CONNECT WITH US  

ಬಾಲಕಿ ಭಾಳ, ಈಕಿ! ಭವಾನಿ ಬಣ್ಣ ಹಚ್ಚಿದರೆ ದಂಗಾಗಿಹೋಗ್ತೀರ !

ಭವಾನಿ ಮಹಾಲಿಂಗ ಜಾಲಿಹಾಳ ಎರಡನೇ ಕ್ಲಾಸ್‌ನಲ್ಲಿ ಓದುತ್ತಿರುವ ಪೋರಿ. ಬಾಗಲಕೋಟೆಯ ಜಮಖಂಡಿ ಈಕೆಯ ಊರು. ಎರಡನೇ ವರ್ಷದಿಂದಲೇ ಕಲೆಯ ಬಗ್ಗೆ ಪ್ರೀತಿ. ಟಿ.ವಿ ಪರದೆಯ ಮೇಲೆ ಬರುವ ನೃತ್ಯ, ಮಾತುಗಳನ್ನು ತನ್ನದೇ ಶೈಲಿಯಲ್ಲಿ ಹೇಳಿ ರಂಜಿಸುತ್ತಿದ್ದಳು. ಈಗ ತನ್ನ ಅಭಿಯನ, ನೃತ್ಯಕ್ಕೆ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರತಿಭೆ. ಜಮಖಂಡಿ ಉತ್ಸವ, ಸಾಹಿತ್ಯ ಸಮ್ಮೇಳನ, ಕನ್ನಡ ರಾಜ್ಯೋತ್ಸವದಲ್ಲೆಲ್ಲ ಫ್ಯಾನ್ಸಿ ಡ್ರೆಸ್‌ ಅರ್ಥಾತ್‌ ಛದ್ಮವೇಷದ ಮೂಲಕ ಶಹಭಾಸ್‌ಗಿರಿ ಗಿಟ್ಟಿಸಿಕೊಂಡ ಬಾಲೆ.
*
ಭವಾನಿ ಹುಟ್ಟೂರು ದೊಡ್ಡ ಪಟ್ಟಣವೇನಲ್ಲ. ನಗರದ ಮಕ್ಕಳಂತೆ ಕಲಾಪ್ರದರ್ಶನಕ್ಕೆ ವಿಪರೀತ ಅವಕಾಶಗಳೇನಿಲ್ಲ. ಆದರೆ ಈ ಮಿತಿಯನ್ನು ದಾಟಿ ಏಳನೇ ವಯಸ್ಸಿನಲ್ಲೇ ಬಾಗಲಕೋಟೆ ಜಿಲ್ಲೆಯಲ್ಲಿ ಹೆಸರು ಮಾಡಿರುವ ಪ್ರತಿಭೆ ಭವಾನಿ. ಪುಟ್ಟ ಮಗುವಿನಲ್ಲೇ ಟಿ.ವಿಯಲ್ಲಿ ಬರುತ್ತಿರುವ ನೃತ್ಯ, ಅಭಿನಯವನ್ನು ಎವೆಮುಚ್ಚದೆ ನೋಡುತ್ತಿದ್ದವಳು ನಿಧಾನಕ್ಕೆ ಅದನ್ನು ಅನುಕರಿಸಲು ಆರಂಭಿಸಿದಳು. ನಂತರ ಪೋಷಕರ ಸಹಕಾರದಲ್ಲಿ ತಾನೇ ಸ್ವತಂತ್ರ್ಯವಾಗಿ ಸಂಭಾಷಣೆ ಹೇಳಲು ಆರಂಭಿಸಿದಳು. ಅದಕ್ಕೆ ತಕ್ಕ ಅಭಿನಯವನ್ನೂ ಕಲಿತಳು. ಇಂದು ಭವಾನಿ ಸಂಗೀತ, ನೃತ್ಯ, ರೂಪಕದಲ್ಲಿ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳುವ ಪ್ರತಿಭೆ.  ತಾಲೂಕು, ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾಳೆ. ಬೆಳಗಾವಿ, ಗೋಕಾಕ, ಜಯಪೂರ ಜಿಲ್ಲೆಗಳಲ್ಲಿ ಪ್ರದರ್ಶನ ನೀಡುವ ಮೂಲಕ ಹಲವಾರು ಪ್ರಶಸ್ತಿಗಳನ್ನು ತನ್ನ ಮುಡಿಗೆರಿಸಿಕೊಂಡಿದ್ದಾಳೆ. ಅತೀ ಶೀಘ್ರದಲ್ಲಿ ದೂರದರ್ಶನದ ಮಕ್ಕಳ ಕಲೆಗಳ ಭಾಗದಲ್ಲಿ ಭವಾನಿ ಜಾಲಿಹಾಳ ಪ್ರದರ್ಶನ ನೀಡಲಿದ್ದಾಳೆ. 

