CONNECT WITH US  

ಅತ್ಯಾಚಾರ ಪ್ರಕರಣ ದಾಖಲಿಸಲು ಬಿಜೆಪಿ ಆಗ್ರಹ

ಮಂಗಳೂರು: ದೇರಳಕಟ್ಟೆಯಲ್ಲಿ ಡಿ. 18ರಂದು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯನ್ನು ಅಪಹರಿಸಿ ಕೊಲೆ ಬೆದರಿಕೆ ಹಾಕಿ ಅತ್ಯಾಚಾರ ಮಾಡಿಸಿ ಬ್ಲೂಫಿಲ್ಮ್ ತೆಗೆದು ಹಣಕ್ಕಾಗಿ ಬ್ಲಾಕ್‌ವೆàಲ್‌ ಮಾಡಿದ ಆರೋಪಿಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸದೆ ಮತ್ತು ವೈದ್ಯಕೀಯ ಪರೀಕ್ಷೆಯನ್ನೂ ನಡೆಸದೆ ಒಟ್ಟು ಪ್ರಕರಣವನ್ನು ದುರ್ಬಲಗೊಳಿಸುವ ಯತ್ನ ನಡೆದಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆರೋಪಿಸಿದ್ದಾರೆ.

ಪೊಲೀಸರು ಅತ್ಯಾಚಾರ ಕೇಸು ದಾಖಲಿಸದಿರುವುದೇಕೆ ಮತ್ತು ವಿದ್ಯಾರ್ಥಿ- ವಿದ್ಯಾರ್ಥಿನಿಯ ವೈದ್ಯಕೀಯ ಪರೀಕ್ಷೆಯನ್ನು ನಡೆಸಿಲ್ಲವೇಕೆ? ಇದರ ಹಿಂದೆ ಯಾರ ಕೈವಾಡವಿದೆ ಎಂದವರು ಪ್ರಶ್ನಿಸಿದ್ದಾರೆ.

ವ್ಯವಸ್ಥಿತ ಜಾಲ

ಈ ಪ್ರಕರಣದ ಹಿಂದೆ ದೊಡ್ಡ ಜಾಲವಿದೆ; ಆರೋಪಿಗಳ ಮೇಲೆ ಇದು ಮೊದಲ ಪ್ರಕರಣವಲ್ಲ. ಬೇರೆ ಕೆಲವು ಪ್ರಕರಣಗಳಲ್ಲಿ ಭಾಗಿಯಾದವರೇ ಆಗಿದ್ದಾರೆ. ಡ್ರಗ್‌ ಮಾಫಿಯಾ, ಬ್ಲಾ éಕ್‌ವೆುàಲ್‌ ಮಾಡಿ ಹಣ ಮಾಡುವ ವ್ಯವಸ್ಥಿತ ಜಾಲವಿದೆ. ಇದಕ್ಕೂ ಕರಾವಳಿ ಕರ್ನಾಟಕದಲ್ಲಿ 3,000ಕ್ಕೂ ಹೆಚ್ಚು ಮಂದಿ ಹೆಣ್ಮಕ್ಕಳು ಕಾಣೆಯಾಗಿರುವ ಪ್ರಕರಣಕ್ಕೂ ಸಂಬಂಧವಿದೆ ಎಂದವರು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬ್ಲೂ ಫಿಲ್ಮ್, ಡ್ರಗ್‌ ಮಾಫಿಯಾ, ಬ್ಲಾ éಕ್‌ವೆುàಲ್‌, ಹೆಣ್ಮಕ್ಕಳನ್ನು ಅಪಹರಿಸಿ ಮತಾಂತರ, ಲವ್‌ ಜೆಹಾದ್‌ ಕೃತ್ಯಗಳಲ್ಲಿ ತಂಡವೊಂದು ವ್ಯವಸ್ಥಿತವಾಗಿ ಕಾರ್ಯಾಚರಿಸುತ್ತಿದೆ. ಆದರೆ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆಪಾದಿಸಿದರು.

ಈಗೇಕೆ ಮೌನ?

ಪಡೀಲ್‌ ಹೋಂ ಸ್ಟೇ ದಾಳಿ ಸಂಭವಿಸಿದಾಗ ರಾಜ್ಯದಲ್ಲಿ ಬಿಜೆಪಿ ಸರಕಾರವಿತ್ತು. ಆಗ ಅಲ್ಲಿ ಅತ್ಯಾಚಾರ ನಡೆಯದಿದ್ದರೂ ವಿಪಕ್ಷದದಲ್ಲಿದ್ದ ಕಾಂಗ್ರೆಸ್‌ ಯಾವ ರೀತಿ ವರ್ತಿಸಿತ್ತು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದೇ ಕಾಂಗ್ರೆಸ್‌ ಪಕ್ಷ ಈಗ ಯಾಕೆ ಮೌನವಾಗಿದೆ? ಆರೋಪಿಗಳ ರಕ್ಷಣೆಗೆ ಒಳಗಿಂದೊಳಗೆ ಪ್ರಯತ್ನ ನಡೆಯುತ್ತಿದೆ ಎಂಬ ಗುಮಾನಿ ಇದೆ ಎಂದು ಸಿ.ಟಿ. ರವಿ ತಿಳಿಸಿದರು.

