CONNECT WITH US  

ಪತ್ತೀಸ್‌ ಗ್ಯಾಂಗ್‌ಗೆ ರಾಹುಕಾಲ- ಗುಳಿಗ ಕಾಲ

ಇತ್ತೀಚೆಗೆ ತೆರೆಕಂಡ 'ಪತ್ತೀಸ್‌ ಗ್ಯಾಂಗ್‌' ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ರೀತಿಯ ಟ್ರೆಂಡ್‌ ಸೆಟ್ಟಿಂಗ್‌ ಮಾಡಿರುವುದು ನಿಜ. ಒಂದೇ ಮೂಡ್‌ನ‌ಲ್ಲಿ ಸಾಗುತ್ತಿದ್ದ ಕೋಸ್ಟಲ್‌ವುಡ್‌ಗೆ ಇನ್ನೊಂದು ಶೈಲಿಯನ್ನು ಪತ್ತೀಸ್‌ ಗ್ಯಾಂಗ್‌ ತೋರಿಸಿಕೊಟ್ಟಿದೆ. ವಿಶೇಷವೆಂದರೆ ಒಂದು ಸಿನೆಮಾ ಬಂದು ಹೋಗುವ ಘಳಿಗೆಯಲ್ಲಿ ಇದೇ ತಂಡ ಇನ್ನೊಂದು ಸಿನೆಮಾವನ್ನು ಕೂಡ ಮಾಡಿ ಮುಗಿಸಿದೆ. ಆಶ್ಚರ್ಯವಾದರೂ ಸತ್ಯ.

ಇತ್ತೀಚೆಗೆ ಪತ್ತೀಸ್‌ ಗ್ಯಾಂಗ್‌ ಬಂದಿದ್ದರೂ, ಈಗ ಅದೇ ತಂಡದ 'ರಾಹು ಕಾಲ- ಗುಳಿಗ ಕಾಲ' ಕೂಡ ತಯಾರಾಗಿದೆ ಎಂಬುದು ನಿಜಕ್ಕೂ ಕುತೂಹಲ. ವರ್ಷಕ್ಕೊಂದು ಸಿನೆಮಾ ಎನ್ನುವ ಕಾಲದಲ್ಲಿ ಒಂದೇ ಚಿತ್ರತಂಡ ಕೆಲವೇ ತಿಂಗಳ ಅಂತರದಲ್ಲಿ ಅದೇ ಕಲಾವಿದರು- ತಂತ್ರಜ್ಞರೊಂದಿಗೆ ಇನ್ನೊಂದು ಸಿನೆಮಾ ಮಾಡುವುದು ಸುಲಭದ ಮಾತಲ್ಲ. ಸದ್ಯ ಶೇ. 95ರಷ್ಟು ಶೂಟಿಂಗ್‌ ಮುಗಿಸಿದ ರಾಹು ಕಾಲ- ಗುಳಿಗ ಕಾಲ ನಾಲ್ಕೈದು ದಿನದ ಶೂಟಿಂಗ್‌ ಮಾತ್ರ ಬಾಕಿ ಉಳಿಸಿದೆ. 

ಥ್ರಿಲ್ಲರ್‌ ಗೆಟಪ್‌ನಲ್ಲಿ ಮೂಡಿಬಂದ ಈ ಸಿನೆಮಾ ಕಾಲೇಜು ಜೀವನದ ಪ್ರತೀ ಬೆಳವಣಿಗೆಯನ್ನು ಕೂಡ ಕಟ್ಟಿಕೊಡಲಿದೆ. ಅಂದಹಾಗೆ ಮನೋಜ್‌ ಕುಮಾರ್‌ ಅವರ ನೇತೃತ್ವದಲ್ಲಿ ಸೂರಜ್‌ ಬೋಳಾರ್‌ ಹಾಗೂ ಪ್ರೀತಂ ನಿರ್ಮಾಪಕರಾಗಿ ಮಾಡಿರುವ ಈ ಸಿನೆಮಾವನ್ನು ಸೂರಜ್‌ ನಿರ್ದೇಶಿಸಿದ್ದಾರೆ. ಅರವಿಂದ ಬೋಳಾರ್‌, ಚಂದ್ರಹಾಸ್‌ ಉಳ್ಳಾಲ್‌, ವಿಸ್ಮಯ ವಿನಾಯಕ್‌, ನವ್ಯತಾ ರೈ ಮುಂತಾದವರು ಅಭಿನಯಿಸಿದ್ದು, ವಿಶೇಷವಾಗಿ ಅರ್ಜುನ್‌ ಕಾಪಿಕಾಡ್‌ ಹಾಗೂ ಅರ್ಜುನ್‌ ಕಜೆ ಈ ಸಿನೆಮಾದಲ್ಲಿ ಹೊಸ ಗೆಟಪ್‌ನಲ್ಲಿ ಮಿಂಚಿದ್ದಾರೆ. ಇನ್ನು ಸರಕಾರಿ ಹಿ.ಪ್ರಾ. ಶಾಲೆ ಕಾಸರಗೋಡು ಸಿನೆಮಾದಲ್ಲಿ ಗಮನಸೆಳೆದ ಆತೀಶ್‌ ಈ ಸಿನೆಮಾದಲ್ಲಿ ವಿಭಿನ್ನ ಶೈಲಿಯಲ್ಲಿ ಕಾಣಿಸಲಿದ್ದಾರೆ. ಮಣಿಕಾಂತ್‌ ಕದ್ರಿಯವರ ಒಂದು ಹಾಡು ಹಾಗೂ ಎರಡು ಫೈಟ್‌ ಸಿನೆಮಾದಲ್ಲಿ ಅಟ್ರ್ಯಾಕ್ಟಿವ್‌ ಆಗಿರಲಿದೆ ಎನ್ನುವುದು ಚಿತ್ರತಂಡದ ಮಾಹಿತಿ.

ಇಂದು ಹೆಚ್ಚು ಓದಿದ್ದು

Trending videos

Back to Top