ಐತಿಹಾಸಿಕ ವ್ಯಕ್ತಿಗಳು,  ಸ್ವಾತಂತ್ರ್ಯ ಹೋರಾಟಗಾರರ ಛದ್ಮಭೂಷಣ ಸಹಿತ ಸಂಭಾಷಣೆ, ಅನುಕರಣೆಗಳು ಅದ್ಭುತವಾಗಿದೆ. ವೀರರಾಣಿ ಕಿತ್ತೂರ ಚೆನ್ನಮ್ಮ, ಒನಕೆ ಓಬವ್ವ, ಶಿವಶರಣೆ ಅಕ್ಕಮಹಾದೇವಿ ಪಾತ್ರ, ನವದುರ್ಗಿ ವೇಷ, ಶಿವಪಾರ್ವತಿ ನೃತ್ಯ, ರಾಧೆ ವೇಷ, ಮಂಜುನಾಥ ಭಕ್ತಿ ನೃತ್ಯ, ಆಶ್ರಮ ದಾಸಿಯರ ಪಾತ್ರಗಳನ್ನು ನಿರ್ವಹಿಸಿರುವ ಕುಮಾರಿ ಭವಾನಿ ಜಾಲಿಹಾಳ ತಾಲೂಕು ಉತ್ಸವ, ನವರಾತ್ರಿ ಉತ್ಸವ, ಕನ್ನಡ ರಾಜ್ಯೋತ್ಸವ, ಕನ್ನಡ ಸಾಹಿತ್ಯ ಸಮ್ಮೇಳನ, ಶಿವರಾತ್ರಿ ಕಾರ್ಯಕ್ರಮ, ಕೃಷ್ಣ ಜನ್ಮಾಷ್ಠಮಿ,  ಕಾರ್ತಿಕೋತ್ಸವಗಳಲ್ಲಿ ಪ್ರತಿಭೆ ಮೆರೆದಿದ್ದಾಳೆ. ಇದಲ್ಲದೇ ನ್ಯೂ ನ್ಯಾಷನಲ್‌, ಶಾರದಾ ಶಾಲೆಗಳಲ್ಲಿ, ಜಾತ್ರೆಗಳ ಉದ್ಘಾಟನಾ ಸಮಾರಂಭ ಸೇರಿದಂತೆ 60ಕ್ಕೂ ಹೆಚ್ಚು ಸ್ಥಳಗಳಲ್ಲಿ ಈ ಬಾಲಪ್ರತಿಭೆ ಕಲಾ ಪ್ರದರ್ಶನ ನೀಡಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾಳೆ. 

ಈ ಪುಟ್ಟ ಹುಡುಗಿಗೆ ಸ್ಟೇಜ್‌ ಮೇಲೇರಿದರೆ ಸಣ್ಣ ಅಳುಕೂ ಇಲ್ಲ. ಪಾತ್ರವೇ ತಾನಾಗಿ ವೀರಾವೇಷದ ಡೈಲಾಗ್‌ ಉದುರಿಸುವಾಗ ಪ್ರೇಕ್ಷಕರು ಕರತಾಡನ ಮಾಡುತ್ತಾರೆ. 

