CONNECT WITH US  

ತೆಂಗಿನ ಕಾಯಿ, ಕೊಬ್ಬರಿ ಮತ್ತು ತೆಂಗಿನ ಎಣ್ಣೆಯ ಧಾರಣೆ ಗಗನಮುಖೀಯಾಗುತ್ತಿದೆ

ಪುತ್ತೂರು : ಮಾರುಕಟ್ಟೆಯಲ್ಲಿ ತೆಂಗಿನ ಕಾಯಿ ಮತ್ತು ಕೊಬ್ಬರಿಯ ಬೇಡಿಕೆ ಮತ್ತು ಪೂರೈಕೆಯ ಅಂತರ ಹೆಚ್ಚಾಗುತ್ತಿದ್ದು, ಇದರ ಪರಿಣಾಮವಾಗಿ ತೆಂಗಿನ ಕಾಯಿ, ಕೊಬ್ಬರಿ ಮತ್ತು ತೆಂಗಿನ ಎಣ್ಣೆಯ ಧಾರಣೆ ಗಗನಮುಖೀಯಾಗುತ್ತಿದೆ.

ಮಂಗಳವಾರದ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಕೆ.ಜಿ.ಗೆ 30 ರೂ., ಕೊಬ್ಬರಿ ಕೆ.ಜಿ.ಗೆ 120 ರೂ. ಹಾಗೂ ತೆಂಗಿನ ಎಣ್ಣೆ ಲೀಟರ್‌ಗೆ 170 ರೂ. ಹಾಗೂ ಕೆ.ಜಿ.ಗೆ 175 ರೂ.ಗಳಿಗೆ ಧಾರಣೆ ಏರಿಸಿಕೊಂಡಿದೆ.

ತೆಂಗಿನ ತೋಟಗಳಲ್ಲಿ ಕೋತಿಗಳ ಹಾವಳಿ ಜತೆಗೆ ತೆಂಗಿನ ಬೆಳೆಗೆ ಕಾಡುತ್ತಿರುವ ನುಸಿ ರೋಗ ಪೀಡೆ ಫಸಲು ಇಳಿಮುಖವಾಗಲು ಕಾರಣವಾಗಿದೆ. ಹೊರ ಜಿಲ್ಲೆಗಳಿಂದ ಎಳನೀರು ಮಾತ್ರ ಇಲ್ಲಿಗೆ ಸರಬರಾಜಾಗುತ್ತಿದೆ. ಹೊರ ಜಿಲ್ಲೆಗಳ ತೆಂಗಿನ ಕಾಯಿಗೆ ಇಲ್ಲಿ ಬೇಡಿಕೆ ಇಲ್ಲ. ಕಾಸರಗೋಡು ಸೇರಿದಂತೆ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಬೆಳೆಯು ತೆಂಗಿನ ಕಾಯಿಗೆ ಮಾತ್ರ ಇಲ್ಲಿ ಬೇಡಿಕೆ ಇದೆ.

ಡಿಸೆಂಬರ್‌ ತಿಂಗಳಿನಿಂದ ಧಾರ್ಮಿಕ ಕಾರ್ಯಕ್ರಮಗಳು, ಶಬರಿಮಲೆ ಯಾತ್ರೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ತೆಂಗಿನ ಕಾಯಿಯ ಧಾರಣೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಮಾರುಕಟ್ಟೆಯಲ್ಲಿ ಕಂಡು ಬಂದಿದೆ. ಇದರ ಪರಿಣಾಮ ಕೊಬ್ಬರಿ ಮತ್ತು ತೆಂಗಿನ ಎಣ್ಣೆಯ ಧಾರಣೆ ಕೂಡ ಏರುಮುಖವಾಗಲಿದೆ. ತೆಂಗಿನ ಕಾಯಿ, ಕೊಬ್ಬರಿ ಮತ್ತು ತೆಂಗಿನ ಎಣ್ಣೆಯ ಧಾರಣೆ ವಾರದಿಂದ ವಾರಕ್ಕೆ ನೆಗೆತ ಕಾಣುತ್ತಾ ಬಂದಿದೆ. ಅದೇ ರೀತಿ ಬೇಡಿಕೆ ಮತ್ತು ಪೂರೈಕೆಯ ಪ್ರಮಾಣದ ಅಂತರ ಕೂಡ ವಾರದಿಂದ ವಾರಕ್ಕೆ ಹೆಚ್ಚಾಗುತ್ತಲೇ ಬಂದಿದೆ.

Trending videos

Back to Top