CONNECT WITH US  

ಈ ಸಿನಿಮಾ ನೋಡಿ...ಗುಂಡಿಗೆ ಗಟ್ಟಿ ಇದೆ ಅಂತ ಸಾಬೀತಾದ್ರೆ 5 ಲಕ್ಷ ರೂ.!

ಸಿನೆಮಾ ನೋಡಲು ಕ್ಯೂ ನಿಂತು ದುಡ್ಡು ಕೊಡೋರು ನಾವು...ಅದೇ ಚಿತ್ರ ನೋಡಿದಕ್ಕೆ ನಿರ್ಮಾಪಕ ದುಡ್ಡು ಕೊಟ್ರೆ...!
ಹೌದು ಇಂತಹದೊಂದು ಆಫರ್ ಕಾಲಿವುಡ್ ಚಿತ್ರರಂಗದಿಂದ ಬಂದಿದೆ. 

ಸೌತ್ ಸುಂದರಿ ನಯನತಾರ ಅಭಿನಯದ ಮಯೂರಿ ಚಿತ್ರವನ್ನು ನೀವು ನೋಡಿ 5 ಲಕ್ಷ ಗೆಲ್ಲಬಹುದು ಎಂದು ಚಿತ್ರದ ನಿರ್ಮಾಪಕ ಸಿನಿರಸಿಕರಿಗೆ ಬಂಪರ್ ಆಫರ್ ನೀಡಿದ್ದಾರೆ.

ಆದರೆ ಈ ಚಿತ್ರವು ಹಾರರ್ ಥ್ರಿಲ್ಲರ್ ಕಥೆಯನ್ನು ಹೊಂದಿದ್ದು ಚಿತ್ರ ನೋಡಿ ನಿಮ್ಮ ಗುಂಡಿಗೆ ಗಟ್ಟಿಯಿದೆ ಎಂದು ಸಾಬೀತಾದರೆ 5 ಲಕ್ಷ ರೂ. ನಿಮ್ಮ ಕೈ ಸೇರುತ್ತದೆ ಅಂದಿದ್ದಾರೆ ನಿರ್ಮಾಪಕ.

ಮಯೂರಿ ಚಿತ್ರವು ತಮಿಳು-ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಲಿದ್ದು ಈ ಚಿತ್ರವು ನಟಿ ನಯನತಾರ ಅಭಿನಯದ ಅತ್ಯುತ್ತಮ ಚಿತ್ರ ಎಂದಿದ್ದಾರೆ.

ಮಹಿಳಾ ಕೇಂದ್ರಿತ ಥ್ರಿಲ್ಲರ್ ಚಿತ್ರದಲ್ಲಿ ಸೂಪರ್ ಬೆಡಗಿ ನಯನತಾರ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಕಿಚ್ಚ ಸುದೀಪ್ ಅಭಿನಯದ ಬಾಲಿವುಡ್ ಚಿತ್ರ ಫೂಂಕ್2  ನೋಡಿ ಭಯಪಡದವರಿಗೆ 5 ಲಕ್ಷ ಬಹುಮಾನ ನೀಡುವುದಾಗಿ ರಾಮ್ ಗೋಪಾಲ್ ವರ್ಮಾ ಘೋಷಿಸಿದ್ದರು.

ಈಗ ಮಯೂರಿ ಚಿತ್ರದ ನಿರ್ಮಾಪಕರು ಕೂಡ ಅದೇ ರೀತಿಯ ಪ್ರಸ್ತಾವನೆಯನ್ನು ಸಿನಿಪ್ರಿಯರ ಮುಂದಿಟ್ಟಿದ್ದಾರೆ. ಈ ಚಿತ್ರವು ಇದೇ ಸೆಪ್ಟಂಬರ್  17ರಂದು ತೆರೆಗೆ ಬರಲಿದ್ದು ನಿರ್ಭೀತ ಕೆಚ್ಚದೆಯ ವೀರರು 5 ಲಕ್ಷ ರೂ. ಗೆಲ್ಲಲು ರೆಡಿಯಾಗ್ಬಹುದು.

-ಕಪ್ಪು ಮೂಗುತ್ತಿ

Trending videos

Back to Top