CONNECT WITH US  

ಬಾದಾಮಿಗೆ ಬರಿ¤ದೆ ಕೇಂದ್ರ ತಂಡ

ಬಾಗಲಕೋಟೆ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ರಾಷ್ಟ್ರೀಯ ಪಾರಂಪರಿಕ ತಾಣ ಅಭಿವೃದ್ಧಿಯ ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರದ ಇಂಟ್ಯಾಕ್‌ ಸಂಸ್ಥೆಯ ಐವರು ಹಿರಿಯ ಅಧಿಕಾರಿಗಳ ತಂಡ ಮೇ 14ರಿಂದ ಮೂರು ದಿನಗಳ ಕಾಲ ಬಾದಾಮಿಯಲ್ಲಿ ಬೀಡು ಬಿಡಲಿದೆ. ಕೇಂದ್ರ ಸರ್ಕಾರದ ನೆರವಿನೊಂದಿಗೆ ನಡೆಯುವ
ಇಂಟ್ಯಾಕ್‌ ಸಂಸ್ಥೆಯ ಪ್ರಧಾನ ನಿರ್ದೇಶಕ ನವೀನ್‌ ಪಿಪಲಾನ್‌ ನೇತೃತ್ವದ ಐವರು ಹಿರಿಯ ಅಧಿಕಾರಿಗಳ ತಂಡ, ಮೇ 13ರಂದು ರಾತ್ರಿಯೇ ಬಾಗಲಕೋಟೆ ನಗರಕ್ಕೆ ಬರಲಿದೆ. ಮೇ 14ರಿಂದ 16ರ ವರೆಗೆ ಬಾದಾಮಿ ನಗರದ ಪ್ರತಿಯೊಂದು ಐತಿಹಾಸಿಕ ಸ್ಮಾರಕಗಳ ವೀಕ್ಷಣೆ, ಮೂಲಭೂತ ಸೌಲಭ್ಯ, ಸ್ಮಾರಕಗಳ ಸುತ್ತಲಿನ ಪ್ರದೇಶ ಹಾಗೂ ಪ್ರವಾಸಿಗರಿಗೆ
ಒದಗಿಸಿದ ಮೂಲಭೂತ ಸೌಲಭ್ಯಗಳ ಕುರಿತು ಸಮಗ್ರ ಚರ್ಚೆ ನಡೆಸಲಿದೆ.

ಕೇಂದ್ರ ಸರ್ಕಾರದ ಈ ಯೋಜನೆಗೆ ರಾಷ್ಟ್ರದ ಒಟ್ಟು 12 ಪಾರಂಪರಿಕ ನಗರ ಆಯ್ಕೆ ಮಾಡಿದ್ದು, ಇದರಲ್ಲಿ ಬಾದಾಮಿಯೂ ಒಂದಾಗಿದೆ. ರಾಜ್ಯದಲ್ಲಿಯೇ ಬಾದಾಮಿ ಮಾತ್ರ ಆಯ್ಕೆಯಾಗಿದ್ದು, ಬಾದಾಮಿಯಲ್ಲಿ ಈ ಯೋಜನೆ ಅತ್ಯಂತ ಪರಿಣಾಮಗಾರಿಕಾಯಗಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.

ಈಗಾಗಲೇ ಈ ಯೋಜನೆಯಡಿ ಅಮೃತಸರ, ಪುರಿ ಹಾಗೂ ವಾರಣಾಸಿ ನಗರಗಳ ಸಮಗ್ರ
ಅಭಿವೃದ್ಧಿಗೆ ನೀಲನಕ್ಷೆ ಹಾಕಿಕೊಟ್ಟಿರುವ ಇಂಟ್ಯಾಕ್‌ ಸಂಸ್ಥೆ ಬಾದಾಮಿಗೆ ಬರಲಿದೆ. ಇಲ್ಲಿ
ಪ್ರವಾಸೋದ್ಯಮ, ಸ್ಮಾರಕಗಳ ರಕ್ಷಣೆ, ಸಂರಕ್ಷಣೆ ಹಾಗೂ ಭಾರತೀಯ ಪುರಾತತ್ವ ಹಾಗೂ ಸರ್ವೇಕ್ಷಣ ಇಲಾಖೆಯಡಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಇಲ್ಲಿನ ಅಧಿಕಾರಿಗಳಿಗೆ ಸೂಕ್ತ ತರಬೇತಿಯನ್ನೂ ಈ ತಂಡ ನೀಡಲಿದೆ.

