CONNECT WITH US  

ಹಲೆಪ್ಪಾಡಿ-ಕುಂಟಲಪಲ್ಕೆ ರಸ್ತೆ ಕೆಸರುಮಯ

ಜನ-ವಾಹನ ಸಂಚಾರ ದುಸ್ತರ; ದುರಸ್ತಿಗೆ ಆಗ್ರಹ

ಹಲೆಪ್ಪಾಡಿ-ಕುಂಟಲಪಲ್ಕೆ ರಸ್ತೆ ಕೆಸರುಮಯವಾಗಿ ಜನ-ವಾಹನ ಸಂಚಾರ ದುಸ್ತರವಾಗಿದೆ.

ಪುಂಜಾಲಕಟ್ಟೆ: ಚೆನ್ನೈತ್ತೋಡಿ ಗ್ರಾ.ಪಂ. ವ್ಯಾಪ್ತಿಯ ಕುಡಂಬೆಟ್ಟು ಗ್ರಾಮದ ಹಲೆಪ್ಪಾಡಿ-ಕುಂಟಲಪಲ್ಕೆ ರಸ್ತೆ ಕೆಸರುಮಯವಾಗಿದ್ದು, ಜನ ಮತ್ತು ವಾಹನ ಸಂಚಾರಕ್ಕೆ ತೊಡಕನ್ನುಂಟು ಮಾಡಿದೆ. ಶೀಘ್ರ ದುರಸ್ತಿ ಕಾಮಗಾರಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪಾಂಗಲ್ಪಾಡಿಯಿಂದ ಕುಡಂಬೆಟ್ಟನ್ನು ಸಂಪರ್ಕಿಸುವ ಸುಮಾರು ಒಂದೂವರೆ ಕಿ.ಮೀ. ದೂರದ ಮಣ್ಣಿನ ಈ ಕಚ್ಛಾ ರಸ್ತೆಯನ್ನು ಅಭಿವೃದ್ಧಿಗೊಳಿಸಿ ಡಾಮರು ರಸ್ತೆಯಾಗಿ ಪರಿವರ್ತಿಸಬೇಕೆಂದು ಗ್ರಾಮಸ್ಥರು ಬಹಳ ವರ್ಷಗಳಿಂದ ಬೇಡಿಕೆ ಸಲ್ಲಿಸಿದ್ದರೂ ಕೈಗೂಡಿಲ್ಲ.

ಮನವಿಗೆ ಸ್ಪಂದನೆಯಿಲ್ಲ
ಈ ಭಾಗದಲ್ಲಿ ಸುಮಾರು 30ಕ್ಕೂ ಅಧಿಕ ಮನೆಗಳಿದ್ದು, ಇಲ್ಲಿಯ ಜನರು ವಿವಿಧ ಭಾಗಗಳಿಗೆ ತೆರಳಲು ಈ ರಸ್ತೆಯನ್ನೇ ಬಳಸುತ್ತಾರೆ. ವಿದ್ಯಾರ್ಥಿಗಳು, ಉದ್ಯೋಗಿಗಳು, ಗ್ರಾಮಸ್ಥರು ಈ ರಸ್ತೆಯಲ್ಲಿ ನಡೆದುಕೊಂಡು ಸಾಗುತ್ತಾರೆ. ಇದೀಗ ರಸ್ತೆ ಕೆಸರುಮಯವಾಗಿ ಸಂಚಾರ ಅಸಾಧ್ಯವಾಗಿದೆ. ಈ ಬಗ್ಗೆ ಗ್ರಾ.ಪಂ.ಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲವೆಂದು ಗ್ರಾಮಸ್ಥರು ತಿಳಿಸಿದ್ದಾರೆ.


Trending videos

Back to Top