವ್‌ ಮಾಡಿ.

Trending videos

Back to Top