CONNECT WITH US  

ಮಲಯಾಳಂನ ಸೂಪರ್ ಹಿಟ್ 'ಪ್ರೇಮಂ' ಚಿತ್ರಕ್ಕೆ ಕನ್ನಡ ಚಿತ್ರ ಸ್ಫೂರ್ತಿ!

ಮಾಲಿವುಡ್ ಬಾಕ್ಸಾಫೀಸ್ ಕೊಳ್ಳೆಹೊಡೆದ ಸೂಪರ್ ಹಿಟ್ ರೊಮ್ಯಾಂಟಿಕ್ 'ಪ್ರೇಮಂ' ಚಿತ್ರಕ್ಕೆ ಕನ್ನಡ ಚಿತ್ರವೊಂದರ ಕಥೆಯೇ ಸ್ಪೂರ್ತಿ ಎಂಬ ವಿಷಯ ಬೆಳಕಿಗೆ ಬಂದಿದೆ.

ಅಲ್ಫೋನ್ಸ್ ಪುತ್ರನ್ ನಿರ್ದೇಶಿಸಿರುವ ಮಲಯಾಳಂ ಚಿತ್ರದ ಕೆಲ ಸನ್ನಿವೇಶಗಳಿಗೆ ಕನ್ನಡ ಉಳಿದವರು ಕಂಡಂತೆ ಚಿತ್ರದ ಡಿಫೆರೆಂಟ್ ಲುಕ್ ಜೀವಾಳವಾಗಿದೆ.

ಉಳಿದವರು ಕಂಡಂತೆ ಚಿತ್ರದಲ್ಲಿ ನಾಯಕ ನಟ ರಕ್ಷಿತ್ ಶೆಟ್ಟಿ ರಗಡ್ ಪಾತ್ರದಲ್ಲಿ ಸಿಕ್ಕಾಪಟ್ಟೆ ಮಿಂಚಿದ್ದರು. ಅದೇ ರೀತಿಯ ಪಾತ್ರವನ್ನು ಪ್ರೇಮಂ ಚಿತ್ರದ 2ನೇ ಲವ್ ಸ್ಟೋರಿಯಲ್ಲಿ ನಾಯಕ ನಟ ನಿವಿನ್ ಪೌಲಿ ನಿರ್ವಹಿಸಿ ಮಾಲಿವುಡ್'ನಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದರು.

ಪ್ರೇಮಂ ಚಿತ್ರದಲ್ಲಿ ರಫ್ ಅಂಡ್ ಟಫ್ ಡೈಲಾಗ್ ಮೂಲಕ ಖಡಕ್ ಲುಕ್'ನಲ್ಲಿ ಕಾಣಿಸಿದ್ದ ನಿವಿನ್ ಪೌಲಿ ಪಾತ್ರವು ಕೆಲವು ಕಡೆ ಕನ್ನಡದಲ್ಲಿ ರಕ್ಷಿತ್ ಶೆಟ್ಟಿ ನಿರ್ವಹಿಸಿದ ಪಾತ್ರವನ್ನು ಹೋಲುತ್ತದೆ.

ಅಂದಹಾಗೆ ಕನ್ನಡದ ಉಳಿದವರು ಕಂಡಂತೆ ಚಿತ್ರವು ಮಲಯಾಳಂ ಭಾಷೆಗೆ ರಿಮೇಕ್ ಆಗುತ್ತಿದೆ. ಈ ಚಿತ್ರದಲ್ಲಿ ಹೀರೋವಾಗಿ ಇದೇ ನಿವಿನ್ ಪೌಲಿ ನಟಿಸಲಿದ್ದಾರೆ. 

-ಕಪ್ಪು ಮೂಗುತ್ತಿ

Trending videos

Back to Top