CONNECT WITH US  

ನೇತಾಡುವ ಸುಂದರ ಗೂಡಿನಲ್ಲಿ ಗೀಜುಗ

 ಮನೆ ಗುಬ್ಬಿಯನ್ನು ತುಂಬಾ ಹೋಲುವ ಹಕ್ಕಿ. ಆದರೆಗಾತ್ರದಲ್ಲಿ ಸ್ವಲ್ಪಚಿಕ್ಕದು. 15 ಸೆಂ. ಮೀ. ಗಾತ್ರದಚಿಕ್ಕ ಹಕ್ಕಿ.   Baya Weaver - ploceusphillippinus - R - sparrow +ಮರಿ ಮಾಡುವ ಸಮಯದಲ್ಲಿಗಂಡು ಹಕ್ಕಿಗೆ ತಲೆಕುತ್ತಿಗೆ ಎದೆ ಮೇಲಾºಗ ಅಚ್ಚ ಹಳದಿ ಬಣ್ಣವಾಗಿರುತ್ತದೆ. ಗುಲಾಬಿ ಬಣ್ಣದ ಸಪುರಾದ ಕಾಲು, ಚುಂಚು ಗುಬ್ಬಿಯ ಚುಂಚನ್ನುತುಬಾ ಹೋಲುತ್ತದೆ. ತಿಳಿಕ್ರೀಂ ಬಣ್ಣದ ಚುಂಚು ಅದು. ಹೆಣ್ಣು ಹಕ್ಕಿಗೆ ತಲೆಕುತ್ತಿಗೆಯಲ್ಲಿ ಹಳದಿ ಬಣ್ಣ ಇರುವುದಿಲ್ಲ. ಗಂಡು ಹಕ್ಕಿಗೆ ಕುತ್ತಿಗೆಯಿಂದ ಕಣ್ಣಿನವರೆಗೂ ಕಪ್ಪು ಬಣ್ಣಇರುತ್ತದೆ. ಭತ್ತದಗದ್ದೆಯ ಸಮೀಪ ಇರುತ್ತದೆ. ತೆಂಗು ಅಥವಾ ತಾಳೆ ಮರಗಳ ಹೆಡೆಗೆ ಸಾಮೂಹಿಕವಾಗಿ ಗೂಡುಕಟ್ಟುತ್ತದೆ. ಗುಬ್ಬಚ್ಚಿಗಿರುವಂತೆ ಕಂದುಚಿತ್ತಾರದರೆಕ್ಕೆ ಇದೆ. ಒಂದೊಂದು ತೆಂಗಿನ ಮರಗಳಲ್ಲಿ 50 ಕ್ಕಿಂತ ಹೆಚ್ಚು ವಿವಿಧ ಸೈಜಿನ ಗೂಡುಕಟ್ಟುತ್ತವೆ. ಈಗೀಗ ತೆಂಗಿನ ಗರಿಗಳಲ್ಲಿ ಗಾಳಿಯಲ್ಲಿ ತೂಗುತ್ತಿರುವ ದೃಶ್ಯಕಣ್ಮರೆಯಾಗುತ್ತಿದೆ. ಇವು ಗೂಡುಕಟ್ಟಲು ಭತ್ತದ ಸಸಿಗಳ ಎಲೆಗಳನ್ನು ಉಪಯೋಗಿಸುತ್ತವೆ. ಅದರಗೂಡಿನ ಹೆಣಿಗೆತುಂಬಾ ಸುಂದರ. ಚಿಕ್ಕಚೀಲದಂತೆ ಮಾಡಿ, ಮರಿಗಳ ವಾಸಸ್ಥಾನವನ್ನು ಗೂಡಿನಲ್ಲಿ ಮಾಡುತ್ತವೆ. ಗಂಡು ಸಾಮಾನ್ಯವಾಗಿ ಗೂಡು ಕಟ್ಟುತ್ತವೆ .ಹೆಣ್ಣಿಗೆ ಪ್ರಿಯವಾದಗೂಡನ್ನು ಆರಿಸಿ, ಸಂಗಾತಿಯೊಂದಿಗೆ ಸೇರಿಗೂಡಲ್ಲಿ ಉಳಿಯುತ್ತವೆ. ಮೊಟ್ಟೆ ಇಟ್ಟು ಮರಿಮಾಡುತ್ತವೆ. ನಾಲೆ ಸಮೀಪದ ತೆಂಗಿನ ಮರಗಳ ಸಾಲು ಇವುಗಳಿಗೆ ಗೂಡುಕಟ್ಟಲು ಪ್ರಿಯವಾದ ಸ್ಥಳ.  

