CONNECT WITH US  

ಮಲೆನಾಡ ಹಕ್ಕಿ ಮಲಬಾರ್‌ಟ್ರೋಜನ್‌

ಇದು ಮಲೆನಾಡ ಹಕ್ಕಿ. ಕರಾವಳಿ ತೀರಕ್ಕಿಂತ ಒಳಗೆ ಚಿರೆ ಕಲ್ಲುಗಳಿಂದ ಕೂಡಿದದೊಡ್ಡ ಹಸಿರು ಮರಗಳ ಕಾಡಿನ ಸುಂದರ ಬಣ್ಣದ ಹಕ್ಕಿ. ಗಂಡು ಹೆಣ್ಣು ಭಿನ್ನವಾಗಿದೆ.Malabar Trogon (Harpactesfasciatas ){ Pennant} R   ಉದ್ದ ಬಾಲದ ಹಕ್ಕಿ. ಬಾಲ ಸೇರಿ 31 ಸೆಂ.ಮೀ. ಉದ್ದ. ಪಾರಿವಾಳಕ್ಕಿಂತ ಸ್ವಲ್ಪಚಿಕ್ಕದಿದೆ. ಮರ ಹಕ್ಕಿ ಅಂದರೆ ಇಂಡಿಯನ್‌ಟ್ರೀ ಪೀ ಹಕ್ಕಿಯಂತೆ ಉದ್ದ ಬಾಲ ಸಹ ಇದೆ. ಗಂಡು ಹಕ್ಕಿ ಕ್ರಿಂಸನ್‌ರೆಡ್‌ ಬಣ್ಣದಿಂದಾಗಿ ಹಸಿರು ಮರಗಳ ಹಿನ್ನೆಲೆಯಲ್ಲಿ ಎದ್ದುಕಾಣುತ್ತದೆ. ಅನೇಕ ಬಣ್ಣಗಳಿರುವ ರಂಗುರಂಗಿನ ಹಕ್ಕಿ. ರೆಕ್ಕೆ ಹಳದಿ ಬಿಳಿ ಬಣ್ಣದಿಂದ ಕೂಡಿದೆ. ಉದ್ದ ಬಾಲದ ಅಡಿ ಮಧ್ಯ ಬಿಳಿ, ಪಕ್ಕದಲ್ಲಿ ಕಪ್ಪುಗರಿಗಳಿದ್ದು ,ಇಂಗ್ಲೀಷಿನ "ಯು 'ಅಕ್ಷರದ ಆಕಾರದಲ್ಲಿ ಕಾಣಸಿಗುತ್ತದೆ. ಬಾಲದತುದಿ ಕಪ್ಪಾಗಿದ್ದು ಅಗಲವಾಗಿದೆ. ರೆಕ್ಕೆ ಹಳದಿ ಬಿಳಿ ಗೀರುಗಳಿಂದ ಕೂಡಿದೆ. ಬೆನ್ನು ಹೊಂಬಣ್ಣ.  ಬಾಲದ ಮೇಲ್ಭಾಗ ಗಾಢ ನೀಲಿಕಪ್ಪು ಬಣ್ಣಇದ್ದು, ಹೊಟ್ಟೆ ಭಾಗ ಹೊಳೆವ ರಕ್ತ ಕೆಂಪು ಬಣ್ಣದಿಂದ ಕೂಡಿದೆ. ಕುತ್ತಿಗೆ ಮುಂಭಾಗಕಪ್ಪು. ಹೊಟ್ಟೆ ಮತ್ತು ಕುತ್ತಿಗೆ ನಡುವೆ ಬಿಳಿ ಪಟ್ಟೆ ಎದ್ದು ಕಾಣಸಿಗುತ್ತದೆ. ಹೆಣ್ಣು ಹಕ್ಕಿಗೆ ಇಷ್ಟೆಲ್ಲ ಉಜ್ವಲ ಬಣ್ಣ ಇಲ್ಲ. ಮೈಯೆಲ್ಲ ತಿಳಿ ಹಳದಿ ಬಣ್ಣ. ತಲೆ ಮತ್ತು ಕುತ್ತಿಗೆ ಕಂದು ಇಟ್ಟಿಗೆ ಬಣ್ಣವಿರುತ್ತದೆ.  ರೆಕ್ಕೆಯ ಮೇಲ್ಭಾಗ ತಿಳಿ ಕಂದು, ರೆಕ್ಕೆ ಕೆಳಭಾಗ ಗಾಢಕಂದು ಮತ್ತು ತಿಳಿ ಕಂದು ಬಣ್ಣದ ಗರಿಗಳಿವೆ. ಕುಮಟಾದ ಕತ್ತಗಾಲ ಸಮೀಪದ ಕಬ್ಬರಗಿಯ ಕಾಡಿನ ಪಕ್ಕ ಇವು ಕಾಣಸಿಗುತ್ತದೆ. 

