CONNECT WITH US  

ಫ್ರೆಂಡ್‌ ಅಂಗದ್‌ ಜತೆಗೆ ಮದುವೆ: ನೇಹಾ ಧೂಪಿಯಾ Big Surprise

ಮುಂಬಯಿ : ಬಾಲಿವುಡ್‌ನ‌ಲ್ಲಿ  ಸೆಕ್ಸೀ ನಟಿಯಾಗಿ ಹಿಂದೊಮ್ಮೆ  ಸಾಕಷ್ಟು  ಹೆಸರು ಮಾಡಿದ್ದ ನೇಹಾ ಧೂಪಿಯಾ ಇಂದು ಗುರುವಾರ ತಾನು ತನ್ನ ಬೆಸ್ಟ್‌ ಫ್ರೆಂಡ್‌ ಅಂಗದ್‌ ಬೇಡಿಯನ್ನು ಮದುವೆಯಾಗಿರುವುದಾಗಿ ಇಡಿಯ ಚಿತ್ರರಂಗಕ್ಕೆ, ತನ್ನ ಅಭಿಮಾನಿಗಳಿಗೆ ಸರ್‌ಪ್ರೈಸ್‌ ನೀಡಿದ್ದಾಳೆ. 

ನೇಹಾ ಮತ್ತು ಅಂಗದ್‌ ಈಚೆಗೆ ಕೆಲ ಸಮಯದಿಂದ ಡೇಟಿಂಗ್‌ ನಿರತರಾಗಿರುವ ಬಗ್ಗೆ ದಟ್ಟ ವದಂತಿಗಳು ಹರಡಿಕೊಂಡಿದ್ದವು. ಸಿಕ್ಖ್ ಸಂಪ್ರದಾಯಂತೆ ತಾವು ಮದುವೆಯಾಗಿರುವುದಾಗಿ ಪ್ರಕಟಿಸಿರುವ ಈ ಜೋಡಿ ಇಂದು ಗುರುವಾರ ದಿಢೀರನೆ ಬಾಂಬ್‌ ಎಸೆದ ರೀತಿಯಲ್ಲಿ ತಮ್ಮ ವಿವಾಹವನ್ನು ಜಗಜ್ಜಾಹೀರು ಮಾಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ನೇಹಾ ಅವರು ತಮ್ಮ ಮದುವೆಯನ್ನು ಇಂದು ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿದರು. ಜತೆಗೆ ಅಪ್‌ಲೋಡ್‌ ಮಾಡಿರುವ ವಿವಾಹ ಸಮಾರಂಭದ ಫೋಟೋ ಆಕೆ ಈ ರೀತಿಯ ಕ್ಯಾಪ್‌ಶನ್‌ ನೀಡಿದ್ದಾರೆ : "ನನ್ನ ಬದುಕಿನ ಅತ್ಯುತ್ತಮ ನಿರ್ಧಾರ; ಇವತ್ತು, ನಾನು ನನ್ನ ಅತ್ಯುತ್ತಮ ಗೆಳೆಯನನ್ನು ವಿವಾಹವಾಗಿದ್ದೇನೆ; ಹಲೋ, ಇಲ್ಲಿದ್ದಾರೆ ನನ್ನ ಪತಿ, ಅಂಗದ್‌ ಬೇಡಿ'.

ಅಂಗದ್‌ ಬೇಡಿ ಅವರು ಕೂಡ ನೇಹಾ ಜತೆಗಿನ ತಮ್ಮ ಮದುವೆಯ ಸಿಹಿ ಸುದ್ದಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. "ನನ್ನ ಬೆಸ್ಟ್‌ ಫ್ರೆಂಡ್‌, ಈಗ ನನ್ನ ವೈಫ್; ಹಲೋ, ಈಗಿಲ್ಲಿ ನನ್ನ ಪತ್ನಿ ಇದ್ದಾರೆ - ಶ್ರೀಮತಿ ಬೇಡಿ!!!' ಎಂದು ಅಂಗದ್‌ ಬರೆದುಕೊಂಡಿದ್ದಾರೆ. 

ಕದ್ದು ಮುಚ್ಚಿ ತೆರೆಮರೆಯಲ್ಲಿ ಎಂಬಂತೆ ಮದುವೆಯಾಗಿರುವ ಈ ನೂತನ ಬಾಲಿವುಡ್‌ ಜೋಡಿಯ ವೈವಾಹಿಕ ಫೋಟೋಗಳು ರಂಗುರಂಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಮಿಂಚುತ್ತಿವೆ ! ನೂತನ ಜೋಡಿಗೆ ನಾವೂ ವೈವಾಹಿಕ ಶುಭಾಶಯ ಹೇಳೋಣ  ! 

ಕೆಲ ದಿನಗಳ ಹಿಂದಷ್ಟೇ ಬಾಲಿವುಡ್‌ ನಟಿ ಸೋನಮ್‌ ಕಪೂರ್‌ ಮದುವೆ ದಿಢೀರನೆ ನಡೆದು ಇಡಿಯ ಹಿಂದಿ ಚಿತ್ರರಂಗದವರು ಮತ್ತು ಆಕೆಯ ಅಭಿಮಾನಿಗಳು ಅಚ್ಚರಿ ಪಟ್ಟಿದ್ದರು.


Trending videos

Back to Top