CONNECT WITH US  

ಅಡಲ್ಟ್ ಸ್ಟಾರ್‌ ಆದ ರೀಚಾ ಚಡ್ಡ

ಶಕೀಲಾ ಬಯೋಪಿಕ್‌ನಲ್ಲಿ ಬಾಲಿವುಡ್‌ ನಟಿ

ಚಿತ್ರರಂಗದಲ್ಲಿ ಬಯೋಪಿಕ್‌ ಸಿನಿಮಾ ಹಾವಳಿ ದಿನೆ ದಿನೇ ಹೆಚ್ಚಾಗಿದ್ದು, ಆ ಸಾಲಿಗೆ ಹೊಸ ಸೇರ್ಪಡೆ ದಕ್ಷಿಣ ಭಾರತದ ಖ್ಯಾತ ನೀಲಿ ಚಿತ್ರತಾರೆ ಶಕೀಲಾ ಜೀವನಾಧಾರಿತ ಚಿತ್ರ.

ಹೌದು! ದಕ್ಷಿಣ ಭಾರತದ ಖ್ಯಾತ ನಟಿ ಶಕೀಲಾ ಜೀವನಚರಿತ್ರೆಯನ್ನು ಸಿನಿಮಾವನ್ನಾಗಿ ಹೊರತರುತ್ತಿರುವ ಇಂದ್ರಜಿತ್‌ ಲಂಕೇಶ್‌, ಶಕೀಲಾ ಪಾತ್ರ ನಿಭಾಯಿಸಲು ಬಾಲಿವುಡ್‌ನ‌ ರೀಚಾ ಚಡ್ಡ ಅವರನ್ನು ಕರೆತಂದಿದ್ದು, ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆಯಾಗಿದೆ. 

ಬಿಳಿ ಹಾಗೂ ಬಂಗಾರದದ ಬಣ್ಣದ ಸೀರೆಯುಟ್ಟ ರಿಚಾ ಮಲಯಾಳಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದು, ಸಾಮಾಜಿಕ ಜಾಲತಾಣದಲ್ಲಿ ಚಿತ್ರವು ಸಕತ್‌ ವೈರಲ್‌ ಆಗಿದೆ. ಚಿಕ್ಕ ವಯಸ್ಸಿನ ಲ್ಲೇ ಚಿತ್ರರಂಗಕ್ಕೆ ಬಂದ ಶಕೀಲಾ ನೀಲಿ ಸಿನಿಮಾಗಳಲ್ಲೇ ಹೆಚ್ಚು ಕಾಣಿಸಿಕೊಂಡಿದ್ದರು.

ಇನ್ನು ಹೆಸರಿಡದ ಈ ಚಿತ್ರದ ಚಿತ್ರೀಕರಣ ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಆರಂಭವಾಗಿದ್ದು, ಚಿತ್ರಕ್ಕೆ ಕನ್ನಡದ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಆಕ್ಷನ್‌ ಕಟ್‌ ಹೇಳಿದ್ದು, ಹಿಂದಿ ಭಾಷೆಯಲ್ಲಿ ಚಿತ್ರ ತಯಾರಾಗುತ್ತಿದೆ. 

ಚಿತ್ರದ ಪಾತ್ರಕ್ಕೆ ನ್ಯಾಯ ಒದಗಿಸುವುದಕ್ಕಾಗಿ ನಾಯಕಿ ರಿಚಾ ಸ್ವತಃ ಶಕೀಲಾ ಅವರನ್ನು ಭೇಟಿಯಾಗಿ ಸಲಹೆ ಸೂಚನೆ ಪಡೆದುಕೊಂಡಿದ್ದಾರೆ ಎನ್ನಲಾಗಿದ್ದು, ಶಕೀಲಾ ಅವರ ಜೀವನದ ಮೇಲೆ ಬೆಳಕು ಚೆಲ್ಲುವ ಈ ಚಿತ್ರ ಅವರ ಅಭಿಮಾನಿಗಳಿಗೆ ತೀವ್ರ ಕುತೂಹಲ ಹುಟ್ಟಿಸಿದೆ. ಇನ್ನು ಸಿನಿಮಾದಲ್ಲಿ ಶಕೀಲಾ ಅವರ ಸಿನಿಮಾ ಕೆರಿಯರ್‌ನ ಆರಂಭಿಕ ಜೀವನದ ಕಥೆಯನ್ನು ಬಿಂಬಿಸಲಾಗಿದೆ ಎಂದು ತಿಳಿದು ಬಂದಿದೆ. 


Trending videos

Back to Top