CONNECT WITH US  

'ಹೀರೊ'ಗೆ ಸಿಂಗರ್ ಆದ ಸಲ್ಮಾನ್ ಖಾನ್

ಕಿಕ್ ಚಿತ್ರದ ಹ್ಯಾಂಗೊವರ್ ಗೀತೆಯ ಮೂಲಕ ಬಾಲಿವುಡ್'ನಲ್ಲಿ ಗಾಯಕನ ಪಟ್ಟಕೇರಿದ್ದ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ತಮ್ಮದೇ ನಿರ್ಮಾಣದ ಹೊಸ ಪ್ರತಿಭೆಗಳ 'ಹೀರೊ' ಚಿತ್ರಕ್ಕೆ ಮತ್ತೆ ಕಂಠದಾನ ಮಾಡಿದ್ದಾರೆ.

ಹಿರಿಯ ನಟ ಆದಿತ್ಯಾ ಪಾಂಚೋಲಿ ಪುತ್ರ ಸೂರಜ್ ಪಾಂಚೋಲಿ ಹಾಗೂ ಸುನಿಲ್ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿಯ ಬಾಲಿವುಡ್ ಪರ್ದಪಣಾ ಚಿತ್ರ 'ಹೀರೊ'ನಲ್ಲಿ ಸಲ್ಲು ಮಿಯಾ ಮೈ ಹೂ ಹೀರೊ ತೆರಾ ಗೀತೆಯನ್ನು ಹಾಡಿದ್ದಾರೆ.

ಚಿತ್ರದಲ್ಲಿ ಹಾಡಿರುವ ಬಗ್ಗೆ ಗೀತೆಯ ಟೀಸರ್'ನೊಂದಿಗೆ ಟ್ವೀಟ್ ಮಾಡಿರುವ ಬಾಲಿವುಡ್ ಭಾಯಿಜಾನ್ ಸಂಪೂರ್ಣ ಗೀತೆಯನ್ನು ಆಗಸ್ಟ್ 7ರಂದು ಬಿಡುಗಡೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

1983ರಲ್ಲಿ ತೆರೆಕಂಡಿದ್ದ ಸುಭಾಷ್ ಘೈ ನಿರ್ದೇಶನದ ಹೀರೊ ಚಿತ್ರವನ್ನು ನಿಖಿಲ್ ಅಡ್ವಾಣಿ ಹಳೇ ಶೀರ್ಷಿಕೆಯೊಂದಿಗೆ ರಿಮೇಕ್ ಮಾಡಿದ್ದು ಈ ಚಿತ್ರಕ್ಕೆ ಸಲ್ಮಾನ್ ಖಾನ್ ಹಾಗೂ ಸುಭಾಷ್ ಘೈ ಬಂಡವಾಳ ಹೂಡಿದ್ದಾರೆ. ಹೊಸ ಹೀರೊ ಚಿತ್ರವು ಸೆಪ್ಟಂಬರ್ 25ರಂದು ತೆರೆಗೆ ಬರಲಿದೆ.

-ಕಪ್ಪು ಮೂಗುತ್ತಿ


Trending videos

Back to Top