CONNECT WITH US  

ಮಾನವೀಯತೆ ಮೆರೆದ ಇಳಯ ದಳಪತಿ 'ವಿಜಯ್'

ಇಳಯ ದಳಪತಿ ವಿಜಯ್ ಮತ್ತು ಕಿಚ್ಚ ಸುದೀಪ್ ಅಭಿನಯದ 'ಪುಲಿ' ಬಿಡುಗಡೆಯಾಗಿ ಕಾಲಿವುಡ್ ಚಿತ್ರರಂಗದಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿರುವುದು ಗೊತ್ತೆ ಇದೆ.

ಅಕ್ಟೋಬರ್ 1ರಂದು ತೆರೆಕಂಡಿದ್ದ ಪುಲಿ ಚಿತ್ರದ ಮೊದಲ ಪ್ರದರ್ಶನ ವೀಕ್ಷಿಸಲು ತೆರಳಿದ್ದ ನಟ ವಿಜಯ್'ಯವರ ಇಬ್ಬರು ಅಭಿಮಾನಿಗಳು ಅಪಘಾತದಲ್ಲಿ ಮೃತಪಟ್ಟಿದ್ದರು.

ಚೆನ್ನೈನ ತಾಂಬರಂ ಬಳಿ  ಬೈಕ್'ಗೆ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ 'ಪುಲಿ'ಯ ಅಭಿಮಾನಿಗಳಾದ ಸುಂದರರಾಜನ್ ಮತ್ತು ಉದಯಕುಮಾರ್ ಸ್ಥಳದಲ್ಲೇ ಮೃತರಾಗಿದ್ದರು.

ಈ ಅಪಘಾತದ ವಿಷಯ ನಟ ವಿಜಯ್ ಗಮನಕ್ಕೆ ಬಂದಿದೆ. ಮಂಗಳವಾರ ಮುಂಜಾನೆ ಈ ಇಬ್ಬರು ಅಭಿಮಾನಿಗಳ ಮನೆಗೆ  ಭೇಟಿ ನೀಡಿರುವ ನಟ ವಿಜಯ್ ಮೃತ ಯುವಕರ ಪೋಷಕರಿಗೆ ಸಾಂತ್ವನ ಹೇಳಿ ಹಣಕಾಸಿನ ನೆರವು ನೀಡಿದ್ದಾರೆ.

ಮೃತರ ಕುಟುಂಬಕ್ಕೆ ಭವಿಷ್ಯದಲ್ಲಿ ಹೆಚ್ಚಿನ ಆರ್ಥಿಕ ನೆರವು ಒದಗಿಸುವುದಾಗಿ ಭರವಸೆ ನೀಡಿದ ಇಳಯ ದಳಪತಿ ವಿಜಯ್ ಮಾನವೀಯ ದೃಷ್ಠಿಯಲ್ಲಿ ಕಾಲಿವುಡ್ ಅಭಿಮಾನಿಗಳ ಪಾಲಿನ ದಳಪತಿ ಎನಿಸಿಕೊಂಡಿದ್ದಾರೆ.

ಈ ಹಿಂದೆ ಕನ್ನಡ 'ರನ್ನ' ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಅವಘಡದಲ್ಲಿ ಮೃತಪಟ್ಟ ಕಿಚ್ಚ ಅಭಿಮಾನಿಗೆ ಅಭಿನಯ ಚಕ್ರವರ್ತಿ ಸುದೀಪ್ ಆರ್ಥಿಕ ನೆರವು ನೀಡಿ ಆದರ್ಶ ಮೆರೆದಿದ್ದರು.

ದುನಿಯಾ ವಿಜಯ್ ಕೂಡ ಕ್ಯಾನ್ಸರ್ ಪೀಡಿತ ಅಭಿಮಾನಿಯ ಕೊನೆಯಾಸೆಯಂತೆ Rxಸೂರಿ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಿದ್ದರು. ಅಷ್ಟೇ ಅಲ್ಲದೆ ಅಭಿಮಾನಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಮಾದರಿಯಾಗಿದ್ದರು.

-ಕಪ್ಪು ಮೂಗುತ್ತಿ


Trending videos

Back to Top