CONNECT WITH US  

ಕನ್ಯಾನ ಭಾರತ ಸೇವಾಶ್ರಮ: ಸ್ಥಾಪಕರ ದಿನಾಚರಣೆ

ವಿಟ್ಲ: ಕನ್ಯಾನ ಭಾರತ ಸೇವಾಶ್ರಮದ 51ನೇ ವಾರ್ಷಿಕೋತ್ಸವ ಮತ್ತು ಸ್ಥಾಪಕ ಧೀರೇಂದ್ರನಾಥ ಭಟ್ಟಾಚಾರ್ಯ ಅವರ ಜನ್ಮ ದಿನಾಚರಣೆಯನ್ನು ರವಿವಾರ ಹಮ್ಮಿಕೊಳ್ಳಲಾಗಿತ್ತು.

ಒ. ಶ್ಯಾಮ ಭಟ್‌ ಒಡಿಯೂರು ಅಧ್ಯಕ್ಷತೆ ವಹಿಸಿದ್ದರು. ಸರೋಜಿನಿ ಭಟ್ಟಾಚಾರ್ಯ ಉದ್ಘಾಟಿಸಿದರು. 

ವಿಶೇಷ ಆಹ್ವಾನಿತರಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅನುಷ್ಠಾನ ಅಧಿಕಾರಿ ಬಿ. ಗಣೇಶ ಭಟ್‌, ವಿಟ್ಲ ಕೆಪಿಟಿಸಿಎಲ್‌ ನಿವೃತ್ತ ಮೆಕ್ಯಾನಿಕ್‌ ಪಿ.ರಘುನಾಥ ರೈ ಅರ್ಪಿಣಿ, ಕನ್ಯಾನ ಟೌನ್‌ ಮಸೀದಿಯ ಕೆ.ಎಂ. ಅಶ್ರಫ್‌ ಸಖಾಫಿ, ವಿಟ್ಲ ಫಿನಿಕ್ಸ್‌ ಕಂಪ್ಯೂಟರ್ ಮತ್ತು ಮಣಿಪಾಲ ಕಂಪ್ಯೂಟರ್‌ ಅಕಾಡೆಮಿ ಮಾಲಕ ಕ್ಲಿಫರ್ಡ್‌ ವೇಗಸ್‌, ಕನ್ಯಾನ ದ.ಕ.ಜಿ.ಪಂ.ಮಾ.ಹಿ.ಪ್ರಾ. ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಎಸ್‌. ಐತ್ತಪ್ಪ ನಾಯ್ಕ ಆನೆಕಲ್ಲು, ಮಂಗಳೂರು ರೋಟರಿ ಕ್ಲಬ್‌ ಅಧ್ಯಕ್ಷ ಡಿಜರಾಜ ನಾಯರ್‌ ಅವರು ಭಾಗವಹಿಸಿ, ಮಾತನಾಡಿದರು.

ಇದೇ ಸಂದರ್ಭ ಮಂಗಳೂರು ರೋಟರಿ ಕ್ಲಬ್‌ ವತಿಯಿಂದ ವೃದ್ಧಾಶ್ರಮಕ್ಕೆ ನೀಡಿದ 50 ಮಂಚಗಳನ್ನು ಅಧ್ಯಕ್ಷ ಡಿಜರಾಜ ನಾಯರ್‌ ಅವರು ಹಸ್ತಾಂತರಿಸಿದರು. ಉದ್ಯಮಿಗಳಾದ ಪ್ರಕಾಶ್‌ ಭಾç, ಗೋಪಾಲ ಅಗರ್‌ವಾಲ್‌, ಎಂ.ಆರ್‌. ಕಾಮತ್‌, ಸಿ.ಸಿ.ಆರ್‌. ಕಾಮತ್‌, ಶಂಕರ ಭಟ್ಟಾಚಾರ್ಯ, ಸರಿತಾ ಎಸ್‌. ಭಟ್‌ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಎಸ್‌. ಈಶ್ವರ ಭಟ್‌ ಅವರು ಸ್ವಾಗತಿಸಿ, ವರದಿ ಮಂಡಿಸಿದರು. ಉಪಾಧ್ಯಕ್ಷ ಡಿ. ಅನಂತ ಪೈ ಅವರು ವಂದಿಸಿದರು. ವರಲಕ್ಷ್ಮೀ ಅವರು ಕಾರ್ಯಕ್ರಮ ನಿರ್ವಹಿಸಿದರು. 

ಬಳಿಕ ನೇರಳಕಟ್ಟೆ ಶ್ರೀ ಮಂಜುನಾಥ ಮ್ಯೂಸಿಕಲ್ಸ್‌ ತಂಡದ ವಿಶ್ವನಾಥ ಎಸ್‌ ನೇರಳಕಟ್ಟೆ ನೇತೃತ್ವದಲ್ಲಿ ಸುಗಮ ಸಂಗೀತ, ಮಂಗಳೂರು ಜಿ.ಜಿ. ವೆಂಕಟ್ರಾಯ ಪ್ರಭು ಅವರಿಂದ ರಸಮಂಜರಿ ಮತ್ತು ಆಶ್ರಮ ನಿವಾಸಿಗಳಿಂದ ವಿವಿಧ ವಿನೋದಾವಳಿಗಳು ನಡೆದವು.

Trending videos

Back to Top