CONNECT WITH US  

ಕರಾವಳಿ ಆಶ್ರಯ ಸಮುದಾಯ ಇತರರಿಗೆ ಮಾದರಿ

ಸುರತ್ಕಲ್‌: ಸಿ ಎ ವಿದ್ಯಾಭ್ಯಾಸಪೂರೈಸುವ ಕನಸು ಕಾಣುತ್ತಿರುವ ವಿದ್ಯಾರ್ಥಿಗೆ ಬೆನ್ನೆಲುಬಾಗಿ ನಿಂತು ಆತನ ಕನಸನ್ನು ನನಸು ಮಾಡಲು ನೆರವಿನ ಹಸ್ತ ಚಾಚಿರುವ ಕರಾವಳಿ ಆಶ್ರಯ ಸಮುದಾಯವು ಜಾತಿ ಮತ ಬೇಧವಿಲ್ಲದೆ ಎಲ್ಲಾ ಸಂಘಟನೆಗಳಿಗೂ ಮಾದರಿ ಎಂದು ಶಾಸಕ ಮೊದಿನ್‌ ಬಾವಾ ಹೇಳಿದರು.

ಕರಾವಳಿ ಆಶ್ರಯ ಸಮುದಾಯದ ವತಿಯಿಂದ ಇಡ್ಯಾ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಆಯೋಜಿಸಲಾದ ಉನ್ನತ ವ್ಯಾಸಂಗಮಾಡುತ್ತಿರುವ ವಿದ್ಯಾರ್ಥಿ ಪ್ರವೀಣ್‌ ರಾಜ್‌ ಗೆ ಲ್ಯಾಪ್‌ಟಾಪ್‌ ,ಕಂಪ್ಯೂಟರ್‌, ನಿಧಿ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಂಚಾಲಕ ಸೂರ್ಯನಾರಾಯಣ್‌ ಮಾತನಾಡಿ ಸಂಘಟನೆಯು ಜನಾಶ್ರಯ ನಿಧಿ ಮೂಲಕ ಕಳೆದ ನಾಲ್ಕು ವರ್ಷಗಳಲ್ಲಿ ಚಿಕಿತ್ಸಾ ವೆಚ್ಚ, ವಿದ್ಯಾಭ್ಯಾಸ ನೆರವು,ಆರೋಗ್ಯ ವಿಮೆ ಮತ್ತಿತರ ಅರ್ಹ ಫಲಾನುಭವಿಗಳಿಗೆ ಎರಡು ಲಕ್ಷಕ್ಕೂ ಆಧಿಕ ಮೊತ್ತ ವಿತರಿಸಿದೆ ಎಂದರು.

ಪ್ರೋತ್ಸಾಹಕ ನಿಧಿ ದಾನಿಗಳಾದ ಉದ್ಯಮಿ ಶಿವಾನಂದ ಎಚ್‌.ಎಂ ಕೂಳೂರು ಕಂಪ್ಯೂಟರ್‌ ವಿತರಿಸಿದರು. ಚಿಕಿತ್ಸಾ ನಿಧಿಯ ಹಸ್ತಾಂತರ ಹಾಗೂ ದಾನಿಗಳಿಂದ ಸಂಗ್ರಹವಾದ ನಿಧಿಯ ನ್ನು ಸಂಘಕ್ಕೆ ನೀಡಲಾಯಿತು.

ಅತ್ಯುತ್ತಮ ಶಿಕ್ಷಕಿ ಜಿಲ್ಲಾ ಪ್ರಶಸ್ತಿ ವಿಜೇತ ಕೆ.ಕಲಾವತಿ ಅವರನ್ನು ಗೌರವಿಸಿ ಸಮ್ಮಾನಿಸಲಾಯಿತು.ಭರತ್‌ ಕುಮಾರ್‌ ತಿಂಗಳಾಯ ಹೊಸಬೆಟ್ಟು, ಕೋಡªಬ್ಬು ದೈವಸ್ಥಾನ ಸುರತ್ಕಲ್‌ ಇದರ ಅಧ್ಯಕ್ಷ ಎಸ್‌.ಸ ಂಜೀವ ಬಂಗೇರ, ವೆಂಕಟರಮಣ ಹಿ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯ ಕೆ.ಕೆ ಪೇಜಾವರ್‌, ಉದ್ಯಮಿ ಬಿ.ಕೆ ದಿನೇಶ್‌, ಕೇಶವ ಸನಿಲ್‌ ,ಸಂಘದ ಅಧ್ಯಕ್ಷ ಸುರೇಶ್‌ ಕೋಟ್ಯಾನ್‌ ಇಡ್ಯಾ, ಗೌ.ಪ್ರ ಕಾರ್ಯದರ್ಶಿ ಕುಮಾರ್‌ ಕರ್ಕೇರ ಎಚ್‌, ಕೋಶಾಧಿಕಾರಿ ಸುನೇತ್ರ ಎಚ್‌, ಸಂಚಾಲಕ ಗಿರೀಶ್‌ ಇಡ್ಯಾ, ಸಲಹೆಗಾರರಾದ ಸುಧನ್ವ ಎಚ್‌, ದಯಾನಂದ ಶಾಂತಿ,ಚಂದ್ರಶೇಖರ ಮೆಂಡನ್‌, ಲಕ್ಷೀಧರ ಗಿರಿ ಮತ್ತಿತರರು ಉಪಸ್ಥಿತರಿದ್ದರು.

Trending videos

Back to Top