CONNECT WITH US  

ನಕಲಿ ಸಂಸ್ಥೆಗಳ ಆಕರ್ಷಕ ಯೋಜನೆಗಳಿಗೆ ಮರುಳಾಗದಿರಿ

ಮಂಗಳೂರು: ''''''ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇರುತ್ತಾರೆ'' ಎನ್ನುವ ಮಾತು ಇತ್ತೀಚಿನ ದಿನಗಳಲ್ಲಿ ಹೆಚ್ಚು ಅರ್ಥ ಪಡೆದುಕೊಳ್ಳುತ್ತಿದೆ.

ಮಂಗಳೂರು ನಗರದಲ್ಲಿಯೇ ಕಳೆದ 2- 3 ವರ್ಷಗಳಲ್ಲಿ ಹಲವಾರು ನಕಲಿ ಸಂಸ್ಥೆಗಳು ಹುಟ್ಟಿ ಅಮಾಯಕರನ್ನು ಮುಂಡ ಮೋಚಿ ಮಾಡಿ ದೋಚಿ ಇನ್ನಿಲ್ಲವಾಗಿವೆ. ಹಲವಾರು ಮಂದಿ ಲಕ್ಷಾಂತರ ರೂಪಾಯಿ ಹಣ ಹೂಡಿ ಕಳೆದುಕೊಂಡಿದ್ದಾರೆ.

ಎಸ್‌ಬಿಎಂ ಇನ್‌ಫೋಟೆಕ್‌, ಚಿಂತನ ಮಾರ್ಕೆಟಿಂಗ್‌, ಆದರ್ಶ ಎಂಟರ್‌ಪ್ರೈಸಸ್‌, ಜನಶ್ರೀ ಫುಡ್‌ ಪ್ರಾಡಕ್ಟ್ÕÕ, ಉದ್ಯಮಶೀಲರ ಮಲ್ಟಿ ಪರ್ಪಸ್‌ ಸೊಸೈಟಿ, ಆರ್‌ಎಂಪಿ ಮನಿ ಚೈನ್‌, ಮಿಸರೇವಾ, ಹೆಚ್ಚು ಪ್ರಸಿದ್ಧಿ ಪಡೆದಿರುವ ಅಗ್ರಿ ಗೋಲ್ಡ್‌, ವೃಕ್ಷ ಸೊಲ್ಯೂಶನ್ಸ್‌ .....ಇವು ಇತ್ತೀಚೆಗೆ ಈ ಹಿನ್ನೆಲೆಯಲ್ಲಿಯೇ ಗಮನ ಸೆಳೆದ ಕೆಲವು ಸಂಸ್ಥೆಗಳು.

ವಿವಿಧ ಸ್ಕೀಂಗಳನ್ನು ಪ್ರಕಟಿಸಿ, ಆಕರ್ಷಕ ಬಡ್ಡಿದರ/ ಲಾಭ ನೀಡುವುದಾಗಿ ನಂಬಿಸಿ ಜನ ಸಾಮಾನ್ಯರಿಂದ ಹಣ ಸಂಗ್ರಹಿಸುವುದು ಇಂತಹ ಸಂಸ್ಥೆಗಳ ಕಾರ್ಯವೈಖರಿ. ಪ್ರಾರಂಭದ ಕೆಲವು ಅವಧಿಗೆ ಲಾಭಾಂಶವನ್ನು ಮರಳಿಸುವ ಮೂಲಕ ತಮ್ಮಲ್ಲಿ ವಿಶ್ವಾಸ ಮೂಡುವಂತೆ ಮಾಡುತ್ತವೆ. ಬಳಿಕ ಒಂದು ದಿನ ಸಂಸ್ಥೆಯ ಮುಖ್ಯಸ್ಥರೆನ್ನುವವರು ಸಂಗ್ರಹವಾದ ಹಣದೊಂದಿಗೆ ನಾಪತ್ತೆಯಾಗುತ್ತಾರೆ. (ಎಲ್ಲಾ ಸಂಸ್ಥೆಗಳು ಹೀಗೆ ಮಾಡುವುದಿಲ್ಲ; ಕೆಲವು ಮಾತ್ರ ಈ ರೀತಿ ಕಾರ್ಯನಿವಹಿಸುತ್ತವೆ). ಆಗ ಅವರನ್ನು ನಂಬಿದ ಏಜಂಟರು/ ಕಚೇರಿ ಸಿಬಂದಿ/ ಗ್ರಾಹಕರು ಕಂಗಾಲಾಗುತ್ತಾರೆ. ತಾವು ಮೋಸ ಹೋಗಿದ್ದೇವೆ ಎಂದು ಗೊತ್ತಾದ ಕೂಡಲೇ ಕೆಲವು ಮಂದಿ ಮಾಧ್ಯಮದವರ ಮತ್ತು ಪೊಲೀಸರ ಮೊರೆ ಹೋಗುತ್ತಾರೆ.

ಗ್ರಾಹಕರ ಹಣ ಪಾವತಿಸಿದ ಬಗ್ಗೆ ಅಧಿಕೃತ ದಾಖಲೆ ಪತ್ರಗಳಿದ್ದರೆ ಪೊಲೀಸರು ವಂಚನೆ (ಐಪಿಸಿ ಸೆ.420) ಕೇಸು ದಾಖಲಿಸುತ್ತಾರೆ. ಅಷ್ಟರಲ್ಲಿ ಆರೋಪಿಗಳು ಪರಾರಿಯಾಗಿ ಸುರಕ್ಷಿತ ಸ್ಥಳಕ್ಕೆ ತಲುಪಿರುತ್ತಾರೆ.