ಅಡಿಕೆ ಮರಗಳ ತೋಟದ ಸರಹದ್ದಿನಲ್ಲಿ ಮತ್ತು ಕುಮಟಾದ ಮೂರೂರು ಕಲ್ಲಬ್ಬೆಯ ಸಮೀಪದ ಹಸಿರೆಲೆ ಕಾಡಿನ ಪಕ್ಕ ಇರುವ ಅಡಿಕೆ ತೆಂಗುತೋಟದಲ್ಲಿರುವ ದೊಡ್ಡ ಮಾವಿನ ಮರದ ಹತ್ತಿರಕಂಡಿದೆ. ಇವು ಪಶ್ಚಿಮಘಟ್ಟದ ಪ್ರದೇಶದಲ್ಲಿ, ದಾಂಡೇಲಿ ಪಶ್ಚಿಮ ಭಾಗ, ಅಣಸಿ, ಆಗುಂಬೆ, ಕಣಿವೆ, ಮಲಬಾರಕಾಡಿನ ಸರಹದ್ದು, ಕರಾವಳಿ ಪ್ರದೇಶದ ಇಳಿಜಾರು ಕಣಿವೆ, ಹಸಿರು ಮರತುಂಬಿರುವ ಜಾಗದಲ್ಲಿ ಮರಗಳ ಸಂದಿನಲ್ಲಿ ಹಾರಾಡುವರೆಕ್ಕೆ ಹುಳ ಮಿಡತೆ, ಹುಲ್ಲು ಮಿಡತೆ, ಹಸಿರು ಹಿಡಿದುತಿನ್ನುವುದೇ ಇದರ ಬೇಟೆಯ ಪರಿ.

 ಎಲೆ ಬಣ್ಣದ ಮಿಡತೆ-ಯೆಲೆ ಶಟ್ಲಿ ಎಂದು ಹಳ್ಳಿಗರು ಕರೆಯವ ಹಸಿರು ಬಣ್ಣದ ಮಿಡತೆಗಳನ್ನು ,ತನ್ನ ಸ್ವಲ್ಪಚಪ್ಪಟೆ ಎನಿಸುವ ಕೊಕ್ಕಿರುವ ಅಗಲ ಬಾಯಿ ಕಳೆದು ಸುಲಭವಾಗಿ ಕಬಳಿಸುವುದು. ಉಳಿದ ಸಮಯದಲ್ಲಿ ಮೌನಿ ಈ ಹಕ್ಕಿ. ಮರಿ ಮಾಡುವ ಸಮಯದಲ್ಲಿ ಕುರ್‌,ಮØಯ್ನಾಂ ಬೆಕ್ಕಿನ ಕೂಗನ್ನು ಹೋಲುವ ಮೆಲು ದನಿಯಲ್ಲಿ ಕೂಗುವುದು. ಸೂರ್ಯ ಮುಳುಗಿ ಮುಸ್ಸಂಜೆಯಾಗುತ್ತಿದ್ದಂತೆ ಮರಗಳ ಎಲೆಗಳ ಸಂದಿನಲ್ಲಿ ಮತ್ತು ಟೊಂಗೆಗಳ ತುದಿಯಲ್ಲಿ ಹಾರುವರೆಕ್ಕೆ ಹುಳ ಹಿಡಿಯುತ್ತದೆ. ಉದ್ದವಾದ ಉಬ್ಬಿದಕಣ್ಣನ್ನು ಅಗಲ ಮಾಡಿ ಕಡಿಮೆ ಬೆಳಕಿನಲ್ಲು ಹಾರುವ ಹುಳ ಹಿಡಿಯುವುದು. ಇದರ ಉಬ್ಬಿದ ಲಕ್ಷಣ ಕಣ್ಣು ಇದರ ಬೇಟೆಗೆ ಸಹಕಾರಿಯಾಗಿದೆ. ಸ್ವಲ್ಪಚಪ್ಪಟೆ ಎನಿಸುವ ಮೊಂಡು ಚುಂಚು ಮತ್ತು ಇದರ ಅಗಲ ಬಾಯಿ ದೊಡ್ಡ ಕೀಟಗಳನ್ನು ಬೇಟೆಯಾಡಲು ಸಹಾಯಕವಾಗಿದೆ. ಈ ಹಕ್ಕಿ ನೇಪಾಳ , ಮಧ್ಯ ಭಾರತ, ಭೂತಾನ್‌, ಅರುಣಾಚಲ ಪ್ರದೇಶ, ಮಧ್ಯ ಆಸ್ಸಾಂಗಳಲ್ಲೂ ಕಾಣಸಿಗುತ್ತದೆ. 

