CONNECT WITH US  

ಕಾಲು ಜಾರಿ ಕೆರೆಗೆ ಬಿದ್ದು ಅಯ್ಯಪ್ಪ ವ್ರತಧಾರಿ ಸಾವು

ಸುಳ್ಯಪದವು: ಪುತ್ತೂರು ತಾಲೂಕು ನೆಟ್ಟಣಿಗೆಮುಟ್ನೂರು ಗ್ರಾಮದ ನೆಲ್ಲಿತಡ್ಕದಲ್ಲಿ ಪಟ್ಲಡ್ಕ ನಿವಾಸಿ ಅಯ್ಯಪ್ಪ ವ್ರತಧಾರಿ ಅಶೋಕ(20) ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಡಿ.30ರಂದು ಸಂಭವಿಸಿದೆ.

ಮಧ್ಯಾಹ್ನ ಈಶ್ವರಮಂಗಲ ಪೇಟೆಯಿಂದ ಇವರು ಊಟಕ್ಕೆಂದು ನೆಲ್ಲಿತಡ್ಕದಲ್ಲಿರುವ ಅಯ್ಯಪ್ಪ ವ್ರತಧಾರಿಗಳ ಶಿಬಿರಕ್ಕೆ ಹೋಗಿ ಸ್ನಾನ ಮಾಡಲು ಕೆರೆಯಿಂದ ನೀರನ್ನು ತೆಗೆಯುವ ಸಂದರ್ಭದಲ್ಲಿ ಕಾಲು ಜಾರಿ ಕೆರೆಗೆ ಬಿದ್ದು ಮೃತ ಪಟ್ಟಿರುತ್ತಾರೆ.

ಸ್ಥಳಾಕ್ಕಾಗಮಿಸಿದ ಪುತ್ತೂರು ಆಗ್ನಿಶಾಮಕ ದಳದವರು ನೀರಿನಲ್ಲಿ ಮುಳುಗಿದ್ದ ಮೃತದೇಹವನ್ನು ಮೇಲಕ್ಕೆತ್ತಿದರು. ಮೃತರು ಅವಿವಾಹಿತರಾಗಿದ್ದು ತಂದೆ, ತಾಯಿ, ಇಬ್ಬರು ಸಹೋದರಿ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ.

ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Trending videos

Back to Top