CONNECT WITH US  

ಶ್ರೀ ಗಣೇಶ ಚತುರ್ಥಿ ಸಂಭ್ರಮ: ಹೂವು, ಹಣ್ಣು-ತರಕಾರಿಗೆ ಬೇಡಿಕೆ

ಬೆಳ್ತಂಗಡಿ ಮೂರು ಮಾರ್ಗದ ಬಳಿ ಹೂವಿನ ವ್ಯಾಪಾರದ ದೃಶ್ಯ.

ಬೆಳ್ತಂಗಡಿ: ಎಲ್ಲೆಡೆಯೂ ಶ್ರೀ ಗೌರಿ ಗಣೇಶ ಹಬ್ಬದ ವ್ಯಾಪಾರದ ಭರಾಟೆ ಆರಂಭಗೊಂಡಿದ್ದು, ಮಾರುಕಟ್ಟೆಗಳಲ್ಲಿ ಹೂವಿನ ಜತೆಗೆ ಕಬ್ಬು, ಹಣ್ಣು-ತರಕಾರಿ ವ್ಯಾಪಾರವೂ ಜೋರಾಗಿ ನಡೆಯುತ್ತಿದೆ. ಬೆಳ್ತಂಗಡಿ ಪೇಟೆ ಸಹಿತ ಉಜಿರೆ ಜಂಕ್ಷನ್‌ನಲ್ಲಿ ಹೂವಿನ ವ್ಯಾಪಾರ ಜೋರಾಗಿ ಆರಂಭಗೊಂಡಿದ್ದು, ಬೀದಿ ಬದಿ ವ್ಯಾಪಾರಿಗಳ ಸಂಖ್ಯೆಯೇ ಅಧಿಕವಿದೆ.

ಕಬ್ಬಿಗೂ ಬೇಡಿಕೆ
ಗಣೇಶ್‌ ಚತುರ್ಥಿಯ ಸಂದರ್ಭದಲ್ಲಿ ಹೆಚ್ಚಿನ ಮನೆಗಳಲ್ಲಿ ಚೌತಿ ಬಡಿಸುವ ಕ್ರಮವನ್ನು ಆಚರಣೆ ಮಾಡುತ್ತಿದ್ದು, ಅದಕ್ಕಾಗಿ ಕಬ್ಬಿಗೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಬ್ಬಿನ ರಾಶಿಗಳು ಕಂಡುಬಂದಿದ್ದು, ಒಂದು ಕಬ್ಬಿಗೆ ಗಾತ್ರದ ಆಧಾರದಲ್ಲಿ 30-50 ರೂ. ಧಾರಣೆ ಇದೆ. ಮಾರುಕಟ್ಟೆಯಲ್ಲಿ ತರಕಾರಿಗೂ ಉತ್ತಮ ಬೇಡಿಕೆ ಇದ್ದು, ಧಾರಣೆಯೂ ಕೊಂಚ ನೆಗೆತ ಕಂಡಿದೆ. ಜತೆಗೆ ಹಣ್ಣಿನ ವ್ಯಾಪಾರವೂ ಎಂದಿಗಿಂತ ಉತ್ತಮವಾಗಿದೆ.

ಹೂವಿನ ಖರೀದಿ
ಚೌತಿಯ ಹಬ್ಬದ ವ್ಯಾಪಾರ ಆರಂಭಗೊಂಡಿದ್ದು, ಜನರು ಧಾರಣೆ ನೋಡದೆ ಹೂವಿನ ಖರೀದಿ ನಡೆಸುತ್ತಾರೆ ಎಂದು ಉಜಿರೆಯ ಹೂವಿನ ವರ್ತಕ  ಮಹೇಶ್‌ ತಿಳಿಸಿದ್ದಾರೆ.

ಸೇವಂತಿ ಹೂವಿಗೆ ಬೇಡಿಕೆ
ಸೇವಂತಿ ಹೂವಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದ್ದು, ಸಾಮಾನ್ಯ ದಿನಗಳಲ್ಲಿ  ಮಾರಿಗೆ 30-50 ರೂ. ಇದ್ದ ಧಾರಣೆ  80-100 ರೂ.ಗೆ ಏರಿಕೆಯಾಗಿದೆ. ಉಜಿರೆ ಮಾರುಕಟ್ಟೆಯಲ್ಲಿ  ಮಲ್ಲಿಗೆ ಚೆಂಡಿಗೆ 320 ರೂ. ಇದೆ. ಚೆಂಡು ಹೂವಿಗೂ ಬೇಡಿಕೆ ಇದ್ದು, ಕಾಕಡ, ಗುಲಾಬಿ ಮಾಲೆ, ಬಟನ್‌ ರೋಸ್‌, ಜೀನ್ಯ, ಕಣಗಿಲೆ, ಕನಕಾಂಬರ, ಅಬ್ಬಲಿಗೆ, ತುಳಸಿ ಮಾಲೆ ಹೀಗೆ ಅನೇಕ ಹೂವುಗಳು ಮಾರುಕಟ್ಟೆಯಲ್ಲಿ ಕಂಡುಬಂದಿವೆ.

ಇಂದು ಹೆಚ್ಚು ಓದಿದ್ದು

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

Jan 18, 2019 12:35pm

ರಾಜ್ಯ ಸರ್ಕಾರ ಪತನಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿ ಬೆಂಗಳೂರಿನಲ್ಲಿಮಾಜಿ ಸಚಿವ ಎಚ್‌.ಕೆ.ಪಾಟೀಲ್‌, ಜಯಮಾಲಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

Jan 18, 2019 06:50am

Trending videos

Back to Top