CONNECT WITH US  

ಸೆ. 25ರಿಂದ ದಸರಾ ಬೊಂಬೆ ಪ್ರದರ್ಶನ

ಮಂಗಳೂರು: ಮಂಗಳೂರಿನಲ್ಲಿ ವಾಸವಾಗಿರುವ ಹಳೆ ಮೈಸೂರು ಪ್ರಾಂತದ ವಿಪ್ರಕೂಟದವರು ಸ್ಥಾಪಿಸಿದ ''''''ನಮ್ಮವರು'' ಸಂಘಟನೆ ವತಿಯಿಂದ ಮೈಸೂರು ದಸರಾ ಉತ್ಸವದ ಅಂಗವಾಗಿ ''''ಬೊಂಬೆಗಳ ಪ್ರದರ್ಶನ'' ಸೆ. 25ರಿಂದ ನಡೆಯಲಿದೆ ಎಂದು ನಮ್ಮವರು ಸಂಘಟನೆಯ ಸಂಘಟನಾ ಕಾರ್ಯದರ್ಶಿ ಎಂ. ಎಸ್‌. ಗುರುರಾಜ್‌ ತಿಳಿಸಿದ್ದಾರೆ.

ನಗರದ ಶ್ರೀ ಶರವು ಮಹಾಗಣಪತಿ ದೇವಸ್ಥಾನದಲ್ಲಿ 25ರಂದು ಸಂಜೆ 5.30ಕ್ಕೆ ಪ್ರದರ್ಶನ ಆರಂಭವಾಗಲಿದೆ. ಅ. 4ರ ತನಕ ಪ್ರತಿದಿನ ಸಂಜೆ 6.30ರಿಂದ 8.30ರ ತನಕ ಸಾರ್ವಜನಿಕರ ವೀಕ್ಷಣೆಗೆ ಅವಕಾಶವಿದೆ. ಈ ಬಾರಿ 1000 ಗೊಂಬೆಗಳನ್ನು 9 ಅಂತಸ್ತುಗಳಲ್ಲಿ ಜೋಡಿಸಿ ಪ್ರದರ್ಶಿಸಲಾಗುವುದು. ತಿರುಪತಿಯಲ್ಲಿ ಬ್ರಹ್ಮೋತ್ಸವದ ದೃಶ್ಯಾವಳಿಗಳ ಬೊಂಬೆ ಪ್ರದರ್ಶನ ಈ ಬಾರಿಯ ವಿಶೇಷ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ದಸರಾ ಸಂದರ್ಭದಲ್ಲಿ ಹಳೆ ಮೈಸೂರು ಪ್ರಾಂತದ ಪ್ರತಿ ಮನೆಯಲ್ಲೂ ದೇವ ದೇವತೆಗಳ ಬೊಂಬೆಗಳನ್ನು ಅಲಂಕರಿಸಿ ಪೂಜಿಸುವ ಸಂಪ್ರದಾಯ ನಡೆದು ಬಂದಿದೆ. ಕರಾವಳಿ ಭಾಗದ ಜನರಿಗೆ ಈ ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ಪ್ರತಿವರ್ಷ ಸಂಘಟನೆ ವತಿಯಿಂದ ಗೊಂಬೆಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಸಂಘಟನೆಯ ಗೌರವಾಧ್ಯಕ್ಷ ಬಿ. ಎಚ್‌. ರಾಮ್‌ಪ್ರಸಾದ್‌, ಕಾರ್ಯದರ್ಶಿ ನಾಗರಾಜ್‌ ರಾವ್‌, ಶ್ರೀನಿವಾಸ್‌, ರೂಪಾ ಜಗದೀಶ್‌, ಪ್ರೀತಿ ಮಾಧವ್‌ ಉಪಸ್ಥಿತರಿದ್ದರು.

Trending videos

Back to Top