ಅನಧಿಕೃತ/ ನಕಲಿ ಸಂಸ್ಥೆಗಳು

ಈ ರೀತಿ ಜನರನ್ನು ವಂಚಿಸುವ ಸಂಸ್ಥೆಗಳಲ್ಲಿ ಹೆಚ್ಚಿನವುಗಳು ಅನಧಿಕೃತ ಅಥವಾ ನಕಲಿ ಸಂಸ್ಥೆಗಳು. ಸೊಸಾಯಿr ಕಾಯ್ದೆ / ರಿಸರ್ವ್‌ ಬ್ಯಾಂಕ್‌ ಅಥವಾ ಇತರ ಯಾವುದೇ ಅಧಿಕೃತ ಸರಕಾರಿ ಸಂಸ್ಥೆಯಿಂದ ಅನುಮತಿ ಪಡೆಯದೆ ಆರಂಭಿಸಿದ ಸಂಸ್ಥೆಗಳು ಅನಧಿಕೃತ ಎಂದು ಪರಿಗಣಿಸಲಾಗುತ್ತದೆ.

ದೂರು ಕೊಡಲು ಮುಂದೆ ಬರುವುದಿಲ್ಲ

ಮೋಸ ಹೋಗುವ ಗ್ರಾಹಕರಲ್ಲಿ ಹೆಚ್ಚಿನವರು ಪೊಲೀಸ್‌ ದೂರು ನೀಡಲು ಹಿಂದೇಟು ಹಾಕುತ್ತಾರೆ. ಕೆಲವು ಸಂದರ್ಭಗಳಲ್ಲಿ ದೂರು ಸಲ್ಲಿಸಲು ಹೋಗುವಾಗ ಅವರಲ್ಲಿ ಹಣ ಪಾವತಿಸಿದ ಬಗ್ಗೆ ಅಧಿಕೃತ ದಾಖಲೆಗಳಿರುವುದಿಲ್ಲ. ದಾಖಲೆ ಪತ್ರಗಳಿಲ್ಲದಿದ್ದರೆ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸುತ್ತಾರೆ.

ಮೊದಲು ಮಾಧ್ಯಮಕ್ಕೆ ಹೋಗದಿರಿ

ಮೋಸ ಹೋದವರು ಕೆಲವು ಸಂದರ್ಭಗಳಲ್ಲಿ ಮೊದಲು ಮಾಧ್ಯಮದವರ ಬಳಿ ಹೋಗುತ್ತಾರೆ. ಆ ಬಳಿಕ ಪೊಲೀಸ್‌ ಠಾಣೆಗೆ ದೂರು ಸಲ್ಲಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಮಾಧ್ಯಮಗಳಲ್ಲಿ ಮೊದಲು ಸುದ್ದಿ ಪ್ರಕಟವಾಗಿ ಪೊಲೀಸರು ದೂರು ದಾಖಲಿಸುವಷ್ಟರಲ್ಲಿ ಮೋಸ ಮಾಡಿದವರು ಸಂಸ್ಥೆಯನ್ನು ಮುಚ್ಚಿ ತಲೆ ಮರೆಸಿಕೊಂಡಾಗಿರುತ್ತದೆ. ಹಾಗಾಗಿ ಮಾಧ್ಯಮದವರ ಬಳಿ ಹೋಗುವ ಬದಲು ಮೊದಲು ಪೊಲೀಸ್‌ ಠಾಣೆಗೆ ಬನ್ನಿ ಎನ್ನುವುದು ಪೊಲೀಸರ ಸಲಹೆ.

420 ಕೇಸು ದಾಖಲು

ಮೋಸ ಹೋದ ಬಗ್ಗೆ ದಾಖಲೆಗಳ ಸಮೇತ ದೂರು ನೀಡಿದರೆ ಐಪಿಸಿ ಸೆಕ್ಷನ್‌ 420 ಪ್ರಕಾರ ಪ್ರಕರಣ ದಾಖಲಿಸುತ್ತೇವೆ. ಕೆಲವು ಪ್ರಕರಣಗಳಲ್ಲಿ ಸಂಪೂರ್ಣವಾಗಿ ಅಲ್ಲದಿದ್ದರೂ ಭಾಗಶ: ಹಣ ಹೂಡಿಕೆದಾರರಿಗೆ ವಾಪಸ್‌ ಸಿಗುತ್ತದೆ. ಕೆಲವು ಪ್ರಕರಣಗಳು ನ್ಯಾಯಾಲಯದ ಮೆಟ್ಟಲೇರುತ್ತಿವೆ. ಸೂಕ್ತ ಸಾಕ್ಷಾÂಧಾರಗಳಿದ್ದರೆ ಆರೋಪಿಗಳಿಗೆ (ಮೋಸ ಮಾಡಿದವರಿಗೆ) ನ್ಯಾಯಾಲಯದಿಂದ ಶಿಕ್ಷೆ ಆಗುತ್ತದೆ ಎನ್ನುತ್ತಾರೆ ಸಿಸಿಬಿ ಇನ್ಸ್‌ಪೆಕ್ಟರ್‌ ವೆಲೆಂಟೈನ್‌ ಡಿ''ಸೋಜಾ.

Trending videos

Back to Top