ಈ ಯೋಜನೆಯಡಿ ಬಾದಾಮಿ ನಗರದ ಸಮಗ್ರ ಅಭಿವೃದ್ಧಿಗೆ ಒಟ್ಟು 32 ಕೋಟಿ ವೆಚ್ಚದ
ಯೋಜನಾ ವರದಿಯನ್ನು ಜಿಲ್ಲಾಡಳಿತ ತಯಾರಿಸಿದೆ. ಆದರೆ, ಮೊದಲ ಹಂತದಲ್ಲಿ 22.26 ಕೋಟಿ ಮೊತ್ತಕ್ಕೆ ಕೇಂದ್ರ ಸರ್ಕಾರ ಅನುಮೋದನೆ ಕೊಟ್ಟಿದೆ. ಈಗಾಗಲೇ ಈ ಯೋಜನೆ ಸವಿಸ್ತಾರ ಯೋಜನಾ ವರದಿ (ಡಿಪಿಆರ್‌) ಕೂಡ ತಯಾರಿಸಲಾಗಿದ್ದು, ಅದರಲ್ಲಿ ಆಗಬೇಕಾದ ಬದಲಾವಣೆ ಕುರಿತು ಇಂಟ್ಯಾಕ್‌ ಸಂಸ್ಥೆಯ ಅಧಿಕಾರಿಗಳು ಇಲ್ಲಿನ ಸ್ಥಳ ಪರಿಶೀಲನೆಯ ಬಳಿಕ ಮಾರ್ಗದರ್ಶನ ಮಾಡಲಿದ್ದಾರೆ. 

72 ಮನೆ ಸ್ಥಳಾಂತರ: ಬಾದಾಮಿಯ ಮೇಣಬಸದಿ, ಅಗಸ್ತತೀರ್ಥ ಹಾಗೂ ವಸ್ತು
ಸಂಗ್ರಹಾಲಯದ ಸುತ್ತಲೂ ಜನವಸತಿ ಇದೆ. ಹೀಗಾಗಿ ಸ್ಮಾರಕಗಳ ಸಂರಕ್ಷಣೆಗೆ ತೊಂದರೆಯಾಗಿದ್ದು, ಈ ಮನೆಗಳ ಸ್ಥಳಾಂತರಕ್ಕೆ ಈಗಾಗಲೇ ಯೋಜನೆ
ಸಿದ್ಧವಾಗಿದೆ. 72 ಮನೆಗಳ ಸ್ಥಳಾಂತರ, ಪುನರ್‌ ವಸತಿ ಹಾಗೂ ಪರಿಹಾರ ವಿತರಣೆ ಕುರಿತೂ ಇಂಟ್ಯಾಕ್‌ ಸಂಸ್ಥೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಯಲಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಚಾಮುಂಡಿ ಬೆಟ್ಟ ಮಾದರಿ: ಬಾದಾಮಿ ಸುತ್ತಲೂ ಗುಹಾಂತರ ದೇವಾಲಯ ಹಾಗೂ ಬೆಟ್ಟಗಳಿದ್ದು, ಅವುಗಳಿಗೆ ಚಾಮುಂಡಿ ಬೆಟ್ಟದ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಯೋಜನೆಯಡಿ ಅಳವಡಿಸಲು ನಿರ್ಧರಿಸಲಾಗಿದೆ. ಬೆಟ್ಟದ ಮೇಲೊಂದು ದೇವಾಲಯವಿದ್ದು, ಅಲ್ಲಿಯ ವರೆಗೆ ರಸ್ತೆ ನಿರ್ಮಾಣ, ದೇವಸ್ಥಾನದ ಅಭಿವೃದ್ಧಿ ಮಾಡಿದರೆ ಇದೊಂದು ಸುಂದರ ಪ್ರವಾಸಿ ತಾಣವಾಗಲಿದೆ ಎಂಬುದು ಐಎಎಸ್‌ ಅಧಿಕಾರಿಯೊಬ್ಬರ ಆಶಯವಾಗಿತ್ತು.
ಅವರ ಸಲಹೆ ಮೇರೆಗೆ ಚಾಮುಂಡಿ ಬೆಟ್ಟದ ಮಾದರಿಯಲ್ಲಿ ಬಾದಾಮಿ ಬೆಟ್ಟ ಅಭಿವೃದ್ಧಿಗೂ
ಹೃದಯ ಯೋಜನೆಯಡಿ ಜಿಲ್ಲಾಡಳಿತ ಗಂಭೀರ ಚಿಂತನೆ ನಡೆಸಿದೆ ಎಂದು ಖಚಿತ ಮೂಲಗಳು ತಿಳಿಸಿವೆ.

Trending videos

Back to Top