CONNECT WITH US  

ಕರುಣ್‌ ನಾಯರ್‌ ಕಡೆಗಣನೆ: ಗಾವಸ್ಕರ್‌ ಕಿಡಿ

ಲಂಡನ್‌: ಇಂಗ್ಲೆಂಡ್‌ ವಿರುದ್ಧದ ಅಂತಿಮ ಟೆಸ್ಟ್‌ ಪಂದ್ಯಕ್ಕೆ ಕರುಣ್‌ ನಾಯರ್‌ ಅವರನ್ನು ಕಡೆಗಣಿಸಿದ ಕ್ರಮವನ್ನು ಮಾಜಿ ಆರಂಭಕಾರ ಸುನೀಲ್‌ ಗಾವಸ್ಕರ್‌ ಕಟುವಾದ ಶಬ್ದಗಳಲ್ಲಿ ಟೀಕಿಸಿದ್ದಾರೆ. 

"ಆಯ್ಕೆಗಾರರೇನೋ ಕರುಣ್‌ ನಾಯರ್‌ ಅವರನ್ನು ಆರಿಸಿದರು. ಆದರೆ ತಂಡದ ಆಡಳಿತ ಮಂಡಳಿಗೆ ಅವರು ಬೇಕಾಗಿಲ್ಲ. ಕಾರಣ, ಅವರು ಆಡಳಿತ ಮಂಡಳಿಯ ನೆಚ್ಚಿನ ಆಟಗಾರರಲ್ಲ. ಹಾಗಾದರೆ ನಾಯರ್‌ ಆಯ್ಕೆಯಾಗಲು ಇನ್ನೇನು ಮಾಡಬೇಕು? ಅವರನ್ನು ಕಡೆಗಣಿಸಿದ್ದು ಶುದ್ಧ ನಾನ್‌ಸೆನ್ಸ್‌' ಎಂಬುದಾಗಿ "ಸೋನಿ ಸಿಕ್ಸ್‌'ನ "ಪ್ರಿ ಮ್ಯಾಚ್‌ ಶೋ' ಕಾರ್ಯಕ್ರಮದಲ್ಲಿ ಗಾವಸ್ಕರ್‌ ಕಿಡಿಕಾರಿದರು. 

"ತನ್ನನ್ನು ಏಕೆ ಆರಿಸಲಿಲ್ಲ ಎಂದು ಆಡಳಿತ ಮಂಡಳಿಯನ್ನು ಪ್ರಶ್ನಿಸುವ, ಇದಕ್ಕೆ ಉತ್ತರ ನಿರೀಕ್ಷಿಸುವ ಹಕ್ಕು ಕರುಣ್‌ ನಾಯರ್‌ ಅವರಿಗಿದೆ' ಎಂದು ಗಾವಸ್ಕರ್‌ ಹೇಳಿದರು. ಇದೇ ಸಂದರ್ಭದಲ್ಲಿ ಟೆಸ್ಟ್‌ ಕ್ಯಾಪ್‌ ಧರಿಸಿದ ಹನುಮ ವಿಹಾರಿಗೆ ಅವರು ಶುಭ ಕೋರಿದರು.

ವೀರೇಂದ್ರ ಸೆಹವಾಗ್‌ ಹೊರತು ಪಡಿಸಿದರೆ ಭಾರತದ ಟೆಸ್ಟ್‌ ಇತಿಹಾಸದಲ್ಲಿ ತ್ರಿಶತಕ ಬಾರಿಸಿದ ಏಕೈಕ ಆಟಗಾರನೆಂಬ ಹಿರಿಮೆ ಕರ್ನಾಟಕದ ಕರುಣ್‌ ನಾಯರ್‌ ಅವರದ್ದು.  ಪ್ರಸಕ್ತ ಇಂಗ್ಲೆಂಡ್‌ ಪ್ರವಾಸದಲ್ಲಿ ನಾಯರ್‌ ಕೇವಲ ಒಂದು ಅಭ್ಯಾಸ ಪಂದ್ಯದಲ್ಲಷ್ಟೇ ಆಡಿದ್ದಾರೆ. 

ಆಶಿಷ್‌ ನೆಹ್ರಾ ಆಕ್ರೋಶ
ಮಾಜಿ ಎಡಗೈ ಬೌಲರ್‌ ಆಶಿಷ್‌ ನೆಹ್ರಾ ಕೂಡ ನಾಯರ್‌ ಕಡೆಗಣಿಸಿದ್ದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. "ನಾಯರ್‌ ಇಂಗ್ಲೆಂಡಿನಲ್ಲಿರುವುದು ಚೋಲೆ- ಕುಲ್ಚಾ ಮಾರಾಟ ಮಾಡ ಲಿಕ್ಕೆ...' ಎನ್ನುವ ಮೂಲಕ ಆಡಳಿತ ಮಂಡಳಿಯನ್ನು ತಿವಿದಿದ್ದಾರೆ.


Trending videos

Back to Top