ಗುರುವಿನ ಆಶ್ರಯ ಪಡೆಯದೇ, ಸಂಗೀತ ಶಾಲೆಗೆ ಹೋಗದೇ ಕೇವಲ ದೃಶ್ಯ ಮಾಧ್ಯಮ, ಆಡಿಯೋ ಹಾಡುಗಳನ್ನು ನೋಡುತ್ತ ಕಲಿತ ಭವಾನಿ ಸಾಧನೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಈ  ಬಾಲಪ್ರತಿಭೆ ಭವಾನಿ ಕಿತ್ತೂರ ಚೆನ್ನಮ್ಮ ವೇಷಧರಿಸಿ ಆಂಗ್ಲರೊಂದಿಗೆ ರೋಷಭರಿತ ಸಂಭಾಷಿಸುವ ರೂಪಕ ವೀಕ್ಷಿಸಿ  ಕನ್ನಡ ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಮೆಚ್ಚುಗೆ ಮಾತನ್ನಾಡಿದ್ದಾರೆ. ಈಕೆಯನ್ನು ಸನ್ಮಾನಿಸಿದ್ದಾರೆ. ಜಮಖಂಡಿ ಉತ್ಸವದಲ್ಲಿ ಭವಾನಿಯ ಅದ್ಭುತ ಕಲೆಗೆ  ಶಾಸಕ ಸಿದ್ದು ನ್ಯಾಮಗೌಡರು ಪ್ರಶಂಸೆ ವ್ಯಕ್ತಪಡಿಸಿ ಪುಟ್ಟ ಬಾಲಕಿ ಭವಾನಿಯನ್ನು ಗೌರವಿಸಿದ್ದಾರೆ.
ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಸೂಕ್ಷತೆ ಅರಿತರೆ ಕಲೆ ನಮ್ಮಿಂದ ದೂರ ಹೋಗುವುದಿಲ್ಲ ಎಂಬ ಮಾತಿಗೆ ಸಾಕ್ಷಿಯಂತಿದ್ದಾಳೆ  ಭವಾನಿ. ಓದುವುದರಲ್ಲೂ ಮುಂದಿರುವ ಈಕೆಗೆ ತಂದೆ ತಾಯಿಯಲ್ಲದೇ ಕುಟುಂಬದವರ ಪ್ರೋತ್ಸಾಹವೂ ಇದೆ. 

ಭವಾನಿ ಮಹಾಲಿಂಗ ಜಾಲಿಹಾಳ

ಓದಿ¤ರೋದು: 2 ನೇ ಕ್ಲಾಸ್‌
ಶಾಲೆ: ಶ್ರೀ ಜ್ಯೋತಿ ಪೂರ್ವ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆ
ತಾಯಿ, ತಂದೆ: ಶೀಲಾ, ಮಹಾಲಿಂಗ
ಸಾಧನೆ: ವೀರರಾಣಿ ಕಿತ್ತೂರ ಚೆನ್ನಮ್ಮ, ಒನಕೆ ಓಬವ್ವ, ಶಿವಶರಣೆ ಅಕ್ಕಮಹಾದೇವಿ ಪಾತ್ರ, ನವದುರ್ಗಿ ವೇಷ, ಶಿವಪಾರ್ವತಿ ನೃತ್ಯ, ರಾಧೆ, ಮಂಜುನಾಥ ಭಕ್ತಿ ನೃತ್ಯ, ಆಶ್ರಮ ದಾಸಿ ಮೊದಲಾದ ಪಾತ್ರಗಳನ್ನು ನಿರ್ವಹಣೆ. ಸಚಿವೆ, ಶಾಸಕರಿಂದ ಗೌರವ ಸನ್ಮಾನ. ತಾಲೂಕು ಉತ್ಸವ, ನವರಾತ್ರಿ ಉತ್ಸವ, ಕನ್ನಡ ರಾಜ್ಯೋತ್ಸವ, ಕನ್ನಡ ಸಾಹಿತ್ಯ ಸಮ್ಮೇಳನ, ಶಿವರಾತ್ರಿ ಕಾರ್ಯಕ್ರಮ, ಕೃಷ್ಣ ಜನ್ಮಾಷ್ಠಮಿ ..ಹೀಗೆ 60 ಕಡೆ ಪ್ರದರ್ಶನ ನೀಡಿ ಶಹಭಾಸ್‌ಗಿರಿ ಪಡೆದಿದ್ದಾಳೆ.  

ರಾಘವೇಂದ್ರ ಬೆಟ್ಟಕೊಪ್ಪ

ಇಂದು ಹೆಚ್ಚು ಓದಿದ್ದು

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

Jan 18, 2019 12:35pm

ರಾಜ್ಯ ಸರ್ಕಾರ ಪತನಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿ ಬೆಂಗಳೂರಿನಲ್ಲಿಮಾಜಿ ಸಚಿವ ಎಚ್‌.ಕೆ.ಪಾಟೀಲ್‌, ಜಯಮಾಲಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

Jan 18, 2019 06:50am

Trending videos

Back to Top