CONNECT WITH US  

ಆಶ್ರಮದ ಮಕ್ಕಳು ರಿಲೀಸ್‌ ಮಾಡಿದ ಕಂಬಳಬೆಟ್ಟುವಿನ ಸಾಂಗ್‌!

ಕೋಸ್ಟಲ್‌ವುಡ್‌ನ‌ಲ್ಲಿ ಬಹಳಷ್ಟು ನಿರೀಕ್ಷೆ ಮೂಡಿಸಿದ 'ಕಂಬಳಬೆಟ್ಟು ಭಟ್ರೆನ ಮಗಲ್‌' ಸಿನೆಮಾದ ಆಡಿಯೋ ಹಾಗೂ ಟೀಸರ್‌ ಇತ್ತೀಚೆಗೆ ಮಂಗಳೂರು ಪುರಭವನದಲ್ಲಿ ಬಿಡುಗಡೆಗೊಂಡಿತು.

ಆಶ್ರಮದ ಸುಮಾರು 25 ಮಕ್ಕಳು ಆಡಿಯೋ ರಿಲೀಸ್‌ ಮಾಡಿದ್ದು ವಿಶೇಷ. ಇದು ಕೋಸ್ಟಲ್‌ವುಡ್‌ನ‌ಲ್ಲಿ ನಡೆದ ಮೊದಲ ಪ್ರಯತ್ನ ಕೂಡ ಹೌದು. ಮಕ್ಕಳಿಗೆ 50000 ರೂ. ಧನಸಹಾಯ ಮಾಡಿ ಪುಸ್ತಕ, ಬಳಪ, ಬ್ಯಾಗ್‌ ನೀಡಿ ಪ್ರೋತಾಹಿಸಲಾಗಿತ್ತು. ಉಳಿದಂತೆ ಗಣ್ಯರ ಬಹುದೊಡ್ಡ ದಂಡು ಆಡಿಯೋ ರಿಲೀಸ್‌ ಸಮಯದಲ್ಲಿ ಭಾಗವಹಿಸಿದ್ದರು. ಇನ್ನೊಂದು ಸ್ಪೆಷಾಲಿಟಿ ಅಂದರೆ ಆಡಿಯೋ ಬಿಡುಗಡೆ ಸ್ಟೇಜ್‌ನಲ್ಲಿ ಮುದ್ದು ಕೃಷ್ಣ ಸ್ಪರ್ಧೆ ಆಯೋಜಿಸಲಾಗಿತ್ತು. ನೂರಾರು ಮುದ್ದುಕೃಷ್ಣರು ಇದರಲ್ಲಿ ಭಾಗವಹಿಸಿದ್ದರು.

ಇದರೊಂದಿಗೆ 'ಫ್ಯಾಮಿಲಿ ಸೆಲ್ಫಿ ಸ್ಪರ್ಧೆ'ಯ ವಿಜೇತರಿಗೆ ಬಹುಮಾನಗಳನ್ನೂ ನೀಡಲಾಯಿತು. 'ಕಂಬಳಬೆಟ್ಟು ಭಟ್ರೆನ ಮಗಲ್‌' ಸಿನೆಮಾದ ನಿರ್ಮಾಪಕ ರೊನಾಲ್ಡ್‌ ಮಾರ್ಟಿಸ್‌, ಚಿತ್ರ ನಿರ್ದೇಶಕ ಶರತ್‌ ಪೂಜಾರಿ ಮಾತನಾಡಿ, ತುಳುವಿನಲ್ಲಿ ವಿಭಿನ್ನ ಕಥೆಯೊಂದಿಗೆ ಕಂಬಳಬೆಟ್ಟು ಭಟ್ರೆನ ಮಗಳ್‌ ಸಿನೆಮಾ ಸಿದ್ಧಗೊಳಿಸಲಾಗಿದೆ. ಶೀಘ್ರದಲ್ಲಿ ಸಿನೆಮಾ ತೆರೆ ಕಾಣಲಿದೆ. ಈಗಾಗಲೇ ಸಿನೆಮಾದ ಬಗ್ಗೆ ಪೂರಕ ಸ್ಪಂದನೆ ವ್ಯಕ್ತವಾಗಿದ್ದು, ಹೊಸತನವನ್ನು ಸಾಧಿಸುವ ವಿಶ್ವಾಸವಿದೆ ಎಂದರು. 

ಇಂದು ಹೆಚ್ಚು ಓದಿದ್ದು

Trending videos

Back to Top