CONNECT WITH US  

ಬ್ಯಾಂಕಾಕ್‌ನಲ್ಲಿ ತುಳುವಿನ ರಾಕ್‌ಸ್ಟಾರ್‌!

ಎಫ್‌ಎಂನಲ್ಲಿ ಮಾತಿನ ಮೋಡಿ ಮಾಡುತ್ತ, ಕಾರ್ಯಕ್ರಮ ನಿರೂಪಣೆಯ ಜತೆಗೆ ಕಾಣಿಸಿಕೊಂಡು ಸ್ಯಾಂಡಲ್‌ವುಡ್‌ ಹಾಗೂ ಕೋಸ್ಟಲ್‌ವುಡ್‌ನ‌ಲ್ಲಿ ಎವರ್‌ಗ್ರೀನ್‌ ಹೀರೋ ಲುಕ್‌ನಲ್ಲಿ ಮಿಂಚುವ ರಾಕ್‌ಸ್ಟಾರ್‌ ರೂಪೇಶ್‌ ಶೆಟ್ಟಿ ಬ್ಯಾಂಕಾಕ್‌ನಲ್ಲಿ ಸಿನೆಮಾ ಶೂಟಿಂಗ್‌ ಮುಗಿಸಿ ಇತ್ತೀಚೆಗೆ ವಾಪಾಸಾಗಿದ್ದಾರೆ.

ಟೈಟಲ್‌ ಇನ್ನೂ ಫಿಕ್ಸ್‌ ಮಾಡದ ಕನ್ನಡ ಸಿನೆಮಾದಲ್ಲಿ ರೂಪೇಶ್‌ ಮುಖ್ಯ ರೋಲ್‌ ನಲ್ಲಿದ್ದಾರೆ. ಕುಡ್ಲದ ಕಲಾವಿದರೊಬ್ಬರು ಕನ್ನಡ ಸಿನೆಮಾಕ್ಕಾಗಿ ಫಾರಿನ್‌ಗೆ ಹೋಗಿ ಒಂದು ವಾರ ಶೂಟಿಂಗ್‌ನಲ್ಲಿ ಭಾಗವಹಿಸಿದ್ದು ವಿಶೇಷ. ಅಂದಹಾಗೆ ಈ ಸಿನೆಮಾದಲ್ಲಿ ಸಾಧುಕೋಕಿಲ, ಆದಿಲೋಕೇಶ್‌ ಸಹಿತ ಹಲವು ಕಲಾವಿದರಿದ್ದಾರೆ.

ಶೇ.90ರಷ್ಟು ಶೂಟಿಂಗ್‌ ಮುಗಿಸಿದ ಈ ಸಿನೆಮಾದ ಟೈಟಲ್‌ ರಿಲೀಸ್‌ ಕೆಲವೇ ದಿನದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಈ ಮಧ್ಯೆ ರೂಪೇಶ್‌ ಶೆಟ್ಟಿ ಅಭಿನಯದ ತುಳುವಿನ 'ಲಾಸ್ಟ್‌ ಬೆಂಚ್‌' ಸಿನೆಮಾ ಈಗ ಕೊನೆಯ ಹಂತದಲ್ಲಿದೆ. ಜತೆಗೆ ತುಳುವಿನ ಇನ್ನೊಂದು ಸಿನೆಮಾದಲ್ಲಿ ಮುಖ್ಯ ತಾರಾಗಣದಲ್ಲಿ ಅಭಿನಯಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಈ ಮೂಲಕ ರೂಪೇಶ್‌ ಸಿನೆಮಾರಂಗದಲ್ಲಿ ತುಂಬಾನೇ ಬ್ಯುಸಿ ಇದ್ದಾರೆ. ಅವರ ಅಭಿನಯದ 'ಅಮ್ಮೆರ್‌ ಪೊಲೀಸಾ', 'ನಿಶ್ಯಬ್ದ-2' ಸಹಿ ತ ಹಲವು ಸಿನೆಮಾಗಳು ಇತ್ತೀಚೆಗೆ ಬಿಡುಗಡೆಗೊಂಡು ಹಿಟ್‌ ದಾಖಲಿಸಿತ್ತು. 

ಇಂದು ಹೆಚ್ಚು ಓದಿದ್ದು

Trending videos

Back to Top