CONNECT WITH US  

ಅಬಕಾರಿ ಇಲಾಖೆ ವಶಪಡಿಸಿಕೊಂಡಿರುವ ವಾಹನಗಳು

ಬಂಟ್ವಾಳ: ಬಿ.ಸಿ.ರೋಡ್‌ ಕೈಕುಂಜೆ ಅಬಕಾರಿ ಉಪವಿಭಾಗ ಕಚೇರಿ ಆವರಣದಲ್ಲಿ ಸುದೀರ್ಘ‌ ಅವಧಿಯ ಹಿಂದೆ ವಿವಿಧ ಕಾರಣಗಳಿಗಾಗಿ ವಶಪಡಿಸಿಕೊಂಡು ವಾಹನಗಳು ಕೊಳೆಯುತ್ತಿರುವ ಪ್ರಕರಣಗಳಿಂದ ತುಕ್ಕು ಹಿಡಿದು ಎಂದಿಗೂ ಉಪಯೋಗ ಶೂನ್ಯವಾಗಿಬಿಟ್ಟಿದೆ.

ಇಂತಹ ವಾಹನಗಳನ್ನು ಅಗಿಂದಾಗೆ ಸಮರ್ಪಕ ಇದ್ದಂತಹ ಸ್ಥಿತಿಯಲ್ಲಿ ಏಲಂ ಮಾಡಿದಲ್ಲಿ ದೇಶದ ಸಂಪತ್ತಾಗಿ ಉಳಿತಾಯ ಆಗಬಹುದು ಎಂಬ ಅಭಿಪ್ರಾಯವನ್ನು ಅನೇಕರು ನೀಡಿದ್ದಾರೆ.

ಪ್ರಕರಣವು ವಾದಿ ಅಥವಾ ಪ್ರತಿವಾದಿ ಪರವಾಗಿ ತೀರ್ಪಾದಲ್ಲಿ ವಾಹನ ಏಲಂ ಹಣವನ್ನು ಪಾವತಿಸಲು ಸುಲಭವಾಗುತ್ತದೆ. ಇದರಿಂದ ವಾಹನ ತುಕ್ಕು ಹಿಡಿದು ಹೋಗುವಾಗ ಉಂಟಾಗುವ ನಷ್ಟವನ್ನು ತಪ್ಪಿಸಬಹುದು ಎನ್ನುವ ಅಭಿಪ್ರಾಯ ನೀಡಲಾಗಿದೆ.

ಇದರಿಂದ ಸರಕಾರಕ್ಕೂ ಲಾಭವಿಲ್ಲ. ವಾಹನವೊಂದು ಯಾವುದೇ ಪ್ರಯೋಜನ ಇಲ್ಲದೆ ಹೋಗುವಂತಹ ಸ್ಥಿತಿಯನ್ನು ತಪ್ಪಿಸಬಹುದು ಎಂದು ವಿವರಗಳು ಹೇಳಿದೆ.

Trending videos

Back to Top