ನೈತಿಕ ಪೊಲೀಸ್‌ಗಿರಿಯನ್ನು ಸಹಿಸುವುದಿಲ್ಲ ಎಂದು ಹೇಳುವ ಕಾಂಗ್ರೆಸಿಗರು ಕ್ರಿಮಿನಲ್‌ಗ‌ಳನ್ನು ಹೇಗೆ ಸಹಿಸುತ್ತಾರೆ? ಬ್ಲಾ éಕ್‌ವೆುàಲ್‌ ಮಾಡಿದವರ ಮತ್ತು ನೈಜ ಗೂಂಡಾಗಳ ರಕ್ಷಣೆ ಯಾಕೆ? ಈ ಕ್ರಿಮಿನಲ್‌ಗ‌ಳಿಗೆ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ದಂಡ ಸಂಹಿತೆಯಲ್ಲಿರುವ ಎಲ್ಲ ಸೆಕ್ಷನ್‌ಗಳನ್ನು ಅನ್ವಯಿಸಿದರೂ ಕಡಿಮೆಯೇ ಎಂದ ಅವರು, ಈ ಜಿಲ್ಲೆಯ ಸಚಿವರ ಮೇಲೆ ನನಗೆ ನಂಬಿಕೆ ಇಲ್ಲ; ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳು ವೈಯಕ್ತಿಕವಾಗಿ ಗಮನ ಹರಿಸಿ ಈ ಕೂಡಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು; ಮೊಕದ್ದಮೆಯನ್ನು ದುರ್ಬಲಗೊಳಿಸಿ ಆರೋಪಿಗಳು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಡಬಾರದು ಎಂದು ಆಗ್ರಹಿಸಿದರು.

ಈಗ ಯಾರ ರಾಜೀನಾಮೆ ಕೊಡಿಸ್ತೀರಿ?

ಹೋಂ ಸ್ಟೇ ದಾಳಿ ಸಂದರ್ಭದಲ್ಲಿ ಬಿಜೆಪಿ ಸರಕಾರ ಪ್ರಕರಣ ದುರ್ಬಲಗೊಳಿಸಲಿಲ್ಲ; ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್‌ ಆಗ ಗೃಹ ಸಚಿವರ ಮತ್ತು ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿತ್ತು ಎಂದು ನೆನಪಿಸಿದ ಅವರು ಈಗ ಯಾರ ರಾಜೀನಾಮೆ ಕೊಡಿಸ್ತೀರಿ ರಮಾನಾಥ ರೈಗಳೇ, ಖಾದರ್‌ ಅವರೇ ಎಂದು ಪ್ರಶ್ನಿಸಿದರು.

ಈ ಜಾಲವನ್ನು ಮಟ್ಟ ಹಾಕದಿದ್ದರೆ ಬಿಜೆಪಿ ಈ ವಿಷಯವನ್ನೆತ್ತಿಕೊಂಡು ಬೀದಿಗಿಳಿದು ಹೋರಾಟ ಮಾಡಲಿದೆ ಎಂದ ಅವರು, ಪರಿಷ್ಕೃತ ಎಫ್‌ಐಆರ್‌ನ್ನು ಕೂಡಲೇ ದಾಖಲಿಸಬೇಕೆಂದು ಆಗ್ರಹಿಸಿದರು.

ದೇರಳಕಟ್ಟೆ ಪ್ರಕರಣದ ಬಳಿಕ ಕೊಣಾಜೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮತ್ತೂಂದು ಘಟನೆ ಸಂಭವಿಸಿದೆ. ಅದನ್ನು ಮತ್ತು ಬಂಟ್ವಾಳದ ಜಯಂತ್‌ ಪೂಜಾರಿ ಪ್ರಕರಣ, ಕಾರವಾರದ ಆರ್‌.ಎನ್‌. ನಾಯಕ್‌ ಕೊಲೆ ಪ್ರಕರಣ- ಇವೆಲ್ಲವುಗಳನ್ನು ಪ್ರತ್ಯೇಕವಾಗಿ ಪರಿಗಣಿಸದೆ ಒಟ್ಟು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸ ಬೇಕೆಂದು ಆಗ್ರಹಿಸಿದರು.

ಜಾತಿ ನೋಡಿ ಕ್ರಮ ಕಾಂಗ್ರೆಸ್‌ ಧರ್ಮ !

ಜಾತಿ, ಧರ್ಮ ನೋಡಿ ಕ್ರಮ ಕೈಗೊಳ್ಳುವುದಕ್ಕೆ ಕಾಂಗ್ರೆಸ್‌ ಕೈಹಾಕಿದೆ; ಈ ಮೂಲಕ ಕೋಮು ರಾಜಕಾರಣ ಮಾಡಲು ಹೊರಟಿದೆ. ಇದು ಖಂಡನೀಯ ಎಂದ ಅವರು ಸಚಿವ ರಮಾನಾಥ ರೈಗಳು ಘೋಷಿಸಿದಂತೆ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಜರಗಿ ಬೇಕೆಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲು, ವಿಧಾನ ಪರಿಷತ್‌ ಸದಸ್ಯರಾದ ಕ್ಯಾ| ಗಣೇಶ್‌ ಕಾರ್ಣಿಕ್‌ ಮತ್ತು ಕೆ. ಮೋನಪ್ಪ ಭಂಡಾರಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀಕರ ಪ್ರಭು, ಮಾಧ್ಯಮ ಪ್ರಮುಖ್‌ ದಿವಾಕರ ಸಾಮಾನಿ ಉಪಸ್ಥಿತರಿದ್ದರು.

Trending videos

Back to Top