CONNECT WITH US  

ಬಿಷಪ್‌ ಅಲೋಶಿಯಸ್‌ ಅವರಿಗೆ ಬೀಳ್ಕೊಡುಗೆ

ಬಿಷಪ್‌ ಅಲೋಶಿಯಸ್‌ ಪಾವ್ಲ್ ಸೋಜಾ ಅವರನ್ನು ಸಮ್ಮಾನಿಸಲಾಯಿತು. 

ಮಹಾನಗರ: ಕೊಡಿಯಾಲ ಬೈಲ್‌ ಬಿಷಪ್ಸ್‌ ಹೌಸ್‌ನ ಶಾಲೋಮ್‌ ಪ್ರೇಯರ್‌ ಮಿನಿಸ್ಟ್ರಿ ಸಂಸ್ಥೆಯ 3ನೇ ವಾರ್ಷಿಕ ದಿನಾಚರಣೆ ಹಾಗ ಸಂಸ್ಥೆಯ ವತಿಯಿಂದ ನಿರ್ಗಮನ ಬಿಷಪ್‌ ರೆ| ಡಾ| ಅಲೋಶಿಯಸ್‌ ಪಾವ್ಲ್ ಡಿ'ಸೋಜಾ ಅವರಿಗೆ ಬೀಳ್ಕೊಡುಗೆ ಹಾಗೂ ನಿಯೋಜಿತ ಬಿಷಪ್‌ ರೆ| ಡಾ| ಪೀಟರ್‌ ಪಾವ್ಲ್ ಸಲ್ದಾನ್ಹಾ ಅವರಿಗೆ ಸ್ವಾಗತ ಕೋರುವ ಸಮಾರಂಭ ರವಿವಾರ ಜರಗಿತು.

12 ವರ್ಷಗಳಿಂದ ಧರ್ಮ ಪ್ರಾಂತದ ಪ್ರಧಾನ ಗುರುವಾಗಿ ಕಾರ್ಯನಿರ್ವಹಿಸುತ್ತಿರುವ ಮೊ| ಡೆನಿಸ್‌ ಮೊರಾಸ್‌ ಪ್ರಭು ಅವರೂ ಸದ್ಯದಲ್ಲಿಯೇ ನಿವೃತ್ತರಾಗಲಿದ್ದು, ಅವರನ್ನು ಕೂಡ ಈ ಸಂದರ್ಭ ಸಮ್ಮಾನಿಸಲಾಯಿತು. ಬಿಷಪ್ಸ್‌ ಹೌಸ್‌ ಚಾಪೆಲ್‌ನಲ್ಲಿ ಈ ಕಾರ್ಯಕ್ರಮ ನಡೆಯಿತು.

ರೋಸ ಮಿಸ್ತಿಕಾ ಕಾನ್ವೆಂಟ್‌ನ ಸುಪೀರಿಯರ್‌ ಸಿ| ಜುಲಿಯಾನಾ ಅವರು ಬಿಷಪ್‌ ಅಲೋಶಿಯಸ್‌ ಅವರ ಸಮ್ಮಾನ ಪತ್ರವನ್ನು ಹಾಗೂ ಚೇತನ್‌ ಮೆಂಡೊನ್ಸಾ ಅವರು ಮೊ| ಡೆನಿಸ್‌ ಮೊರಾಸ್‌ ಅವರು ಸಮ್ಮಾನ ಪತ್ರವನ್ನು ವಾಚಿಸಿದರು.

ಪ್ರೇರಣೆ ಲಭಿಸಲಿ
ಸಮ್ಮಾನಕ್ಕೆ ಪ್ರತಿಕ್ರಿಯಿಸಿದ ಮೊ| ಡೆನಿಸ್‌ ಮೊರಾಸ್‌ ಪ್ರಭು ಅವರು ಶಾಲೋಮ್‌ ಪ್ರೇಯರ್‌ ಮಿನಿಸ್ಟ್ರಿಯ ಚಟುವಟಿಕೆಗಳಿಂದ ಜನರಲ್ಲಿ ಪ್ರಾರ್ಥನೆಯ ಬಗೆಗಿನ ಒಲವು ಷಹೆಚ್ಚಾಗುವಂತೆ ಪ್ರೇರಣೆ ಲಭಿಸಲಿ ಎಂದು ಹಾರೈಸಿದರು. ಮನೆಗಳಲ್ಲಿ ದೈನಂದಿನ ದೇವರ ಪ್ರಾರ್ಥನೆ ಕುರಿತಂತೆ ಜನರಲ್ಲಿ ಆಸಕ್ತಿ ಹೆಚ್ಚಬೇಕೆಂದು ನಿಯೋಜಿತ ಬಿಷಪ್‌ ರೆ| ಡಾ| ಪೀಟರ್‌ ಪಾವ್ಲ್ ಸಲ್ಡಾನಾ ಹೇಳಿದರು.

ಧರ್ಮ ಪ್ರಾಂತದ ಪಾಲನಾ ಪರಿಷತ್‌ ಕಾರ್ಯದರ್ಶಿ ಎಂ.ಪಿ. ನೊರೋನ್ಹಾ ಅವರು ಸ್ವಾಗತಿಸಿ ಪ್ರಸ್ತಾವನೆಗೈದರು. ವಂ| ಮನೋಹರ್‌, ವಂ| ಜಾರ್ಜ್‌ ಕರಮವಲ್ಲಿ, ಸಿ| ಲಿಲ್ಲಿಸ್‌, ಸಿ| ಲೆತೀಶಿಯಾ, ವಂ| ಅನಿಲ್‌ ಆಲ್ಪ್ರೆ ಡ್‌ ಅವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಬಿಷಪ್‌ ಅಲೋಶಿಯಸ್‌ ಪಾವ್ಲ್  ಡಿ'ಸೋಜಾ ನೇತೃತ್ವದಲ್ಲಿ ಬಲಿಪೂಜೆ ನಡೆಯಿತು. ರೆ| ಡಾ| ಪೀಟರ್‌ ಪಾವ್ಲ್ ಸಲ್ದಾನ್ಹಾ ಅವರು ಪ್ರವಚನ ನೀಡಿದರು. 

ದೇವರಲ್ಲಿ ವಿಶ್ವಾಸವಿರಿಸಿ
ದೇವರಲ್ಲಿ ಅಚಲ ವಿಶ್ವಾಸವಿರಿಸಿ ಪ್ರಾರ್ಥಿಸುವುದರಿಂದ ಭಕ್ತರ ಬದುಕಿನಲ್ಲಿ ಪರಿವರ್ತನೆ ಸಾಧ್ಯವಾಗುತ್ತದೆ. ಶಾಲೋಮ್‌ ಪ್ರೇಯರ್‌ ಮಿನಿಸ್ಟ್ರಿ ಈ ದಿಶೆಯಯಲ್ಲಿ ಜನರಲ್ಲಿ ಪ್ರಾರ್ಥನೆಯ ಮಹತ್ವವನ್ನು ತಿಳಿಸುವಲ್ಲಿ ಮಾದರಿಯಾಗಿ ಕಾರ್ಯ ನಿರ್ವ ಹಿಸುತ್ತಿದೆ ಎಂದು ಬಿಷಪ್‌ ಅಲೋಶಿಯಸ್‌ ಪಾವ್ಲ್ 
ಡಿ'ಸೋಜಾ ಅವರು ಶ್ಲಾಘಿಸಿದರು.


Trending videos

Back to Top