CONNECT WITH US  

ಪಾರಂಪರಿಕ ನಗರ ಪಟ್ಟದಿಂದ ಬಾದಾಮಿ ಔಟ್‌?

ಬಾಗಲಕೋಟೆ: ಕೇಂದ್ರ ಸರ್ಕಾರ ರೂಪಿಸಿದ ಪಾರಂಪರಿಕ ನಗರ ಅಭಿವೃದ್ಧಿ ಮತ್ತು ವಿಸ್ತರಣೆ ಯೋಜನೆಯಿಂದ ರಾಜ್ಯದ ಪ್ರಸಿದ್ಧ ಐತಿಹಾಸಿಕ ತಾಣ ಬಾದಾಮಿ ನಗರ ಕೈ ತಪ್ಪುವ ಆತಂಕ ಇದೀಗ ಎದುರಾಗಿದೆ. ಇದಕ್ಕೆ ಪ್ರಮುಖ ಕಾರಣ ಸ್ಥಳೀಯಾಡಳಿತ ನಿರ್ಲಕ್ಷ್ಯ.

ಬಾದಾಮಿ ಪುರಸಭೆ, ಜಿಲ್ಲಾಡಳಿತ ಹಾಗೂ ಸಮನ್ವಯತೆ ಕೊರತೆ, ಜನಪ್ರತಿನಿಧಿಗಳ ನಿರ್ಲಕ್ಷéದಿಂದಾಗಿ ಬಾದಾಮಿಗೆ ದೊರೆಯಬೇಕಾದ ಮಾನ್ಯತೆ, ಅನುದಾನವೂ ತಪ್ಪಿ ಹೋಗಲಿದೆ ಎನ್ನಲಾಗುತ್ತಿದೆ. ಪ್ರವಾಸಿ ಹಾಗೂ ಐತಿಹಾಸಿಕ ನಗರಗಳನ್ನುಸಮಗ್ರ ಅಭಿವೃದ್ಧಿಪಡಿಸು  ಉದ್ದೇಶದಿಂದ ಕೇಂದ್ರ ಸರ್ಕಾರ ಪಟ್ಟಿಮಾಡಿರುವ ತಾಣಗಳಲ್ಲಿ ಬಾದಾಮಿಯೂ ಒಂದು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ವೇಳೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಶಿರಡಿ ಸಾಯಿಬಾಬಾ ಚಲನಚಿತ್ರಕ್ಕೆ ಚಾಲನೆನೀಡಲು ಬಾದಾಮಿಗೆ ಬಂದಾಗ ಪಟ್ಟಣದ ಅವ್ಯವಸ್ಥೆ ಕಣ್ಣಾರೆಕಂಡಿದ್ದರು. ಜತೆಗೆ ಸಂಸದ ಗದ್ದಿಗೌಡರ ಕೂಡ ಬಾದಾಮಿಯಸಮಗ್ರ ಅಭಿವೃದ್ಧಿಪಡಿಸಬೇಕು ಎಂಬ ಆಶಯದೊಂದಿಗೆಹಲವು ಪ್ರಯತ್ನ ಮಾಡಿದ್ದರು. ಈ ಪ್ರಯತ್ನದಿಂದ ದೇಶದ 12ಪಾರಂಪರಿಕ ನಗರಗಳಲ್ಲಿ ಬಾದಾಮಿಯೂ ಆಯ್ಕೆಗೊಂಡಿತ್ತು.

ಈ 12 ನಗರ ಅಭಿವೃದ್ಧಿಗೆ ಕೇಂದ್ರ ಸರ್ಕಾರ 500 ಕೋಟಿ ಮೀಸಲಿಟ್ಟಿದ್ದು, ಮೊದಲ ಕಂತಾಗಿ 200 ಕೋಟಿಗೆ ಮಂಜೂರಾತಿನೀಡಲಾಗಿದೆ ಎನ್ನಲಾಗಿದೆ. ಕಳೆದ ವಾರ ದೆಹಲಿಯಲ್ಲಿ ನಡೆದಸಭೆಯಲ್ಲಿ ಪಾರಂಪರಿಕ ನಗರ ಅಭಿವೃದ್ಧಿ ಮತ್ತು ವಿಸ್ತರಣೆಯೋಜನೆಗೆ ಆಯ್ಕೆಯಾದ ನಗರಗಳ ಸ್ಥಳೀಯ ಸಂಸ್ಥೆಯಮುಖ್ಯಾಧಿಕಾರಿ, ಸಂಸದರು, ಜಿಲ್ಲಾಡಳಿತದ ಒಬ್ಬ ಪ್ರತಿನಿಧಿಪಾಲ್ಗೊಳ್ಳಬೇಕಿತ್ತು. ಆದರೆ ಯಾರೂ ಭಾಗವಹಿಸದೇ ಇರುವುದುಯೋಜನೆ ಹಿನ್ನಡೆಗೆ ಕಾರಣವಾಗಿದೆ.

