CONNECT WITH US  

'ಕಿಂಗ್ ಖಾನ್'ರನ್ನು ಭೇಟಿಯಾದ 'ಸಲ್ಲು ಭಾಯಿಜಾನ್'

ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಸೋಮವಾರ ಬಿಟೌನ್ ಬಾದ್ ಷಾ ಶಾರುಖ್ ಖಾನ್'ರ ಮನೆಗೆ ಬೇಟಿ ನೀಡಿ 50ನೇ ಹುಟ್ಟುಹಬ್ಬದ ಶುಭಾಶಯ ತಿಳಿಸಿರುವ ಫೋಟೊವನ್ನು ಕಿಂಗ್ ಖಾನ್ ತಮ್ಮ ಟ್ವೀಟರ್'ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಸುಲ್ತಾನ್ ಚಿತ್ರದ ಶೂಟಿಂಗ್'ನಲ್ಲಿ ಬಿಝಿಯಾಗಿರುವ ಸಲ್ಲು ಮಿಯಾ ನವೆಂಬರ್2ರ ರಾತ್ರಿ ಶಾರುಖ್'ರನ್ನು ಭೇಟಿ ಮಾಡಿ ಕುಶಲೋಪರಿ ನಡೆಸಿದರು. ಈ ವೇಳೆ ಸುಲ್ತಾನ್ ಚಿತ್ರದ ಕುಸ್ತಿಯ ಸೀನ್ ಬಗ್ಗೆ ತಿಳಿಸುವ ಪಿಕ್'ನ್ನು ಶಾರುಖ್ ಖಾನ್ ಶೇರ್ ಮಾಡಿಕೊಂಡಿದ್ದಾರೆ.


ಈ ಮೇಲಿನ ಚಿತ್ರದಲ್ಲಿ ಸಲ್ಮಾನ್ ಖಾನ್ ಅಭಿನಯದ ಮುಂದಿನ ಬಿಡುಗಡೆ ಸಿನೆಮಾ 'ಪ್ರೇಮ್ ರತನ್ ಧನ್ ಪಾಯೊ' ಸೀನ್ ಯಾವ ರೀತಿ ಇದೆ ಎಂಬುದರ ಕುರಿತಾಗಿ ತಿಳಿಸುವ ಹಾಸ್ಯಮಯ ಸಂದರ್ಭದ ಫೋಟೊವನ್ನು ಬಾಲಿವುಡ್ ಬಾದ್ ಷಾ ಹಂಚಿಕೊಂಡಿದ್ದಾರೆ.

ಕೆಲವರ್ಷಗಳ ಹಿಂದೆ ವೈಮನಸ್ಯವನ್ನು ಹೊಂದಿದ್ದ ಈ ಇಬ್ಬರು ಖಾನ್'ಗಳು ಸಲ್ಲು ಭಾಯ್'ಯ ತಂಗಿ ಅರ್ಪಿತಾ ಮದುವೆಯಲ್ಲಿ ಜೊತೆಯಾಗುವ ಮೂಲಕ ಎಲ್ಲಾ ಮನಸ್ತಾಪಕ್ಕೂ ಇತಿಶ್ರೀ ಹಾಡಿದ್ದರು. 

*ಕಪ್ಪು ಮೂಗುತ್ತಿ

Trending videos

Back to Top