ಭತ್ತದ ಕೊಯಾÉದ ನಂತರ ಗುಬ್ಬಿ ಹಾಗೂ ಇತರ ಹಕ್ಕಿಗಳ ಜೊತೆ ಗದ್ದೆಯಲ್ಲಿ ಕಾಳುಗಳನ್ನು ಆಯ್ದು ತಿನ್ನುತ್ತಿರುತ್ತವೆ. ಈಗೀಗ ಇದರಗೂಡು, ಈ ಹಕ್ಕಿ ಕಾಣುವುದೂ ಸಹ ಅಪರೂಪವಾಗುತ್ತಿದೆ. ಇದರ ಸಂತತಿ ಅಳಿವಿನ ಕಡೆ ಸಾಗುತ್ತಿದೆ ಎಂಬುದು ದುಃಖದ ಸಂಗತಿ. ಭತ್ತದ ಗದ್ದೆಗಳಿಗೆ ಹೊಡೆಯುವಕೀಟನಾಶಕ ಇದಕ್ಕೆ ಕಾರಣ ಎಂಬ ವಾದವೂ ಇದೆ. ಭತ್ತದ ಕೃಷಿಯೂ ಕಡಿಮೆಯಾಗುತ್ತಿರುವುದು ಇದಕ್ಕೆ ಕಾರಣ ವಿರಬಹದು ಎಂಬ ವಿಚಾರ ಸಹ ಇದೆ. ಏನೇ ಆಗಲಿ ಈ ಸುಂದರ ಹಕ್ಕಿಯ ಗಂಟೆಯಾಕಾರದ ಗೂಡು ಅದರಕೌಶಲ್ಯಕ್ಕೆ ಒಂದು ಸಾಕ್ಷಿ$ .ಅದರ ಹೆಣಿಗೆ .ಒಂದೇ ವಿನ್ಯಾಸ ಎಷ್ಟು ಸಮಯ ಒಂದುಗೂಡುಕಟ್ಟಲು ಬೇಕಾಗುವುದು?  ಈ ಕೌಶಲ್ಯ ಪೀಳಿ ಗೆಯಿಂದ ಪೀಳೀಗೆಗೆ ಹೇಗೆ ವರ್ಗಾವಣೆಯಾಗುತ್ತದೆ ಎಂಬ ಬಗ್ಗೆ ಸಂಶೋಧನೆ ಮಾಡಬೇಕಾಗಿದೆ.  

  ಅಲಂಕಾರಕ್ಕಾಗಿ ಇಂತಹ ಗೀಜಗನಗೂಡನ್ನು ಉಪಯೋಗಿಸುವುದರಿಂದ ಅವುಗಳ ಸಂತತಿ ಹಾಳಾಗಲು ಕಾರಣವಾಗಿದೆ.  ಭಾರತ, ಬರ್ಮಾ , ಪಾಕಿಸ್ಥಾನ ಸಿಲೋನ್‌ನಲ್ಲೂ ಇವೆ.  ಮೇ, ಸೆಪ್ಟೆಂಬರ್‌ ವೇಳೆಗೆ ಭತ್ತದ ಎಲೆ, ಕಬ್ಬಿನ ಎಲೆ ಉಪಯೋಗಿಸಿ ಗಂಟೆ ಆಕಾರದ ಗೂಡು ಕಟ್ಟುತ್ತದೆ. ಚಿರಿ, ಚಿರಿ, ಚರೀ, ಎಂದು ಗುಬ್ಬಚ್ಚಿಯ ಹಾಗೆ ಸದಾಕೂಗುತ್ತಿತ್ತದೆ. ಇದರ ಬಣ್ಣ ಹಾಗೂ ಆಕಾರಆಧರಿಸಿ  ಇದರಲ್ಲಿ 3 ಉಪಜಾತಿಗಳನ್ನಾಗಿ ವಿಂಗಡಿಸಲಾಗಿದೆ. ಕೆಲವೊಂದು ಜಾತಿಯ ಹಕ್ಕಿ ಬೇಲಿಯ ಗೂಟಗಳಲ್ಲಿ ತನ್ನಗೂಡನ್ನು ನೇತು ಬಿಡುತ್ತವೆ.  

ಪಿ. ವಿ. ಭಟ್‌ ಮೂರೂರು 

Trending videos

Back to Top