CONNECT WITH US  

ಸಲ್ಲು ಭಾಯ್'ಗೆ 'ಘಜನಿ' ಚಿತ್ರ ನಿರ್ದೇಶಕನ ಆ್ಯಕ್ಷನ್ ಕಟ್ !

ಅಮೀರ್ ಖಾನ್'ರನ್ನು ಬಾಲಿವುಡ್ ಬಾಕ್ಸಾಫೀಸ್ ಅಮೀರನಾಗಿಸಿದ ಘಜನಿ ಚಿತ್ರ ನಿರ್ದೇಶಕ ಎ.ಆರ್.ಮುರುಗದಾಸ್ ಮತ್ತೊಂದು ಬಿಟೌನ್ ಸೂಪರ್ ಸ್ಟಾರ್ ಚಿತ್ರವನ್ನು ಕೈಗೆತ್ತಿಕೊಳ್ಳುವ ಮುನ್ಸೂಚನೆಯಿದೆ.

ಈ ಹಿಂದೆ ತಮಿಳಿನ ಘಜನಿ ಮತ್ತು ತುಪ್ಪಾಕಿ ಚಿತ್ರಗಳನ್ನು ಬಾಲಿವುಡ್'ನಲ್ಲಿ ಮರು ನಿರ್ದೇಶಿಸಿದ್ದ ಮುರುಗದಾಸ್ ತಮ್ಮ ಮುಂದಿನ ಪ್ರೊಜೆಕ್ಟ್'ನಲ್ಲಿ ಸಲ್ಮಾನ್ ಖಾನ್'ರನ್ನು ನಾಯಕರನ್ನಾಗಿಸುವ ಸಾಧ್ಯತೆ ಹೆಚ್ಚಿದೆ.

ಸೋನಾಕ್ಷಿ ಸಿನ್ಹಾ ನಾಯಕಿಯಾಗಿ ನಟಿಸುತ್ತಿರುವ ಅಕಿರಾ(ಮೌನಗುರು-ತಮಿಳು) ಚಿತ್ರವನ್ನು ನಿರ್ದೇಶಿಸುತ್ತಿರುವ ಸೌತ್ ನಿರ್ದೇಶಕ ಮುರುಗದಾಸ್ ಇತ್ತೀಷೆಗೆಷ್ಟೆ ಸಲ್ಲು ಭಾಯಿಜಾನ್'ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಸದ್ಯ ಪ್ರೇಮ್ ರತನ್ ಧನ್ ಪಾಯೊ ಹಾಗೂ ಸುಲ್ತಾನ್ ಚಿತ್ರಗಳಲ್ಲಿ ತೊಡಗಿಸಿಕೊಂಡಿರುವ ಸಲ್ಲು ಮಿಯಾ ಮುಂದೆ ತಮ್ಮ ಭಾವ ಅತುಲ್ ಕುಲ್ಕರ್ಣಿ ನಿರ್ದೇಶಿಸಲಿರುವ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಈ ಚಿತ್ರದ ಬಳಿಕ ಸಲ್ಮಾನ್ ಖಾನ್ ಸೌತ್ ನಿರ್ದೇಶಕ ಮುರುಗದಾಸ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದಹಾಗೆ ಈ ಚಿತ್ರವು ತಮಿಳಿನ ಸೂಪರ್ ಹಿಟ್ 'ಕತ್ತಿ' ಚಿತ್ರದ ರಿಮೇಕ್ ಎಂಬ ಸುದ್ದಿ ಕೂಡ ಕೇಳಿಬರುತ್ತಿದೆ.

-ಕಪ್ಪು ಮೂಗುತ್ತಿ

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top