ಜಿಲ್ಲಾಡಳಿತಕ್ಕೆ ತಿಳವಳಿಕೆ ನೋಟಿಸ್‌?: ಮೊದಲ ಸಭೆಗೆ ಜಿಲ್ಲಾಡಳಿತದಿಂದ ಯಾವ ಅಧಿಕಾರಿಯೂ ಭಾಗವಹಿಸದೇ ಹೊಸ ಯೋಜನೆಯಡಿ ಕೈಗೊಳ್ಳಲಿರುವ ಯೋಜನೆಯ ನೀಲನಕ್ಷೆ ಒಪ್ಪಿಸದ ಹಿನ್ನೆಲೆಯಲ್ಲಿ ಕೇಂದ್ರ ಜಿಲ್ಲಾಡಳಿತಕ್ಕೆ ತಿಳಿವಳಿಕೆ ನೋಟಿಸ್‌ನೀಡಿದ್ದು, ಜ.21ರಂದು ನಡೆಯಲಿರುವ ಸಭೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಜತೆಗೆ ಬಾದಾಮಿಯನ್ನು ಪಾರಂಪರಿಕ ತಾಣವಾಗಿ ಅಭಿವೃದ್ಧಿಪಡಿಸಲು ರೂಪಿಸಿದ ನೀಲನಕ್ಷೆಯ ಪ್ರಸ್ತಾ ವನೆ ಸಲ್ಲಿಸಬೇಕು ಎಂದು ತಿಳಿಸಲಾಗಿದೆ ಎನ್ನಲಾಗಿದೆ..

ಅನುದಾನ ಕಟ್‌?: ಪಾರಂಪರಿಕ ನಗರ ಅಭಿವೃದ್ಧಿ ಮತ್ತು ವಿಸ್ತರಣೆ ಯೋಜನೆಯಡಿ ಬಾದಾಮಿ ಪಟ್ಟಣದ 28 ಕಿ.ಮೀ ಸುತ್ತಳತೆಯಲ್ಲಿ ಇರುವ ಐತಿಹಾಸಿಕ ಸ್ಮಾರಕಗಳ ರಕ್ಷಣೆ, ಅಭಿವೃದ್ಧಿ,ವಿಸ್ತರಣೆ ಹಾಗೂ ಯುವ ಸಮುದಾಯಕ್ಕೆ ಅವುಗಳ ಮಹತ್ವತಿಳಿಸುವ ಮಹತ್ವದ ನೀಲನಕ್ಷೆ ತಯಾರಿಸಬೇಕು. ಜತೆಗೆ ಸ್ಮಾರಕಗಳಸುತ್ತಲೂ ಪ್ರವಾಸಿಗರ ಆಕರ್ಷಣೆಯಾಗಿ ಹೊಸ ಪ್ರಯತ್ನಮಾಡಬೇಕು. ಆದರೆ ಬಾದಾಮಿಯಲ್ಲಿ ರಸ್ತೆ, ಚರಂಡಿ ನಿರ್ಮಾಣ,ಸ್ವತ್ಛತೆ ಕೈಗೊಳ್ಳುವುದು ಮಾತ್ರ ಎಂಬಂತೆ ಸ್ಥಳೀಯ ಆಡಳಿತ ವರ್ತಿಸುತ್ತಿದೆ ಎಂಬ ಅಸಮಾಧಾನ ಕೇಳಿಬಂದಿದೆ. ಪ್ರಸ್ತಾವನೆ ಸಿದ್ಧಪಡಿಸದೇ ಇರುವುದರಿಂದ 12 ನಗರಗಳಿಗೆ ಸಮನಾಗಿ ಹಂಚಬೇಕಿದ್ದ ಅನುದಾನದಲ್ಲಿ ಬಾದಾಮಿಗೆ ಅನ್ಯಾಯವಾಗಿದೆ.

