CONNECT WITH US  

ಕೋಟಿಗೊಬ್ಬ ಕಿಚ್ಚನಿಗೆ 6 ಎದುರಾಳಿ

ಖ್ಯಾತ ತಮಿಳು ಚಿತ್ರ ನಿರ್ದೇಶಕ ಕೆ.ಎಸ್ ರವಿಕುಮಾರ್ ನಿರ್ದೇಶಿಸುತ್ತಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ತ್ರಿಭಾಷಾ ಚಿತ್ರದಲ್ಲಿ ಒಟ್ಟು 6 ವಿಲನ್'ಗಳಿರಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಕನ್ನಡದಲ್ಲಿ ಕೋಟಿಗೊಬ್ಬ2(ಶೀರ್ಷಿಕೆ ಫೈನಲ್ ಆಗಿಲ್ಲ) ಎಂದು ಹೇಳಲಾಗಿರುವ ಈ ಚಿತ್ರದಲ್ಲಿ ಕಿಚ್ಚನೊಂದಿಗೆ ಖ್ಯಾತ ಖಳನಟರಾದ ಬಹುಭಾಷಾ ತಾರೆ ಪ್ರಕಾಶ್ ರಾಜ್, ಅರ್ಮುಗಂ ರವಿಶಂಕರ್, ನಾಜರ್ , ಶರತ್ ಲೋಹಿತಾಶ್ವ, ಅವಿನಾಶ್ , ಮುಖೇಶ್ ತಿವಾರಿ  ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರಕ್ಕೆ ತಮಿಳಿನಲ್ಲಿ ಮುಂಡಿಜಾ ಇವನ ಪುಡಿ(ಸಾಧ್ಯವಾದರೆ ಇವನ ಹಿಡಿಯಿರಿ) ಎಂದು ಹೆಸರಿಟ್ಟಿದ್ದು ಈಗ ಚಿತ್ರದಲ್ಲಿ ಖ್ಯಾತನಾಮರು ವಿಲನ್'ಗಳಾಗಿ ನಟಿಸುತ್ತಿರುವುದರಿಂದ ಡೈಲಾಗ್'ಗಳ ರಸದೌತಣ ಲಭ್ಯವಾಗಲಿದೆ ಎಂಬ ನಿರೀಕ್ಷೆ ಸಿನಿಪ್ರಿಯರಲ್ಲಿ ಮೂಡಿದೆ.

ಸೂರಪ್ಪ ಬಾಬು ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಸುದೀಪ್'ಗೆ ನಾಯಕಿಯಾಗಿ ಮೈನಾ ಸುಂದರಿ ನಿತ್ಯಾ ಮೆನನ್ ಅಭಿನಯಿಸುತ್ತಿದ್ದಾರೆ.

-ಕಪ್ಪು ಮೂಗುತ್ತಿ

Trending videos

Back to Top