CONNECT WITH US  

ಹಲವು ದಾಖಲೆಗಳ 'ಭಜರಂಗಿ ಭಾಯಿಜಾನ್' 500 ಕೋಟಿ ಗಳಿಕೆ

ಜುಲೈ 17ರಂದು ತೆರೆಕಂಡಿದ್ದ  ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯಿಜಾನ್ ಚಿತ್ರವು ವಿಶ್ವದಾದ್ಯಂತ ಬರೋಬ್ಬರಿ  500 ಕೋಟಿ ಕಲೆಕ್ಷನ್ ಮಾಡಿ ಹೊಸ ದಾಖಲೆ ನಿರ್ಮಿಸುವ ಹಾದಿಯಲ್ಲಿದೆ.

ಕಬೀರ್ ಖಾನ್ ನಿರ್ದೇಶನದ ಭಜರಂಗಿ ಭಾಯಿಜಾನ್ ಚಿತ್ರವು ಭಾರತದಲ್ಲೇ 300 ಕೋಟಿ ದೋಚಿದ್ದು ಈಗ ವಿಶ್ವದಾದ್ಯಂತ ವಿತರಣಾ ಹಕ್ಕನ್ನು ಪಡೆದಿರುವ ಇರೋಸ್ ಸಂಸ್ಥೆಯ ಮಾಹಿತಿಯ ಪ್ರಕಾರ ಚಿತ್ರದ ಒಟ್ಟು ಗಳಿಕೆ 500 ಕೋಟಿ ದಾಟಿದೆ ಎಂಬುದಾಗಿದೆ.

ಬಿಡುಗಡೆಯಾದ ಮೊದಲ ವಾರದಲ್ಲೇ ಬಾಕ್ಸಾಫೀಸ್'ನಲ್ಲಿ 100 ಕೋಟಿ ಗಳಿಸಿ ಬಾಲಿವುಡ್'ನಲ್ಲಿ ಹೊಸ ದಾಖಲೆ ನಿರ್ಮಿಸಿತ್ತು. ಅಲ್ಲದೇ ಕೇವಲ ಐದು ದಿನಗಳ ಅಂತರದಲ್ಲಿ 150 ಕೋಟಿ ಕ್ಲಬ್ ಸೇರಿದ ಚಿತ್ರ ಎಂಬ ಹೆಗ್ಗಳಿಕೆ ಬಿಬಿ ಚಿತ್ರದ್ದಾಗಿದೆ ಎಂದು ಇರೋಸ್ ಸಂಸ್ಥೆ ತಿಳಿಸಿದೆ.

ಜುಲೈ 19 ರಂದು 38.75 ಕೋಟಿ. ಆದಾಯ ಗಳಿಸುವ ಮೂಲಕ ಭಾರತೀಯ ಚಲನಚಿತ್ರದ ಇತಿಹಾಸದಲ್ಲೇ ಅತೀ ಹೆಚ್ಚು ಏಕ ದಿನ ಗಳಿಕೆ ಕಂಡ ಚಿತ್ರವೆಂಬ ಖ್ಯಾತಿಯು ಸಲ್ಲು ಮಿಯಾನ ಭಜರಂಗಿ ಭಾಯಿಜಾನ್ ಪಡೆದುಕೊಂಡಿದೆ. 

ಭಜರಂಗಿಯ ಅಬ್ಬರವು ವಿದೇಶಿ ನೆಲದಲ್ಲೂ ಜೋರಾಗಿದ್ದು, U.A.E ದೇಶಗಳ ಬಾಕ್ಸಾಫೀಸ್'ನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಚಿತ್ರ ಎಂಬ ದಾಖಲೆ ಮುಡಿಗೇರಿಸಿಕೊಂಡಿದೆ. ಹಾಗೆಯೇ UK ದೇಶಗಳ ಟಾಪ್ 10 ಕಲೆಕ್ಷನ್ ದಾಖಲೆಗಳನ್ನು ಮುರಿಯುವ ಹಾದಿಯಲ್ಲಿದೆ ಎಂದು ತಿಳಿದು ಬಂದಿದೆ.

2015ರ ಹಿಟ್ ಚಿತ್ರಗಳಾದ ಅನುಷ್ಕಾ ಶರ್ಮಾ ಅಭಿನಯದ NH10 ಹಾಗೂ ಕಂಗನಾ- ಮಾಧವನ್ ಜೋಡಿಯ ತನು ವೆಡ್ಸ್ ಮನು ರಿಟರ್ನ್ಸ್ ಚಿತ್ರಗಳನ್ನು ಇರೋಸ್ ಸಂಸ್ಥೆ ವಿಶ್ವದಾದ್ಯಂತ ರಿಲೀಸ್ ಮಾಡಿ ಬಾಕ್ಸಾಫೀಸ್'ನಲ್ಲಿ ಬಂಪರ್ ಕಲೆಕ್ಷನ್ ಮಾಡಿಕೊಂಡಿತ್ತು. ಆದರೆ ಭಜರಂಗಿಯ ಕಲೆಕ್ಷನ್'ನಿಂದ ಇರೋಸ್ ಸಂಸ್ಥೆಯ ವಿದೇಶಿ ಶೇರುಗಳು ಮತ್ತಷ್ಟು ಹೆಚ್ಚಿದೆ ಎಂದು ಎಂದು ವಿಶ್ಲೇಷಕರು ತಿಳಿಸಿದ್ದಾರೆ .

-ಕಪ್ಪು ಮೂಗುತ್ತಿ
 

Trending videos

Back to Top