CONNECT WITH US  

ಬೈಕ್‌ ಸವಾರರ ಮೇಲೆ ತಂಡದಿಂದ ಹಲ್ಲೆ

ಮಂಗಳೂರು : ನಗರದ ಮಂಗಳಾ ಕ್ರೀಡಾಂಗಣ ಬಳಿ ಬುಧವಾರ ಬೆಳಗ್ಗೆ ಬೈಕ್‌ ಸವಾರ ಉಳ್ಳಾಲ ಅಲೇಕಳದ ಅಹಮದ್‌ ಇಶಾಕ್‌ ಮತ್ತು ಸಹ ಸವಾರ ತಸ್ಲಿಂ ಶರೀಫ್‌ ಅವರ ಮೇಲೆ ಕಾರಿನಲ್ಲಿ ಆಗಮಿಸಿದ ತಂಡವೊಂದು ಕೈಯಿಂದ ಹೊಡೆದು ಬಳಿಕ ತುಳಿದು ಹಲ್ಲೆ ನಡೆಸಿದೆ. ಸೋನಿ ಮತ್ತು ಇತರ ಮೂವರು ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದೆ.

ತಸ್ಲಿಂ ಶರೀಫ್‌ ಅವರು ಅಹ್ಮದ್‌ ಇಶಾಕ್‌ ಅವರ ಬೈಕ್‌ನಲ್ಲಿ ಸಹ ಸವಾರರಾಗಿ ಸ್ಟೇಟ್‌ ಬ್ಯಾಂಕ್‌ ಕಡೆಗೆ ಪ್ರಯಾಣಿಸುತ್ತಿದ್ದಾಗ ಮಂಗಳಾ ಕ್ರೀಡಾಂಗಣ ಬಳಿ ರಸ್ತೆ ದಾಟುತ್ತಿದ್ದ ಪಾದಚಾರಿಯೊಬ್ಬರು ಅಡ್ಡ ಬಂದಿದ್ದರು. ಬೈಕ್‌ ನಿಲ್ಲಿಸಿ ಪಾದಚಾರಿಗೆ ''''''ಸ್ವಲ್ಪ ಎಚ್ಚರದಿಂದ ರಸ್ತೆ ದಾಟುವಂತೆ'' ಸೂಚನೆ ನೀಡುತ್ತಿದ್ದಾಗ ಹಿಂಬದಿಯಿಂದ ಕಾರು ಚಲಾಯಿಸಿಕೊಂಡು ಬಂದ ವ್ಯಕ್ತಿ ಕಾರನ್ನು ಬೈಕ್‌ಗೆ ಅಡ್ಡ ನಿಲ್ಲಿಸಿದ. ಬಳಿಕ ಅದರಲ್ಲಿದ್ದ 4 ಮಂದಿ ಕೆಳಗಿಳಿದು ತಸ್ಲಿಂ ಅವರ ಮುಖ ಮತ್ತು ರಟ್ಟೆಗೆ ಹಲ್ಲೆ ಮಾಡಿದ್ದಾರೆ; ಅಹ್ಮದ್‌ ಇಶಾಕ್‌ ಅವರಿಗೂ ಹೊಡೆದಿದ್ದಾರೆ ಎಂದು ಆಪಾದಿಸಲಾಗಿದೆ.

ಬರ್ಕೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Trending videos

Back to Top