 ಸಮುದ್ರ ಮಟ್ಟದಿಂದ 1800ಮೀ. ಎತ್ತರದ  ಕಾಡುಗಳಲ್ಲಿ ವಾಸಿಸುತ್ತವೆ. ಫೆಬ್ರವರಿ ುಂದ ಜೂನ್‌ ಇದು ಮರಿ ಮಾಡುವ ಸಮಯ. ಈ ಸಮಯದಲ್ಲಿ 3-4 ಆವೃತ್ತಿಯಲ್ಲಿ ಮೆಲು ದನಿಯಲ್ಲಿ ಕ್ಯೂ, ಮಿಯಾಂವ್‌ ಎಂದು ಸಂಗಾತಿಯೊಡನೆ ಸಂಭಾಸಿಸುವುದು. ಕೆಲವೊಮ್ಮೆ ಮರಕುಟುಕದಂತೆ ತನ್ನ ಉದ್ದದ ಬಾಲವನ್ನು ಆಸರೆಯಾಗಿ ಮಾಡಿಕೊಂಡು ಇದನ್ನು ಮೂರನೆ ಕಾಲಿನಂತೆ ಉಪಯೋಗಿಸಿ ಮರ ಏರುತ್ತದೆ.  ಮರ ಕೊರೆದುಗೂಡು ನಿರ್ಮಿಸುವಾಗ ತನ್ನ ಬಾಲದ ಉಪಯೋಗ ಪಡೆಯುವುದು. ಪ್ರಕೃತಿ ಸಹಜ ಪೊಟರೆ ಇಲ್ಲವೆ ಬೇರೆ ಹಕ್ಕಿ ಮಾಡಿದ ಮರದ ಒಟ್ಟೆಯಲ್ಲೂ ಮೊಟ್ಟೆ ಇಡುವುದಿದೆ. ಮರಕೊರೆದು ಒಟ್ಟೆ ಮಾಡಿ ಅಡಿಯಲ್ಲಿ ಮರದ ಧೂಳನ್ನು ಹಾಸಿಗೆಯಂತೆ ಹರಡಿ ಮೆದುವಾದ ಆಭಾಗದಲ್ಲಿ ದಂತ ವರ್ಣದ ವರ್ತುಲಾಕಾರದ 2-4 ಮೊಟ್ಟೆ ಇಡುತ್ತದೆ. ಇದರ ಪಾದದ 2 ಮತ್ತು 3ನೇ ಬೆರಳು ಮುಮ್ಮುಖವಾಗಿದೆ.  1 ಮತ್ತು 4 ನೇ ಬೆರಳು ಹಿಮ್ಮುಖವಾಗಿದೆ. ಇದು ಮರ ಏರಲು ಮತ್ತು ಮರದಲ್ಲಿ ಒಟ್ಟೆಕೊರೆಯಲು ಸಹಾಯಕವಾಗಿದೆ. 

ಗುಟುಕುಕೊಡುವುದು, ಮರಿಗಳ ಆರೈಕೆ ಮಾಡುವುದು ಮುಂತಾದ ಕೆಲಸದಲ್ಲಿ ಹೆಣ್ಣುಗಂಡುಒಟ್ಟಿಗೇ ದುಡಿಯುತ್ತವೆ. ಆದರೆ ರಾತ್ರಿ ಸಮಯದಲ್ಲಿ ಹೆಣ್ಣು ಕಾವು ಕೊಡುವುದು. ಮರಿಗಳ ಜೊತೆಯಲ್ಲಿ 5-6 ತಿಂಗಳು ಇರುತ್ತವೆ. ಮರಿ ಮತ್ತು ತಾಯಿಯಲ್ಲಿ ಬಾಂಧವ್ಯ ಹೆಚ್ಚು. ಶ್ರೀಲಂಕಾದ ಹಕ್ಕಿ ಸಾಮಾನ್ಯವಾಗಿ ನದಿ ತೀರದ ಕಾಡುಗಳಲ್ಲಿ ಹೆಚ್ಚು ಸಮಯ ಕಳೆಯುವುದು. ಬಣ್ಣ ವ್ಯತ್ಯಾಸದಿಂದ ಎರಡು ಉಪಜಾತಿಗಳಾಗಿ ವಿಂಗಡಿಸಲಾಗಿದೆ. ಹಿಮಾಲಯದ ತಳಿ ತಲೆ ಕೆಂಪು. ರೆಕ್ಕೆಚಾಕೊಲೇಟ್‌ ಬಣ್ಣ ಇರುತ್ತದೆ. ಇದು ಕೀಟಾಹಾರಿ ಪಕ್ಷಿ$. ಮರಕೊರೆವ ಅದೆಷ್ಟೋ ಲಾರ್ವಾ ಮತ್ತು ಮಿಡತೆಗಳ ನಿಯಂತ್ರಣದಲ್ಲಿ ಇದರ ಪಾತ್ರ ಹಿರಿದು. ಅದರಿಂದಾಗಿ ಅಪ್ರತ್ಯಕ್ಷವಾಗಿ ಕಾಡಿನ ಮರಗಳ ರಕ್ಷಣೆಯಲ್ಲಿ ಇದರ ಪಾತ್ರ ಹೆಚ್ಚು. ನಿತ್ಯ ಹರಿದ್ವರ್ಣಕಾಡು ಇದಕ್ಕೆ ಪ್ರಿಯ. ಕಾಡಿನ ಮರಗಳ ಉಳಿವಿಗೆ ಇದರ ಪಾತ್ರ ಹಿರಿದು. 

Trending videos

Back to Top