CONNECT WITH US  

ಸೆ. 26 : ಬೃಹತ್‌ ರಕ್ತದಾನ ಶಿಬಿರ

ಮಂಗಳೂರು: ರೆಡ್‌ಕ್ರಾಸ್‌ ಸಂಸ್ಥೆ ಮತ್ತು ಸಮೃದ್ಧ ಜೀವನ್‌ ಫೌಂಡೇಶನ್‌ ವತಿಯಿಂದ ಬೃಹತ್‌ ರಕ್ತದಾನ ಶಿಬಿರ ಸೆ. 26ರಂದು ನಗರದ ಲೇಡಿಗೋಶೆನ್‌ ಆಸ್ಪತ್ರೆಯಲ್ಲಿ ನಡೆಯಲಿದೆ ಎಂದು ಫೌಂಡೇಶನ್‌ನ ವಲಯ ಅಧಿಧಿಕಾರಿ ಶಿವರಾಜ್‌ ತಿಳಿಸಿದ್ದಾರೆ.

ಸಮೃದ್ಧ ಜೀವನ್‌ ಸಂಸ್ಥಾಪಕ ಡಾ| ಮಹೇಶ್‌ ಮೋಟೆವರ್‌ ಅವರ ಜನ್ಮದಿನದ ಅಂಗವಾಗಿ ದೇಶಾದ್ಯಂತ ಸೆ.26ರಂದು ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ನಗರದಲ್ಲಿ 1000 ಯೂನಿಟ್‌ಗಳ ರಕ್ತ ಸಂಗ್ರಹ ಮಾಡುವ ಗುರಿ ಇದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಸಂಗ್ರಹಿಸಲಾಗುವ ರಕ್ತವನ್ನು ರೆಡ್‌ಕ್ರಾಸ್‌ ಮತ್ತು ಇತರ ಪ್ರಮುಖ ಆಸ್ಪತ್ರೆಗಳ ಮೂಲಕ ರೋಗಿಗಳಿಗೆ ಉಚಿತವಾಗಿ ಪೂರೈಕೆ ಮಾಡಲಾಗುವುದು ಎಂದು ರೆಡ್‌ಕ್ರಾಸ್‌ ಸಂಸ್ಥೆಯ ಬ್ಲಿಡ್‌ ಬ್ಯಾಂಕ್‌ ಅಧ್ಯಕ್ಷ ರೊನಾಲ್ಡ್‌ ಹೇಳಿದರು.

ಫೌಂಡೇಶನ್‌ನ ಪ್ರತಿನಿಧಿಧಿಗಳಾದ ಮೇಘರಾಜ್‌, ಕೃಷ್ಣಾನಂದ ರೈ, ಪ್ರಭಾಕರ ಶ್ರೀಯಾನ್‌ ಉಪಸ್ಥಿತರಿದ್ದರು.

Trending videos

Back to Top