200 ಕೋಟಿಯಲ್ಲಿ ಸಮನಾಗಿ ಹಂಚಿಕೆ ಮಾಡಿದ್ದರೆ ತಲಾ 41.66 ಕೋಟಿ ಲಭ್ಯವಾಗಬೇಕಿತ್ತು. ಆದರೆ ಈ ಯೋಜನೆಯಡಿ ಬಾದಾಮಿಗೆ ಕೇವಲ 20 ಕೋಟಿ ನೀಡಲು ಕೇಂದ್ರ ನಿರ್ಧರಿಸಿದೆ ಎಂದು ಮೂಲಗಳು ಖಚಿತಪಡಿಸಿವೆ.

ಜಿಲ್ಲಾಡಳಿತದ ತುರ್ತು ಸಭೆ: ಜ.21ರ ಸಭೆಗೆ ಕಡ್ಡಾಯವಾಗಿ ಭಾಗವಹಿಸಲೇ ಬೇಕು ಎಂಬ ಕೇಂದ್ರದ ತಿಳಿವಳಿಕೆ ನೋಟಿಸ್‌ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಧಿಕಾರಿಯೊಬ್ಬರನ್ನು ಕಳುಹಿಸುತ್ತಿದೆ.ಜತೆಗೆ 2013ರಲ್ಲಿ ರೂಪಿಸಿದ್ದ ಹಳೆಯ ಯೋಜನೆಗೆ ಒಂದಷ್ಟು ಹೊಸ ರೂಪಕೊಡಲು ತಯಾರಿ ನಡೆದಿದೆ. ಈ ಕುರಿತು ಶುಕ್ರವಾರ ಜಿಲ್ಲಾಡಳಿತ ಒಂದು ತುರ್ತು ಸಭೆಯನ್ನೂ ನಡೆಸಿದೆ.

10ನೇ ನಗರವಾಗಿ ಆಯ್ಕೆಯಾಗಿತ್ತು ಕೇಂದ್ರ ಸರ್ಕಾರದ ಈ ಯೋಜನೆಯಡಿ ಬಾದಾಮಿ10ನೇ ನಗರವಾಗಿ ಆಯ್ಕೆಯಾಗಿದೆ. ವಾರಾಣಸಿ,ಮಥುರಾ, ಗಯಾ, ಅಮೃತಸರ, ಅಜೆ¾àರ್‌, ಕಾಂಚಿಪುರ,ವೇಲಂಕಣಿ, ಪುರಿ, ದ್ವಾರಕಾ, ಬಾದಾಮಿ, ವಾರಂಗಲ್‌ ಮತ್ತು ಅಮರಾವತಿ (ತೆಲಂಗಾಣ) ನಗರಗಳು ಆಯ್ಕೆಯಾಗಿವೆ. ಈ ಯೋಜನೆಗೆ ಆಯ್ಕೆಯಾದ ಉಳಿದ ನಗರಗಳ ಆಡಳಿತ, ಜನಪ್ರತಿನಿಧಿಗಳು ಪ್ರಸ್ತಾವನೆ ಸಿದ್ಧಪಡಿಸಿ, ಕೇಂದ್ರ ಸರ್ಕಾರಕ್ಕೆ ಸಲ್ಲಿಸಿವೆ. ಆದರೆ ಬಾದಾಮಿಪುರಸಭೆ, ಜಿಲ್ಲಾಡಳಿತ ಮಾತ್ರ ವಿಸ್ತೃತ ಯೋಜನೆ ರೂಪಿಸಿಲ್ಲ

ಯೋಜನೆ ಕೈತಪ್ಪಲು ಬಿಡಲ್ಲ

ಈ ಯೋಜನೆ ಬಾದಾಮಿ ಕೈತಪ್ಪಲು ಬಿಡುವುಲ್ಲ. ಕೇಂದ್ರದಿಂದ ನೋಟಿಸ್‌ ಜಿಲ್ಲಾಡಳಿತಕ್ಕೆ ಬಂದಿದ್ದು ನಿಜ. ಪ್ರಸ್ತಾವನೆ ಸಿದ್ಧಪಡಿಸಲು ಅಧಿಕಾರಿಗಳು,ಇತಿಹಾಸಕಾರರು ಹಾಗೂ ಪ್ರಮುಖರ ಸಭೆಯನ್ನು ಜಿಲ್ಲಾಧಿಕಾರಿ ನಡೆಸಿದ್ದಾರೆ.

 ಪಿ.ಸಿ.ಗದ್ದಿಗೌಡರ, ಸಂಸದ, ಬಾಗಲಕೋಟೆ ಕ್ಷೇತ್ರ

„ ಶ್ರೀಶೈಲ ಕೆ.ಬಿರಾದಾರ

Trending videos

Back to Top